ರೈತರ ಬೇಡಿಕೆ ಈಡೇರಿಸಲು ಕುಲರತ್ನಭೂಷಣ ಮುನಿಗಳ ಆಗ್ರಹ

KannadaprabhaNewsNetwork |  
Published : Nov 07, 2026, 02:45 AM IST
ರೈತರ ಬೇಡಿಕೆಗಳನ್ನು ಈಡೇರಿಸಲು ಮುನಿ ಕುಲರತ್ನಭೂಷಣಶ್ರೀ ಆಗ್ರಹ. | Kannada Prabha

ಸಾರಾಂಶ

ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ೧೮ ದಿನಗಳಿಂದ ಉಪವಾಸ ಆರಂಭಿಸಿರುವ ಹಳಿಂಗಳಿಯ ಆಚಾರ್ಯ ಕುಲರತ್ನಭೂಷಣ ಮುನಿಗಳು ರೈತ ನಾಯಕರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರ್ಕಾರ ಅನ್ನದಾತರ ಬೇಡಿಕೆ ಈಡೇರಿಸಿ ಸೂಕ್ತ ನ್ಯಾಯ ಒದಗಿಸಲು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ೧೮ ದಿನಗಳಿಂದ ಉಪವಾಸ ಆರಂಭಿಸಿರುವ ಹಳಿಂಗಳಿಯ ಆಚಾರ್ಯ ಕುಲರತ್ನಭೂಷಣ ಮುನಿಗಳು ರೈತ ನಾಯಕರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರ್ಕಾರ ಅನ್ನದಾತರ ಬೇಡಿಕೆ ಈಡೇರಿಸಿ ಸೂಕ್ತ ನ್ಯಾಯ ಒದಗಿಸಲು ಒತ್ತಾಯಿಸಿದ್ದಾರೆ.

ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀಗಳು, ಕೃಷಿ ನಮ್ಮ ದೇಶದ ಮೂಲ ಕಾಯಕವಾಗಿದ್ದು, ಈ ಕಾಯಕ ಕೈಗೊಳ್ಳುವ ಪ್ರತಿ ರೈತ ನಿಜವಾದ ಯೋಗಿಗಳು. ಅಂತಹ ಯೋಗಿಗಳು ಕಳೆದ ಒಂದು ತಿಂಗಳಿನಿಂದ ಬೀದಿಯಲ್ಲಿ ನಿಂತು ಹೋರಾಡುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ರೈತರ ಪರವಾಗಿ ಧ್ವನಿಯಾಗಿ ನಿಂತ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಹಾಗೂ ಅವರನ್ನು ಬಂಧಿಸಿರುವುದು ಸರ್ಕಾರದ ರಾಕ್ಷಸಿ ಧೋರಣೆಯ ಪ್ರತೀಕ. ಈ ಎಲ್ಲ ಪಾಪಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಣೆಯಾಗಲಿದ್ದು, ಅನ್ನದಾತರೊಂದಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಡಿನ ಪ್ರತಿಯೊಬ್ಬರು ಕೈಜೋಡಿಸಿ ಸಾಧು, ಸಂತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ರೈತರಿಗೆ ನ್ಯಾಯ ಒದಗಿಸುವವರೆಗೆ ಉಪವಾಸ ಮುಂದುವರೆಸುವುದಾಗಿ ತಿಳಿಸಿದರು.ಬಸವಜಯ ಮೃತ್ಯುಂಜಯ ಶ್ರೀ ಭೆಟ್ಟಿ :

ಆಚಾರ್ಯ ಮುನಿಗಳನ್ನು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ, ಸರ್ಕಾರ ತನ್ನ ಮೊಂಡು ಧೋರಣೆಯಿಂದ ಹೊರಬಂದು ಅನ್ನದಾತರ ಅಳಲನ್ನು ಆಲಿಸಿ ತ್ವರಿತವಾಗಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ, ಆಚಾರ್ಯರು ಆಹಾರ ಸೇವಿಸುವಂತೆ ನಿವೇದಿಸಿಕೊಂಡರು.

ರಾಷ್ಟ್ರೀಯ ಜೈನ್ ನಿಗಮದ ಅಧ್ಯಕ್ಷ ಲಲಿತ ಗಾಂಧಿ ಭೇಟಿ :

ಆಚಾರ್ಯರನ್ನು ಭೇಟಿ ಮಾಡಿದ ಜೈನ್ ನಿಗಮದ ರಾಷ್ಟ್ರೀಯ ಅಧ್ಯಕ್ಷ ಲಲಿತ ಗಾಂಧಿ ಮಾತನಾಡಿ, ಜೈನ ಮುನಿಗಳು ಅನ್ನದಾತರ ಏಳ್ಗೆಗಾಗಿ ೧೮ ದಿನಗಳಿಂದ ಉಪವಾಸ ನಿರತರಾಗಿರುವ ಸಂಗತಿ ಇಡೀ ಮನುಕುಲಕ್ಕೆ ಭಾರವಾದ ಸಂಗತಿ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಶ್ರಾವಕಿಯರು ಸೇರಿದಂತೆ ಅಪಾರ ಸಂಖ್ಯೆಯ ಶ್ರೀಗಳ ಅನುಯಾಯಿಗಳು ರೈತರ ಬೇಡಿಕೆ ಈಡೇರಲಿ ಜೈ ಜವಾನ್ ಜೈ ಕಿಸಾನ್ ಜೈ ಆಚಾರ್ಯ ಕುಲರತ್ನಭೂಷಣ ಘೋಷಣೆ ಕೂಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ