ತೆಗ್ಗು ಗುಂಡಿಗಳ ದುರಸ್ತಿಗೆ ಮುಂದಾದ ನಗರಸಭೆ

KannadaprabhaNewsNetwork |  
Published : Oct 19, 2024, 12:34 AM IST
ಶುಕ್ರವಾರ ಯಾದಗಿರಿ ನಗರದಲ್ಲಿ ಹದಗೆಟ್ಟ ವಿವಿಧ ರಸ್ತೆಗಳನ್ನು ಸದಸ್ಯರ ಹಾಗೂ ಅಧಿಕಾರಿಗಳ ತಂಡದೊಂದಿಗೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಭೇಟಿ ಪರಿಶೀಲಿಸಿದರು. | Kannada Prabha

ಸಾರಾಂಶ

Municipal Council has taken forward the repair of potholes

- ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ವಿವಿಧೆಡೆ ಸಂಚರಿಸಿ ಹದಗೆಟ್ಟ ರಸ್ತೆಗಳ ವೀಕ್ಷಣೆ

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ರಸ್ತೆಗಳಲ್ಲಿ ಬಿದ್ದಿರುವ ತೆಗ್ಗುಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಲು ನಗರಸಭೆ ಮುಂದಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.

ನಗರದಲ್ಲಿ ಹದಗೆಟ್ಟ ವಿವಿಧ ರಸ್ತೆಗಳನ್ನು ಸದಸ್ಯರ ಹಾಗೂ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಳು ಲಕ್ಷ ರುಪಾಯಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇನ್ನೂ ಹೆಚ್ಚಿಗೆ ಬೇಕಾದರೂ ಖರ್ಚು ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ನಗರದ ಮೈಲಾಪುರ ಅಗಸಿ, ಗಾಂಧಿ ಚೌಕ್, ಕನಕ ವೃತ್ತ, ಲುಂಬಿನಿ ಉದ್ಯಾನದ ಮಾರ್ಗ, ಗಂಜ್‌ ರಸ್ತೆ, ಲಕ್ಷ್ಮಿ ಗುಡಿ ರಸ್ತೆ ಸೇರಿದಂತೆಯೇ ಐದಾರು ಕಿಲೋ ಮೀಟರ್ ರಸ್ತೆಗಳಲ್ಲಿ ಎಲ್ಲ ತಗ್ಗು-ಗುಂಡಿ ಮುಚ್ಚಿಸಲಾಗುವುದು ಎಂದರು.

ಶುಕ್ರವಾರವೇ ಕೆಲಸ ಆರಂಭಿಸಲಾಗಿದೆ. ಈಗ ಮಳೆ ಬರುತ್ತಿರುವುದರಿಂದ ಒಂದೆರಡು ದಿನ ವಿಳಂಬವಾಗಬಹುದು, ಆದರೂ ಒಂದು ವಾರದಲ್ಲಿ ಈ ಕೆಲಸ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.

ನಗರಸಭೆ ಪೌರಯುಕ್ತ ರಜನೀಕಾಂತ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ನಗರಸಭೆ ಸದಸ್ಯ ಮತ್ತು ಜಿಲ್ಲಾ ವಕ್ತಾರ ಹಣಮಂತ ಇಟಗಿ, ಮಂಜು ದಾಸನಕೇರಿ, ಮಹೇಶ ಕುರಕುಂಬಾ, ಗುತ್ತಿಗೆದಾರ ಪೀರ್ ಅಹ್ಮದ್ ಸೇರಿದಂತೆ ಇತರರಿದ್ದರು.

-----

.......ಕೋಟ್.........

ನಗರದ ಈ ಹದಗೆಟ್ಟ ರಸ್ತೆಗಳು ನಗರಸಭೆ ವ್ಯಾಪ್ತಿಗೆ ಬರದಿದ್ದರೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನೀಗಿಸಲು ಈ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

- ಲಲಿತಾ ಅನಪುರ, ಅಧ್ಯಕ್ಷರು, ನಗರಸಭೆ ಯಾದಗಿರಿ.

-------

18ವೈಡಿಆರ್10: ಶುಕ್ರವಾರ ಯಾದಗಿರಿ ನಗರದಲ್ಲಿ ಹದಗೆಟ್ಟ ವಿವಿಧ ರಸ್ತೆಗಳನ್ನು ಸದಸ್ಯರ ಹಾಗೂ ಅಧಿಕಾರಿಗಳ ತಂಡದೊಂದಿಗೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಭೇಟಿ ಪರಿಶೀಲಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...