ಕೊಲೆ ಪ್ರಕರಣ ದಾಖಲಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jul 5, 2024 1:00 AM

ಸಾರಾಂಶ

police neglected murder case register

-ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಸಂಸ ಸಮಿತಿ ಡಿವೈಎಸ್‌ಪಿಗೆ ಮನವಿ

----

ಕನ್ನಡಪ್ರಭ ವಾರ್ತೆ ಸುರಪುರ

ಅನುಮನಾಸ್ಪದ ಸಾವ ಪ್ರಕರಣದ ಹಿಂದೆ ಕೊಲೆ ಸಂಚು ನಡೆದಿದ್ದು, ಹತ್ಯೆ ಪ್ರಕರಣ ದಾಖಲಿಸಬೇಕು. ಆರೋಪಿಗಳನ್ನು ಬಂಧಿಸಿ ಬಡ ಕುಟುಂಬಕ್ಕೆ ನ್ಯಾಯ ಕಲ್ಪಿಸಿ, ಸೂಕ್ತ ಬಂದೋಬಸ್ತ್ ಒದಗಿಸಿಬೇಕು ಎಂದು ಒತ್ತಾಯಿಸಿ ಕರ್ನಾಟ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಮತ್ತು ಕುಟುಂಬಸ್ಥರು ನಗರದ ಡಿವೈಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಂಘಟನೆ ಸಂಚಾಲಕ ಶಿವಲಿಂಗ ಹಸನಾಪುರ, ಭಾಗಪ್ಪ ಸಿದ್ದಪ್ಪ(18) ಯುವಕನ ಮೇಲೆ ಕೆಲವರು ಹಲ್ಲೆ ನಡೆಸಿ ಕೊಲೆ ಮಾಡಿ, ಇತ್ತೀಚೆಗೆ ಶಹಾಪುರ ತಾಲೂಕಿನ ಕನ್ಯಾಕೋಳುರು ಸೀಮಾಂತರದಲ್ಲಿ ಬರುವ ತಾಯಮ್ಮಗೋಳ ಹೊಲದ ಕೃಷಿ ಹೊಂಡದಲ್ಲಿ ಮೃತ ದೇಹವನ್ನು ಬಿಸಾಡಿದ್ದಾರೆ. ಮಗನ ಮೃತದೇಹವನ್ನು ಕುಟುಂಬದವರು ಗುರುತಿಸಿದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಅನುಮಾನಸ್ಪದ ಸಾವು (174ಸಿ) ದಾಖಲಿಸಿ ಕೊಳ್ಳುತ್ತಾರೆ. ಕುಟುಂಬದವರು ಎಷ್ಟೇ ಹೇಳಿದರು ಪೊಲೀಸರು ಕೊಲೆ ಪ್ರಕರಣ (302) ದಾಖಲಿಸಿಕೊಳ್ಳುವುದಿಲ್ಲ. ಆರೋಪಿಗಳನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಹಾಪುರದ ಪೊಲೀಸರು ಹಣದಾಸೆಗೆ ಮತ್ತು ರಾಜಕೀಯ ಪ್ರಭಾವದಿಂದ ಮರಣೋತ್ತರ ವರದಿ ಪರೀಕ್ಷೆ ಅನುಸಾರ ಪ್ರಕರಣ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿದಾರೆ. ಇದರಲ್ಲಿ ಎಸ್‌ಪಿ, ಡಿವೈಎಸ್‌ಪಿ ಮತ್ತು ಸಿಪಿಐ ಮೇಲ್ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರಿಂದ ಬಡವರಿಗೆ ಯಾವ ರೀತಿ ನ್ಯಾಯ ಸಿಗಲು ಸಾಧ್ಯ ಎಂದು ಪ್ರಶ್ನಿಸಿದರು.

ಯುವಕನ ಕೊಲೆ ಪ್ರಕರಣ ದಾಖಲಿಸುವಂತೆ ಹಲವು ಬಾರಿ ಡಿವೈಎಸ್‌ಪಿ ಅವರಿಗೆ ಮನವಿ ಮಾಡಿದರೂ ಆಸಕ್ತಿ ತೋರಿಲ್ಲ. ಸಿಪಿಐ ಎಸ್.ಎಂ. ಪಾಟೀಲ್ ಈ ಪ್ರಕರಣದ ಕುರಿತಂತೆ ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಆದ್ದರಿಂದ ಡಿವೈಎಸ್‌ಪಿ ಮತ್ತು ಸಿಪಿಐ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಮೃತನ ಕುಟುಂಬದವರಿಗೆ ನ್ಯಾಯ ಸಿಗುವವರೆಗೂ ಡಿವೈಎಸ್‌ಪಿ ಕಚೇರಿ ಮುಂದೆ ಆಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಪ್ರತಿಭಟಿಸುತ್ತಿದ್ದಾಗ ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ಜಾವೀದ ಇನಾಮದಾರ್ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಅದರಂತೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂಬುದಾಗಿ ತಿಳಿಸಿದ ಬಳಿಕ, ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ತಿಪ್ಪಣ್ಣ ಶೆಳ್ಳಗಿ, ಎಂ. ಪಟೇಲ, ಶಿವಪುತ್ರ ಜವಳಿ, ಚಂದ್ರಪ್ಪ ಮುನಿಯಪ್ಪನವರ, ಮರೆಪ್ಪ ಕ್ರಾಂತಿ, ಚನ್ನಬಸವ ತಳವಾರ, ವೆಂಕಟೇಶ ದೇವಾಪುರ, ರಾಜು ಬಡಿಗೇರಾ, ವಾಸು ಕೋಕಿಲಕರ, ಹಣಮಂತ ರತ್ತಾಳ, ಯಲ್ಲಪ್ಪ ರತ್ತಾಳ, ದೇವೀಂದ್ರಪ್ಪ ವಾಗಣಗೇರಾ, ಭೀಮರಾಯ ಮಂಗಳೂರ, ಆನಂದ, ಆಜ್ಮೀರ್ ಸೇರಿದಂತೆ ಇದ್ದರು.

-----

ಫೋಟೊ:4ವೈಡಿಆರ್8:

ಸುರಪುರದಲ್ಲಿ ಕೊಲೆ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಡಿವೈಎಸ್‌ಪಿಗೆ ಮನವಿ ಸಲ್ಲಿಸಿದರು.

------

ಫೋಟೊ:4ವೈಡಿಆರ್9:

ಕೊಲೆ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಮತ್ತು ಕುಟುಂಬಸ್ಥರು ಸುರಪುರ ನಗರದ ಡಿವೈಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

---000---

Share this article