ಗತಕಾಲದ ಇತಿಹಾಸ ತೆರದಿಡುವ ವಸ್ತು ಸಂಗ್ರಹಾಲಯಗಳು: ಡಾ. ದೇವರಾಜ

KannadaprabhaNewsNetwork |  
Published : May 20, 2024, 01:36 AM IST
19ಡಿಡಬ್ಲೂಡಿ12ಬಾದಾಮಿಯ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಪುರಾತತ್ವ ಸಂಗ್ರಹಾಲಯದಲ್ಲಿ ಧಾರವಾಡ ವಲಯದ ವತಿಯಿಂದ ಆಯೋಜಿಸಿದ್ದ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಡಾ.ದೇವರಾಜ ಸಾರಂಗಮಠ ಮಾತನಾಡಿದರು.  | Kannada Prabha

ಸಾರಾಂಶ

ವಸ್ತು ಸಂಗ್ರಹಾಲಯಗಳು ಗತಕಾಲದ ಇತಿಹಾಸ ಪ್ರತಿಬಿಂಬಸುವಲ್ಲಿ ಮಹತ್ವದ ಪ್ರಾತವಹಿಸುತ್ತವೆ. ಇವು ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ವಿಚಾರಗಳಿಗೆ ಮತ್ತು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿವೆ ಡಾ. ದೇವರಾಜ ಸಾರಂಗಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ವಸ್ತು ಸಂಗ್ರಹಾಲಯಗಳ ಪ್ರಾಮುಖ್ಯತೆ, ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೇ 19ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಆಚರಿಸಲಾಗುತ್ತದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆ ಧಾರವಾಡ ವಲಯದ ಸಹಾಯಕ ಅಧೀಕ್ಷಕ ಪುರತಾತ್ವವಿದರಾದ ಡಾ. ದೇವರಾಜ ಸಾರಂಗಮಠ ಹೇಳಿದರು.

ಬಾದಾಮಿಯ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಪುರಾತತ್ವ ಸಂಗ್ರಹಾಲಯದಲ್ಲಿ ಧಾರವಾಡ ವಲಯದ ವತಿಯಿಂದ ಆಯೋಜಿಸಿದ್ದ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಮಾತನಾಡಿದರು.

ವಸ್ತು ಸಂಗ್ರಹಾಲಯಗಳು ಗತಕಾಲದ ಇತಿಹಾಸ ಪ್ರತಿಬಿಂಬಸುವಲ್ಲಿ ಮಹತ್ವದ ಪ್ರಾತವಹಿಸುತ್ತವೆ. ಇವು ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ವಿಚಾರಗಳಿಗೆ ಮತ್ತು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂದರು.

ವಸ್ತು ಸಂಗ್ರಹಾಲಯಗಳು ಸಂಶೋಧನೆ ನೈಜತೆಯ ಅಂಶಗಳನ್ನು ಒದಗಿಸಿಕೊಡುತ್ತವೆ. ಹಾಗಾಗಿ, ಇಲ್ಲಿ ಸಂಶೋಧಕರು ಯಾವುದೇ ಪೂರ್ವಗ್ರಹಿತನಾಗದೇ ಬರವಣಿಗೆಯಲ್ಲಿ ತೊಡಗುವದಿಲ್ಲ. ಸಂಶೋಧಕರು ನೈಜತೆ ಹಾಗೂ ವಾಸ್ತು ಸ್ಥಿತಿ ಅಂಶಗಳನ್ನು ಅಳವಡಿಸಿಕೊಳ್ಳುತ್ತಾರೆ. ವಸ್ತು ಸಂಗ್ರಹಾಲಯಗಳಲ್ಲಿ ಪ್ರಾಚ್ಯವಸ್ತು ಪ್ರದರ್ಶನಗಳ ವಿಧಾನಗಳ ಕುರಿತು ವಿವರಿಸಿದರು. ವಸ್ತು ಸಂಗ್ರಹಾಲಯಗಳಲ್ಲಿರುವ ಪ್ರಾಚ್ಯವಸ್ತುಗಳ ಅವಷೇಶಗಳ ಕುರಿತು ತಿಳಿಸಿದರು.

ಇತಿಹಾಸ ಪ್ರಾಧ್ಯಾಪಕ ಪಿ.ಬಿ. ಗೋವರ್ಧನ ಕಾರ್ಯಕ್ರಮ ಉದ್ಘಾಟಿಸಿ, ವಸ್ತು ಸಂಗ್ರಹಾಲಯಗಳು ಗತಕಾಲದ ವೈಭವವನ್ನು ತಿಳಿಸುತ್ತವೆ. ವಸ್ತು ಸಂಗ್ರಹಾಲಯಗಳ ಶೈಕ್ಷಣಿಕ ಹಾಗೂ ಸಂಶೋಧನೆ ಕೇಂದ್ರಗಳಾಗಿವೆ. ವಿಶ್ವದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ವಸ್ತು ಸಂಗ್ರಹಾಲಯಗಳು ಪ್ರಮುಖ ಪಾತ್ರವಹಿಸಿದೆ ಎಂದರು.

ನಿವೃತ್ತ ಮಖ್ಯೋಪಾಧ್ಯಾಯ ಎಸ್.ಎಂ. ಹಿರೇಮಠ, ಛಾಯಾಗ್ರಾಹಕ ಮಂಜುನಾಥ ಹಡಪದ ಹಾಗೂ ವಿದ್ಯಾರ್ಥಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ