ಸಂಗೀತಕ್ಕಿದೆ ತನ್ನತ್ತ ಸೆಳೆಯುವ ಅಗಾಧ ಶಕ್ತಿ

KannadaprabhaNewsNetwork |  
Published : Mar 30, 2025, 03:01 AM IST
೨೯ವೈಎಲ್‌ಬಿ೨:ಯಲಬುರ್ಗಾದ ಎಸ್.ಎ.ನಿಂಗೋಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಕೊಪ್ಪಳದ ಸಂಸ್ಕಾರ ಭಾರತಿ, ಕಿನ್ನಾಳದ ಶಾರದಾ ಸಂಗೀತ ಕಲಾಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

, ಶಿಕ್ಷಣ ಕ್ಷೇತ್ರದಲ್ಲಿ ನಿಂಗೋಜಿ ಮನೆತನದ ಕೊಡುಗೆ ಅಪಾರವಾಗಿದೆ, ನಿಂಗೋಜಿ ತಮ್ಮ ಕುಟುಂಬ ಹಿರಿಯರ ಹೆಸರಿನಲ್ಲಿ ಇಂತಹ ಪ್ರಶಸ್ತಿ ಸಾಧಕರನ್ನು ಗುರುತಿಸಿ ನೀಡುತ್ತಿರುವುದು ಸಂತಸ ತಂದಿದೆ

ಯಲಬುರ್ಗಾ: ಸಂಗೀತ ಎಲ್ಲರನ್ನು ತನ್ನತ್ತ ಸೆಳೆದುಕೊಳ್ಳುವಂತಹ ಆಗಾಧ ಶಕ್ತಿ ಹೊಂದಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು.

ಪಟ್ಟಣದ ಎಸ್.ಎ.ನಿಂಗೋಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಕೊಪ್ಪಳದ ಸಂಸ್ಕಾರ ಭಾರತಿ, ಕಿನ್ನಾಳದ ಶಾರದಾ ಸಂಗೀತ ಕಲಾಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಪಾಲಕರು ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಮಕ್ಕಳಲ್ಲಿ ಬಿತ್ತರಿಸುವತ್ತ ಹೆಚ್ಚು ಗಮನಹರಿಸಬೇಕು. ಸಂಗೀತದ ಪರಂಪರೆ ಉಳಿಸಿ, ಬೆಳೆಸಲು ಇಂತಹ ಕಾರ್ಯಕ್ರಮ ಆಯೋಜನೆ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿದಾಗ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.

ನಿಂಗೋಜಿ ಪ್ರತಿಷ್ಠಾನದಿಂದ ನೀಡಲಾದ ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಪೋಲಿಸಪಾಟೀಲ ಅವರಿಗೆ ಅಪ್ಪ-ಅವ್ವ ಸಮಾಜಸೇವಾ ರತ್ನ ಪ್ರಶಸ್ತಿ ಹಾಗೂ ಶಿಕ್ಷಕಿ ರಾಜೇಶ್ವರಿ ಉತ್ತಮ ಶಿಕ್ಷಕಿ ಪ್ರಶಸ್ತಿ ಮತ್ತು ರೇಖಾ ಎಸ್ ಸವಣೂರ ಅವರಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಪಾಟೀಲ ಹಾಗೂ ಶಿಕ್ಷಕಿ ರಾಜೇಶ್ವರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ನಿಂಗೋಜಿ ಮನೆತನದ ಕೊಡುಗೆ ಅಪಾರವಾಗಿದೆ, ನಿಂಗೋಜಿ ತಮ್ಮ ಕುಟುಂಬ ಹಿರಿಯರ ಹೆಸರಿನಲ್ಲಿ ಇಂತಹ ಪ್ರಶಸ್ತಿ ಸಾಧಕರನ್ನು ಗುರುತಿಸಿ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಬಳಿಕ ಎಸ್ಸೆಸ್ಸೆಲ್ಸಿ ಹಾಗೂ ೭ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಅನೇಕ ವಿದ್ಯಾರ್ಥಿಗಳನ್ನು ನಿಂಗೋಜಿ ಪ್ರತಿಷ್ಠಾನದಿಂದ ಸನ್ಮಾನಿಸಿ, ನಗದು ಬಹುಮಾನ ನೀಡಿದರು.

ಈ ವೇಳೆಯಲ್ಲಿ ಪ್ರಹ್ಲಾದ ಅಗಳಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎ. ನಿಂಗೋಜಿ, ಶಾಮಮೂರ್ತಿ ಐಲಿ, ಗಿರೀಶ ಕಣವಿ, ಲಿಂಗರಾಜ ಬಿಸರಳ್ಳಿ, ಎನ್.ಆರ್. ಕುಕನೂರು, ವಾದಿರಾಜ ಪಾಟೀಲ, ಸಂಗಣ್ಣ ಟೆಂಗಿನಕಾಯಿ, ರೇವಣೆಪ್ಪ ಹಿರೇಕುರಬರ, ಶಿವು ರಾಜೂರು, ಲಚ್ಚಣ್ಣ, ಪವಣಕರ್, ಪ್ರಾಚಾರ್ಯ ಡಾ. ಪ್ರಕಾಶ, ಡಾ. ಎಸ್.ಬಣ್ಣದಭಾವಿ ಮತ್ತಿತರರು ಇದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು