ಪುರಸಭೆ ಬಜೆಟ್‌: ಪತ್ರಕರ್ತರಿಗೆ ವಿಮಾಸೌಲಭ್ಯ

KannadaprabhaNewsNetwork |  
Published : Mar 27, 2025, 01:05 AM IST
ಫೋಟೋ 26ಪಿವಿಡಿ4ಪ್ರಸಕ್ತ ಸಾಲಿನ 2025-26ರ ಬಜೆಟ್‌ನ್ನು ಪುರಸಭೆ ಅಧ್ಯಕ್ಷ ಪಿ.ಎಚ್‌.ರಾಜೇಶ್‌ ಮಂಡಿಸಿ ಮಾಹಿತಿ ನೀಡಿದರು.ಫೋಟೋ 26ಪಿವಿಡಿ5ಪಾವಗಡ,ಪುರಸಭೆ ಬಜೆಟ್‌ ಸಭೆಗೆ ಅಗಮಿಸಿದ್ದ ಶಾಸಕ ಎಚ್‌.ವಿ.ವೆಂಕಟೇಶ್‌,ಪುರಸಭೆಯ ಅಧ್ಯಕ್ಷ ಪಿ.ಎಚ್‌.ರಾಜೇಶ್‌ ಮುಖ್ಯಾಧಿಕಾರಿ ಜಾಫರ್ ಷರೀಫ್‌ರನ್ನು ಪುರಸಭೆಯ ಸದಸ್ಯರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. | Kannada Prabha

ಸಾರಾಂಶ

ಹಿಂದುಳಿದ ವರ್ಗದ ಅರ್ಹ ಬಡವರಿಗೆ ವಸತಿ ಹಾಗೂ ಪತ್ರಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಲು ಪುರಸಭೆಯ ಬಜೆಟ್‌ನಲ್ಲಿ ಹಣ ಮೀಸಲಿಡುವುದಾಗಿ ಪುರಸಭೆಯ ಅಧ್ಯಕ್ಷ ಪಿ.ಎಚ್‌.ರಾಜೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ ಹಿಂದುಳಿದ ವರ್ಗದ ಅರ್ಹ ಬಡವರಿಗೆ ವಸತಿ ಹಾಗೂ ಪತ್ರಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಲು ಪುರಸಭೆಯ ಬಜೆಟ್‌ನಲ್ಲಿ ಹಣ ಮೀಸಲಿಡುವುದಾಗಿ ಪುರಸಭೆಯ ಅಧ್ಯಕ್ಷ ಪಿ.ಎಚ್‌.ರಾಜೇಶ್ ಹೇಳಿದರು. ಅಧ್ಯಕ್ಷ ಪಿ.ಎಚ್‌ ರಾಜೇಶ್‌ ಅಧ್ಯಕ್ಷತೆಯಲ್ಲಿ ಬುಧವಾರ ಪುರಸಭೆಯ ನೂತನ ಸಭಾಂಗಣದಲ್ಲಿ ಬಜೆಟ್‌ ಮಂಡನೆ ಸಭೆ ನಡೆಸಿದ್ದು 2025-26ನೇ ಸಾಲಿನ 31ಲಕ್ಷ ರು.ಮೌಲ್ಯದ ಉಳಿತಾಯ ಬಜೆಟ್ ಬಗ್ಗೆ ವಿವರಣೆ ನೀಡಿದರು.ಶಾಸಕ ಎಚ್‌.ವಿ.ವೆಂಕಟೇಶ್‌ ಅವರ ಮಾರ್ಗದರ್ಶನ ಹಾಗೂ ಎಲ್ಲ ಸದಸ್ಯರ ಸಲಹೆ ಸೂಚನೆಗಳ ಮೇರೆಗೆ ಪ್ರಸಕ್ತ ಸಾಲಿನ ಪುರಸಭೆ ಬಜೆಟ್‌ನಲ್ಲಿ ಹಲವಾರು ಜನಪರ ಕಾರ್ಯಕ್ರಮದ ಬಗ್ಗೆ ರೂಪರೇಷ ಸಿದ್ದಪಡಿಸಿದ್ದು ನಗರದ ಕಾವಲಗೇರಿ ಬಡಾವಣೆಯಲ್ಲಿ ಹೊಸ ಒಎಚ್‌ಟಿಸಿ ಟ್ಯಾಂಕ್ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ. ನಗರದ ಹೊಸ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಮತ್ತು ಪೊಲೀಸ್ ಚೌಕಿ ನಿರ್ಮಾಣಕ್ಕೆ ಹಣ ವಿನಿಯೋಗಿಸಲಿದ್ದು ಪ್ಲೋರೈಡ್ ಮುಕ್ತ ಶುದ್ಧ ಗಂಗಾಜಲ ಪೂರೈಕೆ ಹಿನ್ನೆಲೆಯಲ್ಲಿ ನಗರದ ಎಲ್ಲ ವಾರ್ಡ್‌ಗಳಿಗೆ ತುಂಗಭದ್ರಾ ಶುದ್ಧ ಕುಡಿಯುವ ನೀರಿನ ಮನೆಮನೆಗೆ ಪೂರೈಕೆಗೆ ಕಾರ್ಯನ್ಮುಖರಾಗಿರುವುದಾಗಿ ಹೇಳಿದರು. ರಾಜ್ಯ ಜಿಲ್ಲಾ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಸಹಾಯಧನ ಹಾಗೂ ನಗರದಲ್ಲಿ ಕನ್ನಡ ಧ್ವಜ ಸ್ತಂಭ ನಿರ್ಮಾಣಕ್ಕೆ ಆದ್ಯತೆ ಸೇರಿದಂತೆ ಸ್ವಚ್ಛತೆ ಕಾಪಾಡುವ ಹಿನ್ನಲೆಯಲ್ಲಿ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗುವುದು. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ವಿಮೆ ಸೌಲಭ್ಯ, ಬಸ್-ಲಾರಿ ಹಮಾಲಿಗಳಿಗೆ ಆರೋಗ್ಯ ಸಹಾಯಧನ, ಆಟೋ ಚಾಲಕರಿಗೆ ಲಘು ವಾಹನ ತರಬೇತಿ. ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ಹಾಗೂ ಇತರೆ ಅಗತ್ಯ ಕಾರ್ಯಕ್ರಮ ರೂಪಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.

ಶಾಸಕ ಎಚ್‌. ವಿ. ವೆಂಕಟೇಶ್‌, ಪುರಸಭೆಯ ಉಪಾಧ್ಯಕ್ಷರಾದ ಗೀತಾ ಹನುಮಂತರಾಯಪ್ಪ, ಮುಖಂಡ ಶಂಕರರೆಡ್ಡಿ,ಮುಖ್ಯಾಧಿಕಾರಿ ಜಾಫರ್ ಷರೀಫ್, ಪುರಸಭಾ ಸದಸ್ಯರಾದ ಸುದೇಶ್‌ ಕುಮಾರ್‌,ಮಹಮ್ಮದ್‌ ಇರ್ಮಾನ್‌, ರಾಮಾಂಜಿನಪ್ಪ, ವೆಂಕಟರಮಣಪ್ಪ, ಗೊರ್ತಿ ನಾಗರಾಜ್‌, ವೇಲುರಾಜ್‌, ಕಿರಣ್‌ ಗಂಗಮ್ಮ, ಎಂ.ಎಸ್‌.ವಿಶ್ವನಾಥ್‌, ಬಾಲಸುಬ್ರಣ್ಯಂ, ವಿಜಯಕುಮಾರ್‌, ನಾಗಭೂಷಣರೆಡ್ಡಿ, ನಾಮಿನಿ ಸದಸ್ಯರಾದ ಗಂಗಾಧರ್‌, ರಾಮಲಿಂಗಪ್ಪ, ಶ್ರೀನಿವಾಸ್‌ ಪ್ರಸಾದ್‌ ಇತರರಿದ್ದರು.

PREV

Recommended Stories

ಸರ್ಕಾರಿ ಸಭೆಗಳಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿಗೆ ನಿಷೇಧ
ಪ್ರತಿಕ್ಷಣವು ಕನ್ನಡ ನಾಡು-ನುಡಿ ಅಭಿಮಾನವಿರಲಿ