ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಎಕ್ಕಾರು ಗ್ರಾಮ ಪಂಚಾಯತಿ ಅರಿವು ಕೇಂದ್ರದಲ್ಲಿ ಜರಗಿದ ಬೇಸಿಗೆ ಶಿಬಿರವನ್ನು ಸುರತ್ಕಲ್ ಗೋವಿಂದಾಸ್ ಕಾಲೇಜಿನ ಉಪನ್ಯಾಸಕ ಡಾ. ಸಂತೋಷ್ ಆಳ್ವ ಉದ್ಘಾಟಿಸಿ ಸಂವಹನ ಕೌಶಲ್ಯದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಪ್ರಾಪ್ತಿ ತುಳಸಿ ಪ್ರಕಾಶ್ವ ಅವರು ಪೇಪರ್ ಕ್ರಾಫ್ಟ್ ಬಗ್ಗೆ, ಕಾಂಚನ ಗಣೇಶ್ ಅವರು ಯೋಗ ತರಗತಿ ನಡೆಸಿದರು.
ಮೂಲ್ಕಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಎಕ್ಕಾರು ಗ್ರಾಮ ಪಂಚಾಯತಿ ಅರಿವು ಕೇಂದ್ರದಲ್ಲಿ ಜರಗಿದ ಬೇಸಿಗೆ ಶಿಬಿರವನ್ನು ಸುರತ್ಕಲ್ ಗೋವಿಂದಾಸ್ ಕಾಲೇಜಿನ ಉಪನ್ಯಾಸಕ ಡಾ. ಸಂತೋಷ್ ಆಳ್ವ ಉದ್ಘಾಟಿಸಿ ಸಂವಹನ ಕೌಶಲ್ಯದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಪ್ರಾಪ್ತಿ ತುಳಸಿ ಪ್ರಕಾಶ್ವ ಅವರು ಪೇಪರ್ ಕ್ರಾಫ್ಟ್ ಬಗ್ಗೆ, ಕಾಂಚನ ಗಣೇಶ್ ಅವರು ಯೋಗ ತರಗತಿ ನಡೆಸಿದರು. ಭಾರತಿ ಶೆಟ್ಟಿ ಲಘು ಸಂಗೀತ ಅಭಿನಯ ಗೀತೆ, ಉಷಾ ಹೂಕುಂಡ, ಮುಖವಾಡಗಳ ರಚನೆ, ಪ್ರೇರಣ ವೈಷ್ಣವಿಯವರು ಗೂಡು ದೀಪ ರಚನೆ ಹೇಳಿಕೊಟ್ಟರು. ಸಮಾರೋಪ ಸಮಾರಂಭವನ್ನು ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಉದಯಚಂದ್ರ ಉಡುಪ ಭಾರತೀಯ ಸೇನೆಯ ಬಗ್ಗೆ ಮಾಹಿತಿ ನೀಡಿದರು. ಅಂಚೆ ಅಧಿಕಾರಿ ಸುರೇಖಾ ಅವರು ಅಂಚೆ ಇಲಾಖೆಯ ಮಾಹಿತಿಯನ್ನು ನೀಡಿದರು. ಮಕ್ಕಳು ಕ್ರಾಫ್ಟ್ ಬೇಲೂನು ತೋರಣ ಕಟ್ಟುವುದರ ಮೂಲಕ ಗ್ರಂಥಾಲಯವನ್ನು ಅಲಂಕರಿಸಿದರು. ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್ ಆಚಾರ್ಯ ಶುಭಹಾರೈಸಿದರು. ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ ಎಂ ಪ್ರಸ್ತಾವನೆಗೈದರು. ಗ್ರಂಥ ಪಾಲಕಿ ಹೇಮಲತಾ ಶರ್ಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.