ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಶನಿವಾರ ಪಟ್ಟಣದ ಸಂಗೀತ ಶಿಕ್ಷಕ ಪರಶುರಾಮ ಭಜಂತ್ರಿ ನೇತೃತ್ವದಲ್ಲಿ ನಡಯುತ್ತಿರುವ ಗುರು ಗಂಧರ್ವ ಸಂಗೀತ ಪಾಠ ಶಾಲೆಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಹುಟ್ಟು ಹಾಕುವ ಮೂಲಕ ಸಂಗೀತ ಪ್ರೇಮಿಗಳಿಗೆ ಹಾಗೂ ಸಂಗೀತದ ವಿದ್ಯಾರ್ಥಿಗಳಿಗೆ ಮಹತ್ತರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಸಂಗೀತಕ್ಕೆ ಒಲಿಯದ ಮನವಿಲ್ಲ, ಸಂಗೀತವನ್ನು ಒಂದೇ ದಿನದಲ್ಲಿ ಕಲಿಯಲು ಸಾಧ್ಯವಿಲ್ಲ. ಸಂಗೀತಕ್ಕೆ ನಿರಂತರ ಪರಿಶ್ರಮ ಬೇಕು. ಸಂಗೀತವು ಸಾಗರದಷ್ಟು ವಿಶಾಲ ಮತ್ತು ಆಳವಾಗಿದೆ. ಸಂಗೀತವು ಮನಸ್ಸಿನ ನೆಮ್ಮದಿಗೆ ದಿವ್ಯ ಔಷಧಿಯಾಗಿದೆ ಎಂದು ಹೇಳಿದರು.ಸಂಗೀತ ಕಾರ್ಯಕ್ರಮ ಉದ್ಘಾಟಿಸಿದ ಸಂಗೀತ ವಿದ್ವಾಂಸ ಪಂಡಿತ ಅಶೋಕ ನಾಡಿಗೇರ ಮಾತನಾಡಿ. ಸಂಗೀತಕ್ಕೆ ಯಾವುದೇ ಜಾತಿ, ಭಾಷೆಯ ಹಂಗಿಲ್ಲ. ಸಂಗೀತವು ಎಲ್ಲ ಧರ್ಮಿಯರು ಕಲಿಬಲ್ಲ ಕಲೆಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಪತ್ರಕರ್ತ ಶಿವಲಿಂಗಯ್ಯ ಹೊತಗಿಮಠ, ಕೃಷ್ಣಕುಮಾರ ಕುಲಕರ್ಣಿ ಸೇರಿದಂತೆ ಖ್ಯಾತ ಸಂಗೀತಗಾರರು ಭಾಗವಹಿಸಿದ್ದರು. ಸಂಗೀತ ಪಾಠಶಾಲೆಯ ಶಿಕ್ಷಕ ಪರಶುರಾಮ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.