ಉಳ್ಳಾಲ: ರೆಡ್ ಕ್ರಾಸ್ ಎನ್‌ಎಸ್‌ಎಸ್ ಹಾಗೂ ರೋವರ್ಸ್ ರೆಂಜರ್ಸ್ ಆಶ್ರಯದಲ್ಲಿ, ಕಲ್ಲೂರು ಎಜುಕೇಶನ್ ಟ್ರಸ್ಟ್, ಲಯನ್ಸ್ ಕ್ಲಬ್ ಕದಳಿ ಮಂಗಳೂರು ಮತ್ತು ಯೆನೆಪೋಯ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಮತ್ತು ಹಲ್ಲು ತಪಾಸಣಾ ಶಿಬಿರ ನಡೆಯಿತು. ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕಲ್ಲೂರು ಎಜುಕೇಶನ್ ಟ್ರಸ್ಟ್ಅ ಧ್ಯಕ್ಷ ಇಬ್ರಾಹಿಂ ಕಲ್ಲೂರು ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಂಗಳೂರು ವಿವಿ ಎನ್‌ಎಸ್‌ಎಸ್ ಸಂಯೋಜಕ ಡಾ. ಶೇಷಪ್ಪ ಅಮೀನ್, ಯು.ಟಿ ಫರೀದ್ ಫೌಂಡೇಶನ್‌ನ ಯು.ಟಿ ಫರೀದ್, ರೋವರ್ ಘಟಕದ ಸಂಯೋಜಕ ಮಹಮದ್ ರಫೀಕ್ ರೇಂಜರ್ಸ್ ಸಂಯೋಜಕಿ ಡಾ. ಅಕ್ಷತಾ ಸುವರ್ಣ, ಐಕ್ಯೂಎಸಿ ಸಂಯೋಜಕಿ ಕವಿತಾ ಎಂ ಎಲ್ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಸಂಯೋಜಕ ಹೈದರಾಲಿ ಸ್ವಾಗತಿಸಿದರು. ಯೇನೇಪೋಯ ಕಾಲೇಜಿನ ಕ್ಯಾಂಪ್ ಅಧಿಕಾರಿ ರಾಜೇಶ್ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ ರಕ್ತದಾನದ ಮಹತ್ವ ವಿವರಿಸಿದರು. ಬಿಂದುಶ್ರೀ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಶ್ರೇಯ ವಂದಿಸಿದರು.