ಪುರಸಭೆ ಗುಳೇದಗುಡ್ಡ: ₹3.99 ಲಕ್ಷ ಉಳಿತಾಯ ಬಜೆಟ್ ಮಂಡನೆ

KannadaprabhaNewsNetwork |  
Published : Apr 09, 2025, 12:47 AM IST
ಪೋಟೋ: ಗುಲೇದಗುಡ್ಡ ಪುರಸಭೆಯ 2025-26 ನೇ ಸಾಲಿನ ಬಜೆಟ್ ಅಂದಾಜು ಪತ್ರಿಕೆಯನ್ನು ಮುಖ್ಯಾಧಿಕಾರಿ ಎ.ಎಚ್.ಮುಜಾವರ್ ಸಭೆಗೆ ಓದಿ ಹೆಳುತ್ತಿರುವುದು.  | Kannada Prabha

ಸಾರಾಂಶ

ಗುಳೇದಗುಡ್ಡ ಪುರಸಭೆಯ 20.97 ಕೋಟಿ ಆದಾಯ ಮತ್ತು ₹20.93 ಕೋಟಿ ವೆಚ್ಚ ಒಳಗೊಂಡು, 3.99 ಕೋಟಿ ಉಳಿತಾಯ ಬಜೆಟ್‌ ಮಂಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಇಲ್ಲಿನ ಪುರಸಭೆಯ ₹20.97 ಕೋಟಿ ಆದಾಯ ಮತ್ತು ₹20.93 ಕೋಟಿ ವೆಚ್ಚ ಒಳಗೊಂಡು, ₹3.99 ಕೋಟಿ ಉಳಿತಾಯ ಬಜೆಟ್‌ ಮಂಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ ಹೇಳಿದರು.

ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಜರುಗಿದ 2025-26ನೇ ಸಾಲಿನ ಆಯ-ವ್ಯಯ ಅಂದಾಜು ಕರಡು ಪತ್ರಿಕೆಯನ್ನು ಓದಿಹೇಳುತ್ತ, ಪಟ್ಟಣದ ಅಭಿವೃದ್ಧಿಗಾಗಿ ಸಿದ್ಧಪಡಿಸಲಾದ ಪ್ರಸಕ್ತ ಸಾಲಿನ ಬಜೆಟ್ ಕರಡು ಪ್ರತಿ ಇದಾಗಿದ್ದು, 2 ಸಲ ಪೂರ್ವಭಾವಿ ಸಭೆ ಕರೆದು ಸಾರ್ವಜನಿಕರಿಂದ ಸಲಹೆ ಪಡೆದು ಈ ಕರಡು ಪ್ರತಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಪ್ರಮುಖ ವೆಚ್ಚಗಳು: ಕಟ್ಟಡ ಆಸ್ತಿ ತೆರಿಗೆಯ ಮೂಲಕ ₹1.40 ಕೋಟಿ ಮತ್ತು ಆಸ್ತಿ ತೆರಿಗೆಯ ದಂಡ ದಿಂದ ₹20 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕವಾಗಿ ₹5 .75 ಲಕ್ಷ. ಮಳಿಗೆಗಳ ಬಾಡಿಗೆಯಿಂದ ₹44 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ ₹17 ಲಕ್ಷ, ಅಭಿವೃದ್ಧಿ ಶುಲ್ಕಗಳಿಂದ ₹8 ಲಕ್ಷ, ಘನತ್ಯಾಜ್ಯ ನಿರ್ವಹಣೆ ಶುಲ್ಕದಿಂದ ₹20 ಲಕ್ಷ, ನೀರಿನ ದರಗಳ ಆದಾಯ ₹58 ಲಕ್ಷ, ನೀರಿನ ಸಂಪರ್ಕದಿಂದ ₹3.50 ಲಕ್ಷ, ಸರ್ಕಾರದಿಂದ ಎಸ್. ಎಫ್.ಸಿ. ವಿಶೇಷ ಅನುದಾನ ₹2 ಕೋಟಿ, 15ನೇ ಹಣಕಾಸು ಯೋಜನೆಯಿಂದ 1.55 ಕೋಟಿ, ಬರ ಪರಿಹಾರ ಅನುದಾನದಿಂದ ₹6 ಲಕ್ಷ ಒಟ್ಟು ₹20.97 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಪ್ರಮುಖ ವೆಚ್ಚಗಳು: ಪಟ್ಟಣದ ರಸ್ತೆ ಮತ್ತು ಚರಂಡಿಗಳ ದುರಸ್ತಿಗಾಗಿ ₹2 ಕೋಟಿ, ಹೈಮಾಸ್ಟ್ ವಿದ್ಯುತ್ ದೀಪ, ಸೋಟ್ರ್‌ ರ ಮತ್ತು ಬೀದಿ ದೀಪಗಳ ಖರೀದಿಗಾಗಿ ₹24 ಲಕ್ಷ, ಮಾರುಕಟ್ಟೆ ಹಾಗೂ ಇತರೆ ನಿರ್ಮಾಕ್ಕಾಗಿ ₹15 ಲಕ್ಷ, ಸ್ವಚ್ಛ ಭಾರತ ಕಾರ್ಯಕ್ರಮ ಅನುಷ್ಠಾನಕ್ಕಾಗಿ ₹1.75 ಕೋಟಿ, ನೀರು ಸರಬರಾಜು ನಿರ್ವಹಣೆ ಹೊರಗುತ್ತಿಗೆ ಮತ್ತು ಇತರೇ ದುರಸ್ತಿ ಕಾಮಗಾರಿಗಾಗಿ ₹1 .10 ಕೋಟಿ ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹20.93 ಕೋಟಿ ವೆಚ್ಚದ ಲೆಕ್ಕ ಹಾಕಿದ್ದು, ₹3.99 ಕೋಟಿಗಳ ನಿರೀಕ್ಷಿತ ಉಳಿತಾಯ ಹೊಂದಿದೆ ಎಂದು ಮುಖ್ಯಾಧಿಕಾರಿ ಹೇಳಿದರು.

ಮುಖ್ಯಅಧಿಕಾರಿಗಳು ಸಭೆಗೆ ಓದಿ ಹೇಳಿದರು. ಸದಸ್ಯರೆಲ್ಲ ಒಪ್ಪಿಗೆ ಸೂಚಿಸಿ ಅನುಮೋದಿಸಿದರು. ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಸದಸ್ಯರಾದ ಸಂತೋಷ ನಾಯನೇಗಲಿ, ಅಭಿಯಂತರ ಕಿತ್ತಲಿ, ಮ್ಯಾನೇಜರ್ ಮುದ್ದೇಬಿಹಾಳ, ಲೆಕ್ಕಾಧಿಕಾರಿ ಕಟ್ಟಿಮನಿ, ಚಂದರಗಿ ಸೇರಿದಂತೆ ಕಚೇರಿ ಸಿಬ್ಬಂದಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ