ಸಂಗೀತದಿಂದ ಏಕಾಗ್ರತೆ ಹೆಚ್ಚಳ: ನಿಜಲಿಂಗಪ್ಪ ಮೆಣಸಗಿ

KannadaprabhaNewsNetwork |  
Published : Dec 09, 2024, 12:46 AM IST
7ುಲು7 | Kannada Prabha

ಸಾರಾಂಶ

ಸಂಗೀತ ಮಕ್ಕಳಿಗೆ ಏಕಾಗ್ರತೆ ಹೆಚ್ಚಿಸುತ್ತದೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ಸಂಗೀತ ಮಕ್ಕಳಿಗೆ ಏಕಾಗ್ರತೆ ಹೆಚ್ಚಿಸುತ್ತದೆ ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಿಜಲಿಂಗಪ್ಪ ಮೆಣಸಗಿ ಹೇಳಿದರು. ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಶ್ರೀಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಏರ್ಪಡಿಸಿದ್ದ ಸ್ವರ ಸಿಂಚನ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತವು ಎಲ್ಲ ಬಗೆಯ ಮನಸ್ಸುಗಳಿಗೆ ನೆಮ್ಮದಿ ನೀಡುತ್ತದೆ. ಸಂಗೀತಾಭ್ಯಾಸಕ್ಕೆ ಮಕ್ಕಳು ಹೆಚ್ಚು ಮಹತ್ವ ಕೊಡಬೇಕಿದೆ. ಸಂಗೀತವು ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿ, ಮನಸ್ಸನ್ನು ನಿರ್ಮಲಗೊಳಿಸುವುದಲ್ಲದೇ ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ರಮೇಶ ನರಗುಂದ, ಶಿಕ್ಷಕರಾದ ಬಿ.ಆರ್. ಜೋಶಿ, ಶ್ರೀನಿವಾಸ, ರಜನಿ, ದೈಹಿಕ ಶಿಕ್ಷಕಿ ಗೀತಾಂಜಲಿ, ಹಿರಿಯ ಕಲಾವಿದರಾದ ರಾಜಾಸಾಬ್ ಮುದ್ದಾಬಳ್ಳಿ, ರಾಮಾಂಜನೇಯಲು ಉಪಸ್ಥಿತರಿದ್ದರು.

ಸಂಗೀತ ಕಾರ್ಯಕ್ರಮದಲ್ಲಿ ಕ್ಲಾರಿಯೋನೆಟ್ ವಾದನವನ್ನು ರಾಮಾಂಜನೇಯಲು, ತಬಲಾ ಸೊಲೋ ರಾಜಾಸಾಬ್ ಮುದ್ದಾಬಳ್ಳಿ, ಹಾರ್ಮೋನಿಯಂ ಸೊಲೋ ರಾಮಚಂದ್ರಪ್ಪ ಉಪ್ಪಾರ ನುಡಿಸಿದರು. ವಚನ ಗಾಯನವನ್ನು ಪಂಚಾಕ್ಷರ ಕುಮಾರ, ಭಕ್ತಿ ಸಂಗೀತ ಶಿವಪ್ಪ ಹುಳ್ಳಿ, ದಾಸವಾಣಿಯನ್ನು ರವಿ ಕಾಶೆಟ್ಟಿ, ವಚನಸಂಗೀತವನ್ನು ದೊಡ್ಡಬಸವ ನಾಗಲೀಕರ ಹಾಗೂ ಸಮೂಹ ಗಾಯನವನ್ನು ಶಿವರಂಜನಿ ಪಟ್ಟಣಶೆಟ್ಟರು, ಸುಮೇಧಾ ಕುಲಕರ್ಣಿ, ಕಾವ್ಯಾ ಬಣಜಿಗ ನಡೆಸಿಕೊಟ್ಟರು.ಕನ್ನಿಕಾ ಪರಮೇಶ್ವರಿ ದೇವಿಯ ಕಾರ್ತಿಕೋತ್ಸವ:

ಗಂಗಾವತಿ ನಗರದ ಹಿರೇ ಜಂತಕಲ್, ವಿರುಪಾಪುರ, ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ ಕಾರ್ತಿಕ ಮಾಸದ ಕೊನೆಯ ದಿನವಾದ ಶನಿವಾರ ಚಂಪಾ ಷಷ್ಠಿ (ಶ್ರೀ ಸುಬ್ರಹ್ಮಣ್ಯೇಶ್ವರ ಆಚರಣೆ) ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯ ದೀಪೋತ್ಸವ ಕಾಯಕ್ರಮ ಜರುಗಿತು.ದೇವಿಗೆ ವಿಶೇಷ ಅಲಂಕಾರ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.ವಾಸವಿ ಮಹಿಳಾ ಮಂಡಳಿಯ ಸದಸ್ಯರಿಂದ ಭಜನೆ, ಲಲಿತ ಸಹಸ್ರನಾಮ ಪಾರಾಯಣ ಮಾಡಲಾಯಿತು. ಈ ಸಂದರ್ಭ ಸಮಾಜದ ಅಧ್ಯಕ್ಷ ನಾಗರಾಜ ದರೋಜಿ, ಡಿ. ಮಲ್ಲಿಕಾರ್ಜುನ, ಗೋಪಾಲ ಶೆಟ್ಟಿ ಆನೆಗೊಂದಿ, ಡಿ. ವೆಂಕಟೇಶ್, ರುಕ್ಮಿಣಿ ಬಾಯಿ ದಮ್ಮೂರು, ಉಷಾ ಸಿರಿಗೇರಿ, ರೇಖಾ ಜಿ. ವಾಸವಿ, ಯುವಜನ ಸಂಘದ ಯುವಕರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ