ಕಾರವಾರ: ಕುಮಟಾ ತಾಲೂಕಿನ ಕತಗಾಲದ ಅಕ್ಷರಕಲಾ ಯುವಕ ಸಂಘ ಆಶ್ರಯದಲ್ಲಿ ನಡೆದ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಮುರ್ಕುಂಡೇಶ್ವರ ಸೌಹಾರ್ದ ಟ್ರೋಫಿಯಲ್ಲಿ ಹೆಗಡೆ ಶಾಂತಿಕಾಂಬಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಾಗರಾಜ್ ಹೆಗಡೆ ಕಡತೋಕ, ಲಕ್ಷ್ಮೀನಾರಾಯಣ ಶಾನಭಾಗ ದಕ್ಕೆ, ರಾಮಚಂದ್ರ ಎನ್.ಪೈ, ಗಣಪತಿ ಎನ್. ಗುನಗಾ, ಅಣ್ಣಪ್ಪ ಮುಕ್ರಿ, ಕೆ.ಎನ್. ಮಂಜು ಅವರನ್ನು ಸನ್ಮಾನಿಸಲಾಯಿತು.
ಪಂದ್ಯಾವಳಿಯ ಪ್ರಥಮ ಬಹುಮಾನವನ್ನು ಪ್ರದೀಪ ನಾಯಕ್ ದೇವರಬಾವಿ ಹಾಗೂ ಗೋಪಾಲಕೃಷ್ಣ ನಾಯಕ್ ಅಂಕೋಲಾ ನೇತೃತ್ವದ "ಶಾಂತಿಕಾಂಬಾ ಹೆಗಡೆ " ತಂಡ, ದ್ವಿತೀಯ ಬಹುಮಾನವನ್ನು ಸೂರಜ್ ನಾಯ್ಕ್ ಸೋನಿ ಮತ್ತು ದೀಪಕ್ ಹನೇಹಳ್ಳಿ ನೇತೃತ್ವದ "ಗುಬ್ಬಿ ರವಿ ಫ್ರೆಂಡ್ಸ್ ಬೆಂಗಳೂರು " ತಂಡ, ತೃತೀಯ ಬಹುಮಾನವನ್ನು ಯುವ ಕ್ರೀಡಾ ಪ್ರೇಮಿಗಳಾದ ರೋಷನ್.ಎನ್.ನಾಯಕ ಕಾರೆಬೈಲ್ ಹಾಗೂ ಪ್ರಶಾಂತ್ ಎಸ್.ನಾಯಕ ಆಂದ್ಲೆ ಅವರ ನೇತೃತ್ವದ "ಚೆನ್ನೈ ಫ್ರೆಂಡ್ಸ್ " ತಂಡ ಹಾಗೂ ಚತುರ್ಥ ಬಹುಮಾನವನ್ನು ರವಿಕುಮಾರ್ ಶೆಟ್ಟಿ ನೇತೃತ್ವದ "ಕೇರಳ ಸ್ಪೈಕರ್ಸ್ " ತಂಡಗಳು ಪಡೆದುಕೊಂಡವು.ದಿ.ರೇಖಾ ಗುರುದತ್ತ ಭಟ್ ಸ್ಮರಣಾರ್ಥ ವೇದಿಕೆಯಲ್ಲಿ ಆಯೋಜಿಸಿದ ಪಂದ್ಯಾವಳಿಯನ್ನು 10 ಸಾವಿರ ಜನರು ವೀಕ್ಷಿಸಿದರು.