ಮಾಗೋಡು ಸೊಸೈಟಿಗೆ ಮೂಗನಹಳ್ಳಿ ರಾಮು ಆಯ್ಕೆ

KannadaprabhaNewsNetwork |  
Published : Dec 31, 2025, 01:15 AM IST
೩೦ಶಿರಾ೫: ಶಿರಾ ತಾಲೂಕಿನ ಮಾಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ವಿಜೇತರಾದ ಮೂಗನಹಳ್ಳಿ ರಾಮು ಹಾಗೂ ಎಸ್.ಹೆಚ್ ಮೂರ್ತಿ ಗಿರಿನಾಥನಹಳ್ಳಿ ಅವರನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷರಾದ ಚಿದಾನಂದ್ ಎಂ ಗೌಡ ಅವರು ಸನ್ಮಾನಿಸಿ ಅಭಿನಂದಿಸಿದರು. | Kannada Prabha

ಸಾರಾಂಶ

ತಾಲೂಕಿನ ಮಾಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಹಿಂದುಳಿದವರ್ಗ ಬಿ ಕ್ಷೇತ್ರದಲ್ಲಿ ಶಿರಾ ತಾಲೂಕು ಬಿಜೆಪಿ ರೈತಮೋರ್ಚಾ ಪ್ರಧಾನಕಾರ್ಯದರ್ಶಿ ಮೂಗನಹಳ್ಳಿ ರಾಮು ಅವರು ೩೭೮ ಮತಗಳನ್ನು ಪಡೆದು ಜಯಶಾಲಿಯಾದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕಿನ ಮಾಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಹಿಂದುಳಿದವರ್ಗ ಬಿ ಕ್ಷೇತ್ರದಲ್ಲಿ ಶಿರಾ ತಾಲೂಕು ಬಿಜೆಪಿ ರೈತಮೋರ್ಚಾ ಪ್ರಧಾನಕಾರ್ಯದರ್ಶಿ ಮೂಗನಹಳ್ಳಿ ರಾಮು ಅವರು ೩೭೮ ಮತಗಳನ್ನು ಪಡೆದು ಜಯಶಾಲಿಯಾದರು.

ಇದೇ ವೇಳೆ ಸಾಮಾನ್ಯ ಕ್ಷೇತ್ರದ ಎಸ್.ಎಚ್ ಮೂರ್ತಿ ಗಿರಿನಾಥನಹಳ್ಳಿ ೩೪೮ ಮತಗಳನ್ನು ಪಡೆದು ಜಯಶೀಲರಾಗಿದ್ದು, ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷರಾದ ಚಿದಾನಂದ್ ಎಂ ಗೌಡ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಗ್ರಾಮೀಣ ಭಾಗದ ರೈತ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ಓಬಿಸಿ ಘಟಕದ ಅಧ್ಯಕ್ಷ ಮಾಗೋಡು ಪ್ರತಾಪ್, ಜಿಲ್ಲಾ ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಮೂರ್ತಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಈರಣ್ಣ ಪಟೇಲ್, ನಗರ ಅಧ್ಯಕ್ಷ ಗಿರಿಧರ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮು ಮೂಗನಹಳ್ಳಿ, ಎಸ್ಟಿ. ಮೋರ್ಚಾ ಅಧ್ಯಕ್ಷ ತೇಜೇಶ್ವರ್, ಜಿಲ್ಲಾ ಕಾರ್ಯದರ್ಶಿ ಗೋಪಿಕುಂಟೆ ಕುಮಾರ್ ಮೇಷ್ಟ್ರು, ನಗರಸಭಾ ಸದಸ್ಯ ರಂಗರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಎಂ ಶಿವಲಿಂಗಯ್ಯ, ಬೊಪ್ಪರಾಯಪ್ಪ, ತಾಲೂಕು ಉಪಾಧ್ಯಕ್ಷರಾದ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮದ್ದಕ್ಕನಹಳ್ಳಿ ರಂಗನಾಥ್, ಮಹಿಳಾ ಮೋರ್ಚಾ ನಾಗರತ್ನಮ್ಮ, ಮುಖಂಡರಾದ ಸಂತೇಪೇಟೆ ನಟರಾಜ್, ಹನುಮಂತನಾಯ್ಕ, ಮುರುಳಿ, ಕರಿಯಣ್ಣ, ಈರಣ್ಣ, ಬಾಂಬೇ ನಾಗಣ್ಣ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ