ರಾಯಚೂರಲ್ಲಿ ನಾಳೆಯಿಂದ ಎರಡು ದಿನ ಸಂಗೀತ ರಸದೌತಣ

KannadaprabhaNewsNetwork |  
Published : Sep 27, 2024, 01:15 AM IST
26ಕೆಪಿಆರ್ಸಿಆರ್ 01:  | Kannada Prabha

ಸಾರಾಂಶ

Two days of Sangeet Rasadautana from tomorrow in Raichur

ಪಂಡಿತ್‌ ಡಾ.ಪುಟ್ಟರಾಜ ಕವಿ ಗವಾಯಿ 14ನೇ ಪುಣ್ಯಸ್ಮರಣೆ ನಿಮಿತ್ತ ಸಮ್ಮೇಳನ

ಕನ್ನಡಪ್ರಭ ವಾರ್ತೆ ರಾಯಚೂರು

ಪಂಡಿತ್‌ ಡಾ.ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಪಂಡಿತ ಡಾ.ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯಸ್ಮರಣೆ ನಿಮಿತ್ತ ಸೆ.28 ಮತ್ತು 29ರಂದು ನಗರದ ಸೋಮವಾರಪೇಟೆ ಹಿರೇಮಠದಲ್ಲಿ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಖಜಾಂಚಿ ಪಿ.ಚಿನ್ನಯ್ಯಸ್ವಾಮಿ ಪಟ್ಟದಕಲ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕಲಾವಿದರು ಸಂಗೀತ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ಸಾನಿಧ್ಯ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು ವಹಿಸಲಿದ್ದಾರೆ. 108 ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಹಾಗೂ ಮಂಗಳವಾರಪೇಟೆ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವ ಎನ್‌.ಎಸ್‌. ಬೋಸರಾಜು, ಶಾಸಕರಾದ ಡಾ. ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದರು.

ಟ್ರಸ್ಟ್‌ ಗೌರವಾಧ್ಯಕ್ಷ ರಘುಪತಿ ಪೂಜಾರ ದಿನ್ನಿ ಮಾತನಾಡಿ, ಮೊದಲ ದಿನ ಧಾರವಾಡದ ಶಾಂತಲಿಂಗ ದೇಸಾಯಿ ಕಲ್ಲೂರು, ಮಳೇ ಮಲ್ಲೇಶ ಹೂಗಾರ, ರಘುನಂದನ್‌ ಗೋಪಾಲ ಹೂಗಾರ (ತಬಲಾ, ತ್ರಿಬಲಬಂದಿ), ಭಾಗ್ಯಶ್ರೀ ಹೂಗಾರ (ಸಿತಾರ್‌), ಗಂಗಾವತಿ ವಿದ್ಯಾ ಸಾಲಿಮಠ (ಗಾಯನ), ಸಿಂಧನೂರಿನ ಶಾಂತವೀರಯ್ಯ ಸ್ವಾಮಿ (ದಿಲ್‌ರುಬಾ), ರಾಮಾಂಜನೇಯ್ಯ ಸಾಲುಂಚಿಮರ (ಕ್ಲಾರಿಯೋನೆಟ್), ಗದಗ ಸುಕ್ರುಸಾಬ್‌ ಮುಲ್ಲಾ (ಹಾರ್ಮೋನಿಯಂ) ಸಂಗೀತ ಪ್ರದರ್ಶನ ನೀಡಲಿದ್ದಾರೆ. ಇದೇ ವೇಳೆ ಹಿರಿಯ ರಂಗಭೂಮಿ ಕಲಾವಿದ ಶರಣಪ್ಪ ಹೂಗಾರ ಕವಿತಾಳ ಮತ್ತು ಸಂಗೀತಕಲಾವಿದ ಬೂದೆಪ್ಪ ಆಶಾಪುರ ಅವರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.

ಸಮ್ಮೇಳನದ ಎರಡನೇ ದಿನ ಮಂಗಳೂರಿನ ಮೌನೇಶ ಕುಮಾರ ಛಾವಣಿ (ಗಾಯನ)ಸ ಬೆಂಗಳೂರಿನ ಎಂ.ನಾಗೇಶ (ತಬಲಾ), ನಿಜಗುಣಿ ಹೂಗಾರ ದಿಂಡವಾರ (ಹಾರ್ಮೋನಿಯಂ), ಗದಗ ಸುಕ್ರುಸಾಬ್‌ ಮುಲ್ಲಾ ಅವರಿಂದ ಜುಗಲಬಂದಿ ಪ್ರದರ್ಶನ ನಡೆಯಲಿದ್ದು, ನಂತರ ಸ್ಥಳೀಯ ಕಲಾವಿದರು ಸಂಗೀತ ಸೇವೆ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ ಅಧ್ಯಕ್ಷ ಈರಣ್ಣ ಹೂಗಾರ ಜಾಲಿಬೆಂಚಿ, ಉಪಾಧ್ಯಕ್ಷ ಎಸ್‌.ಪಿ.ಸಿದ್ದಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಎಸ್‌.ರಘುಕುಮಾರ, ಸಹಕಾರ್ಯದರ್ಶಿಗಳಾದ ಎನ್‌.ಕೆ. ಶಂಕ್ರಪ್ಪ, ವಿಜಯ ಕುಮಾರ ದಿನ್ನಿ, ಶಿವಾನಂದ ಬಂಕೊಳ್ಳಿ, ಬಸವರಾಜ ಕೊತ್ತದೊಡ್ಡಿ ಇದ್ದರು.

----------------------

26ಕೆಪಿಆರ್ಸಿಆರ್ 01

ಪಿ.ಚಿನ್ನಯ್ಯಸ್ವಾಮಿ ಪಟ್ಟದಕಲ್ ಮತ್ತು ರಘುಪತಿ ಪೂಜಾರ ದಿನ್ನಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ