ಮೂಳೂರು-ಅಡ್ಡೂರು ಜೋಡುಕರೆ ಗುರುಪುರ ಕಂಬಳ ಇಂದು

KannadaprabhaNewsNetwork |  
Published : Apr 04, 2026, 02:45 AM IST
ಮೂಳೂರು-ಅಡ್ಡೂರು ಜೋಡುಕರೆ ಗುರುಪುರ ಕಂಬಳ ಇಂದು  | Kannada Prabha

ಸಾರಾಂಶ

ಇನಾಯತ್ ಅಲಿ ನೇತೃತ್ವದಲ್ಲಿ ಗುರುಪುರ ಮಾಣಿಬೆಟ್ಟು ಗುತ್ತುನಲ್ಲಿ 3ನೇ ವರ್ಷದ ಹೊನಲು ಬೆಳಕಿನ ಮೂಳೂರು-ಅಡ್ಡೂರು ಜೋಡುಕರೆ ಕಂಬಳವು ಎಪ್ರಿಲ್‌ 4 ರಂದು ನಡೆಯಲಿದೆ.

ಮೂಲ್ಕಿ: ಇನಾಯತ್ ಅಲಿ ನೇತೃತ್ವದಲ್ಲಿ ಗುರುಪುರ ಮಾಣಿಬೆಟ್ಟು ಗುತ್ತುನಲ್ಲಿ 3ನೇ ವರ್ಷದ ಹೊನಲು ಬೆಳಕಿನ ಮೂಳೂರು-ಅಡ್ಡೂರು ಜೋಡುಕರೆ ಕಂಬಳವು ಎಪ್ರಿಲ್‌ 4 ರಂದು ನಡೆಯಲಿದೆ. ಈ ಬಾರಿ ಪ್ರಶಸ್ತಿ ಪಡೆದವರಿಗೆ ಚಿನ್ನದ ಪವನ್‌ ಹಾಗೂ ಭಾಗವಹಿಸುವ ಎಲ್ಲ ವಿಭಾಗದ ಕೋಣಗಳ ಮಾಲೀಕರಿಗೆ ಬೆಳ್ಳಿಯ ನಾಣ್ಯ ಹಾಗೂ 30 ಕೆಜಿ ಹುರುಳಿಯನ್ನು ನೀಡಲಾಗುವುದು. ಕನೆ ಹಲಗೆ ವಿಭಾಗದಲ್ಲಿ 7. 1/2 ಕೋಲು ನೀರು ಹಾಯಿಸಿದಲ್ಲಿ ಪ್ರಥಮ1 ಪವನ್‌ ಚಿನ್ನ,6. 1/2 ಕೋಲು ನೀರು ಹಾಯಿಸಿದಲ್ಲಿ ದ್ವಿತೀಯ 1/2 ಪವನ್‌ ಚಿನ್ನ, ಹಗ್ಗ ವಿಭಾಗ ಹಿರಿಯ, ಕಿರಿಯ,ನೇಗಿಲು ವಿಭಾಗ ಹಿರಿಯ, ಕಿರಿಯ ಹಾಗೂ ಅಡ್ಡ ಹಲಗೆ ವಿಭಾಗದಲ್ಲಿ ಪ್ರಥಮ ಬಂದವರಿಗೆ 1 ಪವನ್‌, ದ್ವಿತೀಯ ಸ್ಥಾನದವರಿಗೆ 1/2 ಪವನ್‌ ಚಿನ್ನ, ಕನೆ ಹಲಗೆ ವಿಭಾಗದಲ್ಲಿ ನೀರು ಹಾಯಿಸಿದ ಎಲ್ಲ ಕೋಣಗಳಿಗೆ 1 ಗ್ರಾಂ ಚಿನ್ನದ ಪದಕ ನೀಡಲಾಗುವುದುದೆಂದು ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್‌ ಆಲಿ ತಿಳಿಸಿದ್ದಾರೆ. ಮಾಂಸಾಹಾರಿ ಊಟ ವ್ಯವಸ್ಥೆ: ಸಾಮಾನ್ಯವಾಗಿ ಕಂಬಳಗಳಲ್ಲಿ ಸಸ್ಯಾಹಾರಿ ಊಟದ ವ್ಯವಸ್ಥೆ ಇದ್ದು ಇಲ್ಲಿ ಕಂಬಳಕ್ಕೆ ಕೋಣಗಳನ್ನು ತರುವವರಿಗೆ ಮತ್ತು ಸಾರ್ವಜನಿಕರಿಗೆ ಮಾಂಸಾಹಾರಿ ಊಟದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು ಲಘು ಉಪಾಹಾರದ ಜೊತೆಗೆ ಮಾಂಸಾಹಾರಿ ಊಟದ ಸಂಪ್ರದಾಯವು ಕಂಬಳದ ಇತಿಹಾಸದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದೆ. ಏಪ್ರಿಲ್ 4ರಂದು ಬೆಳಿಗ್ಗೆ 8:30ಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಕಂಬಳವನ್ನು ಉದ್ಘಾಟಿಸಲಿದ್ದು ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಕಂಬಳ ಸಮಿತಿಯ ಅಧಯ್ಕ್ಷ ಇನಾಯತ್‌ ಆಲಿ ವಹಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ,ಬಮುಲ್‌ ನ ಅಧ್ಯಕ್ಷ ಡಿ.ಕೆ. ಸುರೇಶ್‌, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಐವನ್‌ ಡಿ ಸೋಜ,ಶಾಸಕ ಅಶೋಕ್‌ ಕುಮಾರ್‌ ರೈ, ಮಾಜಿ ಸಚಿವರಾದ ಬಿ ರಮಾನಾಥ ರೈ, ವಿನಯ ಕುಮಾರ್‌ ಸೊರಕೆ,ಕೆ ಅಭಯಚಂದ್ರ ಜ್ಯೆನ್‌, ಮೆಸ್ಕಾಂ ಅಧ್ಯಕ್ಷ ಹರೀಶ್‌ ಕುಮಾರ್‌ , ಎಸ್‌ ಸಿ ಡಿ ಸಿ ಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ ಎನ್‌ ರಾಜೇಂದ್ರ ಕುಮಾರ್‌, ಮಾಜಿ ಶಾಸಕರಾದ ಜೆ ಆರ್‌ ಲೋಬೋ, ಶಕುಂತಲಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್‌ ರೈ, ರಕ್ಷಿತ್‌ ಶಿವರಾಂ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಪೂಜಾರಿ, ನಾಡೋಜ.ಡಾ. ಜಿ ಶಂಕರ್‌ ಯುವ ಕಾಂಗ್ರೆಸ್‌ ಮಾಜಿ ರಾಜ್ಯಾಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಸುಡುಮದ್ದು ಪ್ರದರ್ಶನ: ಕೇರಳದ ಪ್ರಸಿದ್ಧ ಚೆಂಡೆವಾದನ, ಯಕ್ಷಗಾನ ಸಾಧಕರಿಗೆ ಸನ್ಮಾನ ಮತ್ತು ರಾತ್ರಿ ಹೊನಲು ಬೆಳಕಿನಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ. ಕಳೆದ ವರ್ಷದ ಕಂಬಳದಲ್ಲಿ ಭಾಗವಹಿಸಿದ್ದ ಬಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಕಂಬಳ ಕ್ರೀಡೆಯನ್ನು ಮೈಸೂರು ದಸರಾ ವೇದಿಕೆಗೆ ತಲುಪಿಸುವುದಾಗಿ ತಿಳಿಸಿದ್ದು ತಾಂತ್ರಿಕ ಕಾರಣಗಳಿಂದ ಜಾರಿಗೆ ತರಲು ಅಸಾಧ್ಯವಾಗಿದ್ದು ಮುಂದಿನ ದಸರಾ ಸಂದರ್ಭದಲ್ಲಿ ಮ್ಯೆಸೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಇನಾಯತ್ ಅಲಿ ಅವರ ಪ್ರಯತ್ನ ನಡೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರು ವರ್ಷದಲ್ಲಿ 2809 ಜನ ರೈತರ ಸಾವು: ಕೇಂದ್ರ ಸಚಿವ ಸೋಮಣ್ಣ
ಕಾಂಗ್ರೆಸ್‌ನಷ್ಟು ಲಜ್ಜೆಗೇಡಿ ಸರ್ಕಾರ ನಾನು ನೋಡಿಲ್ಲ: ಸಂಸದ ಜಿಗಜಿಣಗಿ