ಕನ್ನಡಪ್ರಭ ವಾರ್ತೆ ರಾಯಚೂರು
ಭಾನುವಾರ ಕರೆದ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಅಧಿಕಾರಿಗಳೇ ಇಲ್ಲದಂತಾಗಿದ್ದು, ಇದರಿಂದಾಗಿ ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿಲ್ಲ, 3 ಸಾವಿರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಇ-ಖಾತೆ ಅರ್ಜಿಗಳು ಬಾಕಿ ಉಳಿದಿವೆ, ತಿಂಗಳುಗಳು ಗತಿಸುತ್ತಿದ್ದರೂ, ನಗರದ ಚಂದ್ರಮೌಳೇಶ್ವರ ವೃತ್ತದ ಸಮೀಪದಲ್ಲಿ ಕುಸಿದಿರುವ ರಾಜಕಾಲುವೆ ಸೇತುವೆ ದುರಸ್ಥಿಯಾಗುತ್ತಿಲ್ಲ, ಕುಡಿಯುವ ನೀರು ಸಮರ್ಪಕವಾಗಿ ಪೂರೈಸದೆ, ಪಾಲಿಕೆ ಕರವಸೂಲಿ ಹೆಸರಿನಲ್ಲಿ ನೋಟಿಸ್ ನೀಡದೆ ನಳ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಕನಿಷ್ಠ ನೋಟಿಸ್ ನೀಡಿದರೆ ಜನರಿಗೆ ಬಾಕಿಯಿರುವ ಟೆಕ್ ಎಷ್ಟು? ಸರಿಯಿದೆಯೇ ಇಲ್ಲವೇ ಎನ್ನುವದಾದರೂ ಗೋತ್ತಾಗುತ್ತದೆ. ಆದರೆ ಅಧಿಕಾರಿಗಳು ದೌರ್ಜನ್ಯದಿಂದ ನಳಸಂಪರ್ಕ ಕಡಿತಗೊಳಿಸುವುದನ್ನು ನಿಲ್ಲಿಸಬೇಕೆಂದರು. ತೆರಿಗೆ ಹಣ ಏಲ್ಲಿ ಹೋಗುತ್ತಿದೆಯೋ ಗೊತ್ತಿಲ್ಲ. 10 ಸಾವಿರ ರು. ಲೈಸನ್ಸ್ ಫಿ, 1 ಲಕ್ಷ ಗಂಜ್ ಲೈಸನ್ಸ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಕಾರ್ಮಿಕರಿಗೆ 3 ತಿಂಗಳನಿಂದ ಸಂಬಳ ನೀಡಿಲ್ಲ. ಅಧಿಕಾರಿಗಳು ಅಸಂವಿಧಾನಿಕ ಪದ ಬಳಸಿ ಕಾರ್ಮಿಕರನ್ನು ಬೆದರಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳು, ಜನರ ಕೆಲಸ ಪಾಲಿಕೆಯಿಂದ ಆಗುತ್ತಿಲ್ಲ. ಅವ್ಯವಸ್ಥೆ, ಭ್ರಷ್ಟಚಾರದಿಂದ ಆಡಳಿತ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿದರು.
ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಯಾಗಿ ಮೂರು ವರ್ಷ ಕಳೆದರೂ ಸಹ ಸಾರ್ವಜನಿಕ ಸೌಲಭ್ಯ ದೊರೆಯದಂತಾಗಿವೆ, ಪಾಲಿಕೆ ಆಡಳಿತದಲ್ಲಾಗುತ್ತಿರುವ ಲೋಪಗಳ ಕುರಿತು ಹಾಗೂ ಕೈಗೊಳ್ಳಬೇಕಾದ ಸುಧಾರಣೆಗೆ ಬಗ್ಗೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರೊಂದಿಗೆ ಹಲವು ಸಲ ಚರ್ಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.ನಗರದ ವಾರ್ಡ್ಗಳಿಗೆ ಕುಡಿಯುವ ನೀರು ಪೂರೈಕೆಯೇ ಮಾಡದ ಪಾಲಿಕೆ, ದೌರ್ಜನ್ಯದಿಂದ ಹಬ್ಬದ ಆಚರಣೆ ಸಂದರ್ಭದಲ್ಲಿ ಕರ ಪಾವತಿಸಿಲ್ಲ ಎಂದು ನಳಗಳ ಸಂಪರ್ಕ ಕಡಿತಗೊಳಿಸಲು ಮುಂದಾಗಿದೆ. ಕರ ಭರಿಸಲು ನಗರದ ಜನತೆ ಸಿದ್ಧರಿದ್ದು, ಅನಗತ್ಯವಾಗಿ ಜನರ ಮೇಲೆ ಸಿಬ್ಬಂದಿಗಳು, ಅಧಿಕಾರಿಗಳು ದೌರ್ಜನ್ಯದಿಂದ ಕಡಿತಗೊಳಿಸುವುದನ್ನು ನಿಲ್ಲಿಸಬೇಕೆಂದರು. ಮೂರು ವರ್ಷಗಳಿಂದ ಕರವಸೂಲಿ ಮಾಡದ ಸಿಬ್ಬಂದಿ, ಹಬ್ಬದ ದಿನದಲ್ಲಿ ಕನಿಷ್ಟ ನೋಟಿಸ್ ನೀಡದೇ ನಳ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನರು ಪಾಲಿಕೆಯಾದ ನಂತರ ಸಂತಸಪಟ್ಟಿದ್ದರು. ಆದರೀಗ ಬೇಸರ ಬರುವಂತಾಗಿದೆ. ಯಾಕಾದರೂ ಪಾಲಿಕೆ ಆಯಿತು ಎನ್ನುವ ಅಸಮಾಧಾನ ಜನರಲ್ಲಿ ಮೂಡಿಸಿದೆ. ಎಲ್ಲ ತೆರಿಗೆ ಹೆಚ್ಚಳವಾದವೇ ಹೊರತು ಜನರ ಸೌಲಭ್ಯಗಳು ಹೆಚ್ಚಳವಾಗಲೇ ಇಲ್ಲ. ಬೀದಿ ದೀಪಗಳಿಲ್ಲದೇ ಮುಖ್ಯ ರಸ್ತೆಗಳು ಕತ್ತಲೆಗೆ ಸಿಲುಕಿವೆ. ಇ ಖಾತಾ ನೀಡುತ್ತಿಲ್ಲ. ಎಪಿಎಂಸಿ ಬಡಾವಣೆಯಲ್ಲಿ ಇ ಖಾತಾ ನೀಡಲು ಬರುವದಿಲ್ಲ ಎಂದು ಹೇಳಿದ್ದ ಮುಖ್ಯ ಆಯುಕ್ತರೇ ಇ- ಖಾತಾ ಮಾಡಿಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು. 3 ರಿಂದ 12 ಲಕ್ಷ ರು. ಹಣ ವಸೂಲಿ ಮಾಡಿ ಇ-ಖಾತಾ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎನ್.ಶಂಕ್ರಪ್ಪ, ರವೀಂದ್ರ ಜಲ್ದಾರ್, ಬಿ.ಗೋವಿಂದ, ರಾಘವೇಂದ್ರ ಉಟ್ಕೂರು, ಸಂತೋಷ ರಾಜಗುರು, ಪಿ.ಯಲ್ಲಪ್ಪ, ಈ.ಶಶಿರಾಜ, ಯು.ನರಸರೆಡ್ಡಿ, ಆಂಜಿನಯ್ಯ ಪೋಗಲ್, ಪಲಗುಲ ನಾಗರಾಜ, ವಿ.ಪಿ.ರೆಡ್ಡಿ ಸೇರಿ ಕಾರ್ಯಕರ್ತರು ಇದ್ದರು.