ಮೂಲ್ಕಿ ಅರಸು ಕಂಬಳ ಸಮಾರೋಪ: ಬಹುಮಾನ ವಿತರಣೆ

KannadaprabhaNewsNetwork | Updated : Dec 27 2023, 01:32 AM IST

ಸಾರಾಂಶ

ಮೂಲ್ಕಿ ಸೀಮೆಯ ಅರಸು ಕಂಬಳ ಮುಕ್ತಾಯವಾಯಿತು. ಕೂಟದಲ್ಲಿ ಒಟ್ಟು 152 ಜೊತೆ ಕೋಣಗಳು ಭಾಗವಹಿಸಿದ್ದವು. ವಿಜೇತ ಕೋಣಗಳಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆಯ ಬಾಕಿಮಾರು ಗದ್ದೆಯಲ್ಲಿ ಜರುಗಿದ ಮೂಲ್ಕಿ ಸೀಮೆಯ ಅರಸು ಕಂಬಳ ಮುಕ್ತಾಯವಾಗಿದ್ದು, ವಿಜೇತರಿಗೆ ಸೀಮೆಯ ಅರಮನೆಯಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು ವಹಿಸಿದ್ದರು.ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಗೌತಮ್ ಜೈನ್ ಮೂಲ್ಕಿ ಅರಮನೆ, ಆಶಾಲತಾ, ಪವಿತ್ರೇಶ್ ಜೈನ್, ಕಂಬಳ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಕೋಲ್ನಾಡುಗುತ್ತು, ವಕೀಲರಾದ ಚಂದ್ರಶೇಖರ್, ಕೃಷ್ಣ ಹೆಬ್ಬಾರ್, ಉಮೇಶ್ ಪೂಜಾರಿ, ಮಹಿಮ್ ಹೆಗ್ಡೆ, ಕಿರಣ್ ಕುಮಾರ್ ಪಡುತೋಟ ಮತ್ತಿತರರು ಉಪಸ್ಥಿತರಿದ್ದರು. ವಿಜಯಕುಮಾರ್ ಕಂಗಿನ ಮನೆ, ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.

ಮೂಲ್ಕಿ ಅರಸು ಕಂಬಳ ಫಲಿತಾಂಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: 152

ಕನೆಹಲಗೆ: 6 ಜೊತೆ, ಅಡ್ಡಹಲಗೆ: 2 ಜೊತೆ, ಹಗ್ಗ ಹಿರಿಯ: 20 ಜೊತೆ, ನೇಗಿಲು ಹಿರಿಯ: 24 ಜೊತೆ, ಹಗ್ಗ ಕಿರಿಯ: 27 ಜೊತೆ, ನೇಗಿಲು ಕಿರಿಯ: 73 ಜೊತೆ.

ಕನೆಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ, ದ್ವಿತೀಯ: ಮೂಲ್ಕಿ ಕಕ್ವಗುತ್ತು ರಂಗನಾಥ್ ಶೆಟ್ಟಿ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ, ದ್ವಿತೀಯ: ನಾರಾವಿ ರಕ್ಷಿತ್ ಯುವರಾಜ್ ಜೈನ್, ಹಲಗೆ ಮುಟ್ಟಿದವರು: ಭಟ್ಕಳ ಹರೀಶ್.

ಹಗ್ಗ ಹಿರಿಯ: ಪ್ರಥಮ: ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ, ಓಡಿಸಿದವರು: ಪಟ್ಟೆ ಗುರುಚರಣ್, ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ ‘ಎ’, ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್.

ಹಗ್ಗ ಕಿರಿಯ: ಪ್ರಥಮ: ಮೂಡುಬಿದ್ರೆ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ. ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕಾಳಿಕ್ ದಿನಕರ್ ಶೆಟ್ಟಿ ‘ಎ’ ಓಡಿಸಿದವರು: ಕಾವೂರು ದೋಟ ಸುದರ್ಶನ್.

ನೇಗಿಲು ಹಿರಿಯ: ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ ‘ಎ’, ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ, ದ್ವಿತೀಯ: ಬೋಳದಗುತ್ತು ಸತೀಶ್ ಶೆಟ್ಟಿ ‘ಬಿ’, ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.

ನೇಗಿಲು ಕಿರಿಯ: ಪ್ರಥಮ: ಕಟೀಲು ಕೊಡೆತ್ತೂರು ಕಿನ್ನಚ್ಚಿಲ್ ಲತಾ ಪ್ರಸಾದ್ ಶೆಟ್ಟಿ ‘ಎ’, ಓಡಿಸಿದವರು: ಪಟ್ಟೆ ಗುರುಚರಣ್, ದ್ವಿತೀಯ: ಕೋಟ ಮನೂರು ಪಡುಕೆರೆ ದಿ.ಶೀನ ಪೂಜಾರಿ, ಓಡಿಸಿದವರು: ರಾಘವೇಂದ್ರ ಕೋಟ ಗಿಳಿಯಾರು.

Share this article