ಶಾಂತಿ, ಸಹಬಾಳ್ವೆ ಸಾರಲು ಮಹ್ಮದ್ ಪೈಗಂಬರ್ ಜಯಂತಿ

KannadaprabhaNewsNetwork |  
Published : Oct 17, 2025, 01:01 AM IST
16ಕೆಪಿಎಲ್28 ಸುದ್ದಿಗೋಷ್ಠಿಯಲ್ಲಿ ಸಲೀಂ ಅಹ್ಮದ್ ಅವರು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಮಹ್ಮದ್ ಪೈಗಂಬರ ಅವರ ಶಾಂತಿ ಸಂದೇಶ ಸಾರುವ ಮಹದುದ್ದೇಶ ಹೊಂದಲಾಗಿದೆ

ಕೊಪ್ಪಳ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಅ.18ರಂದು ಹಮ್ಮಿಕೊಂಡಿರುವ ಮಹ್ಮದ್ ಪೈಗಂಬರ ಅವರ 1500 ನೇ ಜನ್ಮದಿನೋತ್ಸವವನ್ನು ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಸಾರಲು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವೂ ಇಲ್ಲ ಮತ್ತು ಶಕ್ತಿ ಪ್ರದರ್ಶನವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದು ಯಾವುದೇ ರಾಜಕೀಯ ಪಕ್ಷದಿಂದ ನಡೆಯುತ್ತಿಲ್ಲ. ರಾಜಕೀಯೇತರವಾಗಿ ಸಂಘಟನೆ ಮಾಡಲಾಗಿದೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಲಿ ಬೇಡಿಕೆ ಈಡೇರುವುದಾಗಲಿ ಮಾಡುತ್ತಿಲ್ಲ ಎಂದರು.

ಧರ್ಮ ಮೀರಿದ ಶಾಂತಿ ಬಯಸುವ ಮತ್ತು ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಉದ್ಧೇಶದಿಂದ ಎಲ್ಲ ಧರ್ಮ ಗುರುಗಳನ್ನು ಅಹ್ವಾನ ಮಾಡಿ ಅವರ ನೇತೃತ್ವದಲ್ಲಿ ಮಹ್ಮದ್ ಪೈಗಂಬರ ಅವರ ಶಾಂತಿ ಸಂದೇಶ ಸಾರುವ ಮಹದುದ್ದೇಶ ಹೊಂದಲಾಗಿದೆ ಎಂದರು.

ಖ್ವಾಜಾಬಂದೇನವಾಜ ಗುರುಗಳು ಸಜ್ಜಾದ ನಸೀನ್ ಅಲಿ ಹುಸೇನಿ, ಶಿರಹಟ್ಟಿ ಫಕೀರೇಶ್ವರ ಸ್ವಾಮೀಜಿಗಳು, ಸವಣೂರಿನ ಚನ್ನಬಸವ ಮಹಾಸ್ವಾಮೀಜಿಗಳು, ಕಲಬುರಗಿಯ ದೊಡ್ಡಪ್ಪ ಅಪ್ಪ ಸ್ವಾಮೀಜಿಗಳು ಸಾನ್ ವಹಿಸುವರು. ಅಧ್ಯಕ್ಷತೆಯನ್ನು ಸಜ್ಜಾದ ನಸೀನ್ ಹೈದರ ಪಾಶಾ ವಹಿಸುವರು. ಕಾನೂನು ಸಚಿವ ಎಚ್.ಕೆ. ಪಾಟೀಲ್, ಸಚಿವರಾದ ಸತೀಶ ಜಾರಕೀಹೊಳಿ, ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಬಿ.ಕೆ. ಹರಿಪ್ರಸಾದ, ಬಸವರಾಜ ರಾಯರಡ್ಡಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಸೇರಿದಂತೆ ಅನೇಕರು ಭಾಗವಹಿಸುವರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಆಹ್ವಾನ ಮಾಡಲಾಗಿದ್ದು, ಅವರ ವೈಯಕ್ತಿಕ ರಾಜಕೀಯ ಇಲ್ಲಿ ಚರ್ಚೆಗೆ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವ ಜಮೀರ್ ಅಹ್ಮದ್ ಫೋಟೋ ಹಾಕದಿರುವ ಕುರಿತು ಪ್ರಶ್ನೆ ಮಾಡಿದಾಗ, ಇದು ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ ಎಂದಷ್ಟೇ ಹೇಳಿದರು.

ಸಜ್ಜಾದ ನೂರೂಲ್ಲಾಖಾದ್ರಿ, ಕೆ. ಬಸವರಾಜ ಹಿಟ್ನಾಳ, ಡಿ. ಬಸವರಾಜ, ಅಲ್ತಾಪ ಕಿತ್ತೂರು, ಎಸ್. ಜಿ. ಮಂಕಾಂದರ, ದಾದಾ ಖಾಜಿ, ಕೆ.ಎಂ. ಸಯ್ಯದ, ಕಾಟನ ಪಾಶಾ, ಅಕ್ಬರ್ ಪಾಶಾ ಪಲ್ಟನ್, ಭಾಷುಸಾಬ ಕತೀಬ, ಮಾನ್ವಿ ಪಾಶಾ, ಸುರೇಶ ದಾಸರಡ್ಡಿ, ಜ್ಯೋತಿ ಗೊಂಡಬಾಳ, ಸಾದಿಕ್ ಅತ್ತಾರ, ಆರ್.ಎಂ. ರಫಿ ಇದ್ದರು. ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ
ಹುಟ್ಟು ಸಾವಿನ ಮಧ್ಯೆ ಸಾಧನೆ ಮಹತ್ವದ್ದು: ಡಾ.ಮುರುಗೇಶ ನಿರಾಣಿ