ಕನ್ನಡಪ್ರಭ ವಾರ್ತೆ ಮೂಲ್ಕಿ
ಪೂರ್ವಜರು ಬದುಕಿನ ಉದ್ದಕ್ಕೂ ರೋಗ ರಹಿತ ದಿನಗಳಿಂದ ಆರೋಗ್ಯ ಪೂರ್ಣ ಸುಖ, ಸಂತೋಷದ ಬದುಕನ್ನು ಕಳೆಯಲು ಪರಿಶೋಧನೆ ಮಾಡಿ ನಮಗೆ ತಿಳಿಸಿರುವ ಯೋಗ ಕಲೆ ಯಾವುದೇ ಧರ್ಮ, ಜಾತಿ,ಲಿಂಗ ಬೇಧ ಇಲ್ಲದೆ ಮಾನವೀಯತೆಯ ನೆಲೆ ಸಾರುವ ಸಾಧನವೆಂದು ಯೋಗ ಗುರು ಜಯ ಮುದ್ದು ಶೆಟ್ಟಿ ಹೇಳಿದ್ದಾರೆ.ನಗರ ಪಂಚಾಯಿತಿ ಮೂಲ್ಕಿ ಹಾಗು ಅಖಿಲ ಭಾರತ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಮೂಲ್ಕಿ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಮೂಲ್ಕಿ ಗಾಂಧಿ ಮೈದಾನದಲ್ಲಿ ಏಳು ದಿನಗಳ ಕಾಲ ನಡೆದ ಉಚಿತ ಬೃಹತ್ ಪ್ರಾಣಾಯಾಮ ಹಾಗು ಯೋಗ ಶಿಬಿರದ ಸಮಾಪನಾ ಸಂದರ್ಭ ಮಾತನಾಡಿದರು.
ಯೋಗ ಗುರು ಜಯ ಮುದ್ದು ಶೆಟ್ಟಿ ಆವರ ಮಾರ್ಗದರ್ಶನದಲ್ಲಿ ನಡೆದ ಈ ಶಿಬಿರದಲ್ಲಿ ಸ್ವತಃ ಏಳು ದಿನಗಳ ಕಾಲ ಶಿಬಿರದಲ್ಲಿ ಭಾಗವಹಿಸಿದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಆಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅವರು ಯೋಗ ಗುರುಗಳನ್ನು ಸಮ್ಮಾನಿಸಿ ಗೌರವಿಸಿದರು.ಮೂಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಪಕ್ಷಿಕೆರೆ, ಹೆಜಮಾಡಿ, ಮಂಗಳೂರು ಹಾಗು ಹೆಜಮಾಡಿ ಪಡುಬಿದ್ರೆ ಮುಂತಾದೆಡೆಗಳ ಸುಮಾರು ೭೦೦ಕ್ಕೂ ಮಿಕ್ಕಿದ ಜನರು ಶಿಬಿರದಲ್ಲಿ ಭಾಗವಹಿಸಿ ಸರಳಾಭ್ಯಾಸದ ಮೂಲಕ ಯೋಗ ಪ್ರಾಣಾಯಾಮದ ಮಾಹಿತಿ ಪಡೆದರು.ಸಂಯೋಜನೆ ಗೊಳಿಸಿದ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಅಖಿಲ ಭಾರತ ಸಾಹಿತ್ಯ ಪರಿಷದ್ ಅಧ್ಯಕ್ಷ ಎಂ. ಸರ್ವೋತ್ತಮ ಅಂಚನ್, ವಿಶ್ವಕರ್ಮ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮಧು ಆಚಾರ್ಯ, ಡಾ.ಗಣೇಶ್ ಅಮೀನ್ ಸಂಕಮಾರ್, ದೇವಪ್ರಸಾದ್ ಪುನರೂರು, ಭಾಗ್ಯವಾನ್ ಸನಿಲ್, ವೈ.ಎನ್. ಸಾಲ್ಯಾನ್,ಪಡುಬಿದ್ರಿಯ ಡಾ. ಎನ್.ಟಿ. ಅಂಚನ್, ನಗರ ಪಂಚಾಯಿತಿ ಮಾಜಿ ಆಧ್ಯಕ್ಷ ಸುನೀಲ್ ಆಳ್ವ , ಸುಭಾಷ್ ಶೆಟ್ಟಿ, ಯಾದವ ದೇವಾಡಿಗ, ಪೃಥ್ವಿರಾಜ್ ಆಚಾರ್ಯ, ಸಂಪತ್ ಕುಮಾರ್ ಕಾರ್ನಾಡ್, ಜಯ ಕುಮಾರ್ ಕುಬೆವೂರು ,ಸತೀಶ್ ನಾನಿಲ್ ಮತ್ತಿತರರು ಶಿಬಿರದಲ್ಲಿ ಸಹಕರಿಸಿದ್ದರು.