ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನವರಿಗೆ ಚೊಂಬು: ಶಾಸಕ ಯತ್ನಾಳ

KannadaprabhaNewsNetwork | Published : Apr 29, 2024 1:33 AM

ಸಾರಾಂಶ

ಈ ಬಾರಿಯ ಲೊಕಸಭೆ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷದ ಸೊನಿಯಾ ಗಾಂಧಿ ಅವರನ್ನು ಒಳಗೊಂಡು ಎಲ್ಲರನ್ನು ಚೊಂಬು ನೀಡುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಈ ಬಾರಿಯ ಲೊಕಸಭೆ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷದ ಸೊನಿಯಾ ಗಾಂಧಿ ಅವರನ್ನು ಒಳಗೊಂಡು ಎಲ್ಲರನ್ನು ಚೊಂಬು ನೀಡುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದರು.

ತಾಲೂಕಿನ ವಾಡಿ ಪಟ್ಟಣದ ಬಲರಾಮ ಚೌಕ್ ಹತ್ತಿರ ಇರುವ ಸೇವಾಲಾಲ ದೇವಸ್ಥಾನದ ಅವರಣದಲ್ಲಿ ನಡೆದ ಲೊಕಸಭಾ ಚುನಾವಣೆಯ ಅಂಗವಾಗಿ ಬಿಜೆಪಿ ಪಕ್ಷದ ಡಾ. ಉಮೇಶ ಜಾಧವ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೊದಿ ಅವರು ಕರ್ನಾಟಕಕ್ಕೆ ಚೊಂಬು ನೀಡಿದ್ದಾರೆ ಎಂದು ಬಿಜೆಪಿ ವಿರುದ್ದ ಹೊರಾಟ ಮಾಡುತ್ತಿದ್ದಾರೆ. ಆದರೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಸಾಬೀತು ಆದ ನಂತರ ಕಾಂಗ್ರೆಸ್ ಪಕ್ಷದ ಸೊನಿಯಾ ಗಾಂಧಿ ಅವರಿಂದ ಹಿಡಿದು ಎಲ್ಲಾ ಕಾಂಗ್ರೆಸ್‌ಗರಿಗೆ ಚೊಂಬು ನೀಡುವ ಯೊಜನೆ ಇದೆ ಎಂದರು.

ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೊದಿ ಅವರು ನಮ್ಮ ದೇಶದಲ್ಲಿ ಸಮಗ್ರ ಅಭಿವೃದ್ದಿ ಮಾಡುವ ಮೂಲಕ ಪ್ರಪಂಚದಲ್ಲಿ ಹೆಸರುವಾಸಿಯಾಗಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿಯೂ ಅನೇಕ ಅಭಿವೃದ್ದಿ ಮಾಡಿದ್ದು ಈ ಬಾರಿಯ ಚುನಾವಣೆಯಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿವೆ. ಹಿಂದೂ ಸಮಾಜದ ವಿವಿಧ ಜಾತಿ ಜನಾಂಗದವರು ಒಟ್ಟಾಗಿ ಕೂಡಿ ಕಡ್ಡಾಯವಾಗಿ ಬಿಜೆಪಿ ಪಕ್ಷಕ್ಕೆ ಮತದಾನ ಮಾಡಿ ಉಮೇಶ ಜಾಧವ ಅವರನ್ನು ಆರಿಸಿ ತಂದರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗುತ್ತಾರೆ ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಹಿಂದುಗಳಿಗೆ ಉಳಿಗಾಲವಿಲ್ಲ ಆದ್ದರಿಂದ ಎಲ್ಲಾ ಹಿಂದೂ ಬಾಂದವರು ಬಿಜೆಪಿ ಪಕ್ಷಕ್ಕೆ ಮತ ಹಾಕುವುದರ ಮೂಲಕ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟಿಲ್, ಅವಿನಾಶ ಜಾಧವ, ಬಾಬುರಾವ ಚವ್ವಾಣ, ಶರಣಪ್ಪ ತಳವಾರ, ವಿಠಲ್ ನಾಯಕ, ರವೀಂದ್ರ ಸಜ್ಜನಶೆಟ್ಟಿ, ಲಿಂಗಾರೆಡ್ಡಿ ಭಾಸರೆಡ್ಡಿ, ಶಿವಲಿಂಗಪ್ಪ ವಾಡೇದ, ಶಂಕರ ಚವ್ವಾಣ, ರವಿ ಕಾರಬಾರಿ, ರಾಜು ಮುಕ್ಕಣ್ಣ, ವೀರಣ್ಣಯಾರಿ, ಸುರೇಶ ರಾಠೋಡ ಇತರರು ಇದ್ದರು.

Share this article