ಸ್ವಚ್ಛತೆಗೆ ನಗರಸಭೆ ಪೌರಕಾರ್ಮಿಕರ ಹರಸಾಹಸ

KannadaprabhaNewsNetwork |  
Published : Oct 22, 2026, 01:45 AM IST
21ಎಚ್ಎಸ್ಎನ್17ಎ : ರಸ್ತೆಗಳಲ್ಲಿ ರಾಶಿರಾಶಿ ಉಳಿದ ಬಾಳೆಕಂದುಗಳನ್ನು ಜೆಸಿಬಿ ಮೂಲಕ ಟಿಪ್ಪರ್‌ಗೆ ತುಂಬುತ್ತಿರುವುದು. | Kannada Prabha

ಸಾರಾಂಶ

ಆಯುಧ ಪೂಜೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬೂದುಕುಂಬಳ ಹಾಗೂ ಬಾಳೆ ಕಂದುಗಳು ಮೌಲ್ಯ ಕಳೆದುಕೊಂಡಿವೆ. ಕಾರಣ ಬೇಡಿಕೆಗಿಂತ ಹೆಚ್ಚಿನ ಪೂರೈಕೆ ಕಾರಣ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೂದುಕುಂಬಳ ಹಾಗೂ ಬಾಳೆ ಕಂದುಗಳು ಮಾರುಕಟ್ಟೆಯಲ್ಲಿ ಅವಕವಾಗಿದ್ದರಿಂದ ಭಾರೀ ಪ್ರಮಾಣದ ಕುಂಬಳ ಹಾಗೂ ಬಾಳೆಕಂದುಗಳು ಮಾರಾಟವಾಗದೆ ಅವುಗಳನ್ನು ತಂದಿದ್ದ ವರ್ತಕರು ಕಡೆಯಲ್ಲಿ ಅವುಗಳನ್ನು ಅಲ್ಲಿಯೇ ಬಿಟ್ಟುಹೋದರು. ಇದರಿಂದ ಅವುಗಳನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರು ಹರಸಾಹಸಪಡಬೇಕಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಆಯುಧ ಪೂಜೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬೂದುಕುಂಬಳ ಹಾಗೂ ಬಾಳೆ ಕಂದುಗಳು ಮೌಲ್ಯ ಕಳೆದುಕೊಂಡಿವೆ. ಕಾರಣ ಬೇಡಿಕೆಗಿಂತ ಹೆಚ್ಚಿನ ಪೂರೈಕೆ ಕಾರಣ. ಹೌದು....ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೂದುಕುಂಬಳ ಹಾಗೂ ಬಾಳೆ ಕಂದುಗಳು ಮಾರುಕಟ್ಟೆಯಲ್ಲಿ ಅವಕವಾಗಿದ್ದರಿಂದ ಭಾರೀ ಪ್ರಮಾಣದ ಕುಂಬಳ ಹಾಗೂ ಬಾಳೆಕಂದುಗಳು ಮಾರಾಟವಾಗದೆ ಅವುಗಳನ್ನು ತಂದಿದ್ದ ವರ್ತಕರು ಕಡೆಯಲ್ಲಿ ಅವುಗಳನ್ನು ಅಲ್ಲಿಯೇ ಬಿಟ್ಟುಹೋದರು. ಇದರಿಂದ ಅವುಗಳನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರು ಹರಸಾಹಸಪಡಬೇಕಾಯಿತು.

ನಗರದ ಹಲವು ಪ್ರದೇಶಗಳಲ್ಲಿ ಕುಂಬಳಕಾಯಿ ಮತ್ತು ಬಾಳೆಕಂದುಗಳ ರಾಶಿ ಕಂಡುಬರುತ್ತಿದ್ದು, ಬುಧವಾರ ತ್ಯಾಜ್ಯ ತೆರವಿಗಾಗಿ ಪಾಲಿಕೆ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೆಸಿಬಿ ಮತ್ತು ಟಿಪ್ಪರ್‌ಗಳನ್ನು ಬಳಸಿಕೊಂಡು ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸಲಾಗುತ್ತಿದೆ. ಇದೆ ವೇಳೆ ಮಹಾನಗರ ಪಾಲಿಕೆ ಸಿಬ್ಬಂದಿ ಪರಶುರಾಮು ಅವರು ಮಾತನಾಡಿ, ವಿಜಯದಶಮಿ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಕುಂಬಳಕಾಯಿ ಹಾಗೂ ಬಾಳೆಕಂದುಗಳನ್ನು ಖರೀದಿಸಿದ್ದರು. ಹಬ್ಬದ ದಿನಗಳಲ್ಲಿ ಕುಂಬಳಕಾಯಿ ಕೆಜಿಗೆ ಸುಮಾರು ೩೦ರಿಂದ ೪೦ ರೂ.ವರೆಗೆ ಮಾರಾಟವಾಗಿತ್ತು. ಬೆಲೆ ಕಡಿಮೆ ಇದ್ದಿದ್ದರೆ ಜನರು ಇನ್ನಷ್ಟು ಪ್ರಮಾಣದಲ್ಲಿ ಖರೀದಿಸುತ್ತಿದ್ದರು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಹಬ್ಬದ ಆಚರಣೆ ಮುಗಿದ ಬಳಿಕ ಬಳಕೆಯಾದ ವಸ್ತುಗಳು ತ್ಯಾಜ್ಯವಾಗಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಳಿದಿರುವುದರಿಂದ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚುವರಿ ಹೊರೆ ಉಂಟಾಗಿದೆ. ಈ ತ್ಯಾಜ್ಯವನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ರೈಲ್ವೆ ನಿಲ್ದಾಣ, ಚೆನ್ನಪಟ್ಟಣ ರಸ್ತೆ, ಹೌಸಿಂಗ್ ಬೋರ್ಡ್ ಹಾಗೂ ರಿಂಗ್‌ರೋಡ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಕುಂಬಳಕಾಯಿ, ಬಾಳೆಕಂದು ಮತ್ತು ಇತರ ತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ತೆರವುಗೊಳಿಸಲು ಜೆಸಿಬಿ ಹಾಗೂ ಟಿಪ್ಪರ್‌ಗಳನ್ನು ನಿಯೋಜಿಸಿ, ಸಿಬ್ಬಂದಿ ತ್ಯಾಜ್ಯವನ್ನು ವಾಹನಗಳಿಗೆ ತುಂಬಿ ಸಾಗಿಸುತ್ತಿದ್ದಾರೆ. ಹಬ್ಬದ ಬಳಿಕ ನಗರವನ್ನು ಸ್ವಚ್ಛವಾಗಿಡಲು ಪಾಲಿಕೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಸುಲಭದ ಕೆಲಸವಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿದ್ದಿರುವುದು ನಗರದ ಸ್ವಚ್ಛತೆ ಹಾಗೂ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ವಿಜಯದಶಮಿ ಸಂದರ್ಭದಲ್ಲಿ ಕುಂಬಳಕಾಯಿ ಮತ್ತು ಬಾಳೆಕಂದುಗಳನ್ನು ಬಳಸುವುದು ಸಂಪ್ರದಾಯದ ಭಾಗವಾಗಿದೆ. ಆದರೆ ಹಬ್ಬದ ಆಚರಣೆ ಮುಗಿದ ಬಳಿಕ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ನಗರದಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ಹಬ್ಬದ ಸಂಭ್ರಮದಷ್ಟೇ ಅದರ ನಂತರದ ಸ್ವಚ್ಛತೆಗೂ ಆದ್ಯತೆ ನೀಡಬೇಕಿದೆ. ಅಗತ್ಯಕ್ಕೆ ತಕ್ಕಷ್ಟು ವಸ್ತುಗಳನ್ನು ಖರೀದಿಸುವುದು, ಬಳಕೆಯಾದ ವಸ್ತುಗಳನ್ನು ನಿಗದಿತ ಸ್ಥಳಗಳಲ್ಲಿ ಸಂಗ್ರಹಿಸುವುದು ಮತ್ತು ಪಾಲಿಕೆಯ ತ್ಯಾಜ್ಯ ಸಂಗ್ರಹ ವಾಹನಗಳಿಗೆ ಹಸ್ತಾಂತರಿಸುವುದು ಮುಖ್ಯ. ಸ್ವಚ್ಛ ನಗರ ನಿರ್ಮಾಣದ ಹೊಣೆಗಾರಿಕೆ ಪಾಲಿಕೆ ಸಿಬ್ಬಂದಿಯೊಂದಿಗೇ ಮುಗಿಯುವುದಿಲ್ಲ. ಸಾರ್ವಜನಿಕರೂ ಕೈಜೋಡಿಸಬೇಕು.ಹಬ್ಬದ ಸಂಭ್ರಮ ಮುಗಿದರೂ ಅದರ ತ್ಯಾಜ್ಯ ತೆರವುಗೊಳಿಸುವ ಕೆಲಸ ಮುಂದುವರಿಯುತ್ತಿದೆ. ನಗರವನ್ನು ಸ್ವಚ್ಛವಾಗಿಡಲು ಪಾಲಿಕೆ ಸಿಬ್ಬಂದಿ ಶ್ರಮಿಸುತ್ತಿರುವ ಸಂದರ್ಭದಲ್ಲಿ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತವಾಗಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬ ನಾಗರಿಕರೂ ಅರಿತುಕೊಳ್ಳಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ್ಷೋಧ್ಘಾರದೊಂದಿಗೆ ನಡೆದ ಅಶ್ವವಾಹನೋತ್ಸವದ ಜಂಬೂಸವಾರಿ
ಅ.23ರಂದು ಗಣಂಗೂರು ಟೋಲ್‍ ಬಂದ್: ರೈತ ಸಂಘ ತೀರ್ಮಾನ