ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ರಾಷ್ಟ್ರೀಯ ಪ್ರಶಸ್ತಿಯ ಕಿರೀಟ

KannadaprabhaNewsNetwork |  
Published : Feb 12, 2024, 01:32 AM ISTUpdated : Feb 12, 2024, 03:23 PM IST
ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸೇವೆಗೆ ನೀಡಲಾಗುವ ಲಕ್ಷ್ಯ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ತಂಡ.  | Kannada Prabha

ಸಾರಾಂಶ

ರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸೇವೆಗೆ ಲಕ್ಷ್ಯ ಕಾರ್ಯಕ್ರಮದಡಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದ್ದು, ರಾಷ್ಟ್ರೀಯ ಆರೋಗ್ಯ ತಂಡ (ಎನ್‌ಎಚ್‌ಎಂ) ಪ್ರಸ್ತುತ ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಶರಣು ಸೊಲಗಿ ಮುಂಡರಗಿ

ರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸೇವೆಗೆ ಲಕ್ಷ್ಯ ಕಾರ್ಯಕ್ರಮದಡಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದ್ದು, ರಾಷ್ಟ್ರೀಯ ಆರೋಗ್ಯ ತಂಡ (ಎನ್‌ಎಚ್‌ಎಂ) ಪ್ರಸ್ತುತ ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಮಕ್ಕಳ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಹೆರಿಗೆ ಕೊಠಡಿಯ ಗುಣಮಟ್ಟದಲ್ಲಿ ಶೇ. 92ರಷ್ಟು ಹಾಗೂ ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಶೇ. 84 ಗುರಿ ತಲುಪಿದ್ದರ ಅಂಶವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ಹೆರಿಗೆ ಕೊಠಡಿ ನಿರ್ವಹಣೆ ಮತ್ತು ಉಪಚಾರ ಸಿಬ್ಬಂದಿ ಸೇವೆ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಸಾಧನೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಈ ರಾಷ್ಟ್ರೀಯ ಆರೋಗ್ಯ (ಎನ್‌ಎಚ್‌ಎಂ) ತಂಡವು ಆಸ್ಪತ್ರೆಯ ಪ್ರಗತಿ, ಸ್ವಚ್ಛತೆ ಮತ್ತು ಹೆರಿಗೆ ಆಸ್ಪತ್ರೆಯಲ್ಲಿನ ಸೇವಾ ಕಾರ್ಯವನ್ನು ಪರಿಶೀಲಿಸಿ, ಶಸ್ತ್ರ ಚಿಕಿತ್ಸೆಯ ಉಪಕರಣ, ಸಿಬ್ಬಂದಿ, ರೋಗಿಗಳ ಬಗ್ಗೆ ವಹಿಸುವ ಕಾಳಜಿ, ವೈದ್ಯರು ಹಾಗೂ ಕಾರ್ಯನಿರ್ವಹಿಸುವ ಸಿಸ್ಟರ್‌ಗಳ ಗುಣ, ನಡತೆಯೂ ಸೇರಿದಂತೆ ಸಿಬ್ಬಂದಿ ಕಾರ್ಯ ವೈಖರಿಯನ್ನು ಪರಿಶೀಲಿಸಿದ ಆನಂತರ ಪ್ರಶಸ್ತಿಗೆ ಆಯ್ಕೆ ಮಾಡಿದೆ.

2023 ಅ. 27ರಂದು ತಂಡ ಆಗಮಿಸಿ ಸಂಪೂರ್ಣವಾಗಿ ಪರಿಶೀಲಿಸಿ, 2023ರ ಡಿಸೆಂಬರ್‌ನಲ್ಲಿ ಪ್ರಶಸ್ತಿ ಗೋಷಿಸಿದೆ. ಪ್ರಶಸ್ತಿಗೆ ಆಯ್ಕೆಯಾದ ಮೇಲೆ ಈ ಆಸ್ಪತ್ರೆಗೆ ಪ್ರತಿ ವರ್ಷವೂ ₹4 ಲಕ್ಷಗಳ ವಿಶೇಷ ಅನುದಾನ ಪ್ರತ್ಯೇಕವಾಗಿಯೇ ಮಂಜೂರಾಗುತ್ತದೆ.

ಈ ಅನುದಾನದಲ್ಲಿ ಸಿಬ್ಬಂದಿಗೆ ಪ್ರೋತ್ಸಾಹಧನದ ಜತೆಗೆ ಉಳಿದ ಅನುದಾನದಲ್ಲಿ ಹೆರಿಗೆ ಆಸ್ಪತ್ರೆ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಸುಧಾರಣೆಗೆ ಬಳಸಿಕೊಳ್ಳಬಹುದಾಗಿದೆ.

ಮುಂಡರಗಿ ತಾಲೂಕು ಆಸ್ಪತ್ರೆಗೆ ಈ ಪ್ರಶಸ್ತಿ ಬರುವಲ್ಲಿ ನಮ್ಮ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಶ್ರಮ ಬಹುಮುಖ್ಯವಾಗಿದೆ. ಅವರೆಲ್ಲರ ಶ್ರಮದಿಂದಾಗಿ ಇಂದು ಈ ಪ್ರಶಸ್ತಿ ದೊರೆತಿದೆ. 

ಜತೆಗೆ ಆರೋಗ್ಯ ರಕ್ಷಾ ಸಮಿತಿ ಹಾಗೂ ತಾಲೂಕಿನ ಸಾರ್ವಜನಿಕರ ಸಹಕಾರವೂ ನಿರಂತರವಾಗಿ ಇರುವುದರಿಂದ ಇಷ್ಟೆಲ್ಲ ಅಭಿವೃದ್ಧಿ ಸಾಧ್ಯವಾಗಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಹೇಳಿದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ