ಸುಗಮ ಸಂಗೀತ ತರಬೇತಿ ಸಮಾರೋಪ ಸಮಾರಂಭದಲ್ಲಿ ಈರಣ್ಣವರಕನ್ನಡಪ್ರಭ ವಾರ್ತೆ ಗದಗ
ಪ್ರತಿಯೊಬ್ಬರೂ ಇಂದು ಪ್ರತಿಯೊಂದು ಹಂತದಲ್ಲಿ ಒಂದಿಲ್ಲೊಂದು ಸ್ಪರ್ಧೆ ಎದುರಿಸುತ್ತಿದ್ದೇವೆ. ಇಂದಿನ ಆಧುನಿಕ ಜಗತ್ತಿನಲ್ಲಿ ಬದುಕುತ್ತಿರುವ ನಮಗೆ ಟಿವಿ,ಕಂಪ್ಯೂಟರ್, ಇಂಟರ್‌ನೆಟ್ ಇನ್ನೂ ಮುಂತಾದ ಇಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮ ಮನಸುಗಳನ್ನು ಕೇಂದ್ರಿಕರಿಸಿವೆ.ಇಂತಹ ಒತ್ತಡ ಮುಕ್ತ ಜೀವನಕ್ಕೆ ಸಂಗೀತ ಸಹಕಾರಿ ಎಂದು ಕಲಾವಿದ ಬಸವರಾಜ ಈರಣ್ಣವರ ಹೇಳಿದರು.ಅವರು ಇತ್ತೀಚೆಗೆ ಗದಗ ತಾಲೂಕು ಹುಯಿಲಗೋಳ ಗ್ರಾಮದಲ್ಲಿ ಕರ್ನಾಟಕ ಸರ್ಕಾರ, ಸಂಗೀತ ಮತ್ತು ನೃತ್ಯ ಅಕಾಡೆಮಿ ಬೆಂಗಳೂರು ಹಾಗೂ ಜೇನುಗೂಡು ಜಾನಪದ ಕಲಾತಂಡ ಹುಯಿಲಗೋಳ ಸಂಯುಕ್ತ ಆಶ್ರಯದಲ್ಲಿ ನಡೆದ ಸುಗಮ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗ್ರಾಪಂ ಸದಸ್ಯ ಮಿಲಿಂದ ಕಾಳಿ, ಸರ್ಕಾರದ ಸೌಲಭ್ಯ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದರ ಜತೆಗೆ ಪಂಚಾಯತಿ ಮಟ್ಟದಲ್ಲಿ ಕಲಾವಿದರಿಗೆ ಸಿಗಬೇಕಾದ ಸೌಲಭ್ಯಗಳನ್ನು ನಾವು ಪ್ರಾಮಾಣಿಕವಾಗಿ ದೊರಕಿಸಿಕೊಡುತ್ತೇವೆ, ಸಂಬಂಧಪಟ್ಟ ಕಲಾವಿದರು ಮತ್ತು ಕಲಾ ತಂಡಗಳು ನಮ್ಮ ಪಂಚಾಯತಿಗೆ ಅರ್ಜಿ ನೀಡಿ ಸದುಪಯೋಗ ಪಡೆಯಿರಿ ಎಂದು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಉಪಾಧ್ಯಕ್ಷೆ ನೀಲವ್ವ ಕಡಿ ವಹಿಸಿದ್ದರು. ಗ್ರಾಮದ ಮುದುಕಪ್ಪ ಪೂಜಾರ, ದುರಗಪ್ಪ ಈರಗಾರ, ರಮೇಶ ಕಡಿ ಮುಂತಾದವರು ಪಾಲ್ಗೊಂಡಿದ್ದರು. ಕಲಾವಿದರಾದ ಮೈಲಾರಪ್ಪ ಹರಿಜನ, ಬಾಬು ಚಲವಾದಿ, ಶರಣಪ್ಪ ಈರಣ್ಣವರ, ವಿಶ್ವನಾಥ ಕಾಳಿ, ಪ್ರಭು ಕಡಿ, ಮಂಜುನಾಥ ಲಿಂಗದಾಳ, ಪ್ರಜ್ವಲ್ ಕಾಳಿ, ಪೂಜಾ ಲಿಂಗದಾಳ, ಸುನೀಲ ಈರಣ್ಣವರ, ವೆಂಕಟೇಶ ಪೂಜಾರ ವಿವಿಧ ಸುಗಮ ಸಂಗೀತ, ಗೀತೆಗಳು, ಭಕ್ತಿ ಗೀತೆಗಳು ಮತ್ತು ವಚನಗಳನ್ನು ಪ್ರಸ್ತುಪಡಿಸಿದರು. ಶರಣಪ್ಪ ಯಡಿಯಾಪೂರ ಸ್ವಾಗತಿಸಿ, ನಿರೂಪಿಸಿದರು. ಗೌಡಪ್ಪ ಪವಾಡಿಗೌಡರ ವಂದಿಸಿದರು.