ಮೈಸೂರು ಅರಮನೆ ವಾದ್ಯಗೋಷ್ಠಿ ತಂಡದಿಂದ ಸಂಗೀತ ರಸ ಸಂಜೆ

KannadaprabhaNewsNetwork |  
Published : Aug 20, 2025, 01:30 AM IST
18ಕೆಎಂಎನ್ ಡಿ23 | Kannada Prabha

ಸಾರಾಂಶ

ಗಜೇಂದ್ರ ಮೋಕ್ಷ ಕೊಳದ ಆವರಣದಲ್ಲಿ ಪ್ರಶಾಂತ ವಾತಾವರಣವಿದೆ. ಅರಮನೆ ವಾದ್ಯಗೋಷ್ಠಿ ತಂಡದಿಂದ ಸಂಗೀತ ರಸ ಸಂಜೆ ಮನಸ್ಸಿಗೆ ಮುದ ನೀಡುತ್ತದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಶ್ರೀಕಾಳಿಕಾಂಬ ದೇವಾಲಯ ಬಳಿಯ ಶ್ರೀಗಜೇಂದ್ರ ಮೋಕ್ಷ ಕಲ್ಯಾಣಿ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೈಸೂರು ಅರಮನೆ ವಾದ್ಯಗೋಷ್ಠಿ ತಂಡದಿಂದ ಸಂಗೀತ ರಸ ಸಂಜೆ ನಡೆಯಿತು.

ಇದಕ್ಕೂ ಮುನ್ನ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಎಎಸ್ಪಿ ಗಂಗಾಧರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಜೇಂದ್ರ ಮೋಕ್ಷ ಕೊಳದ ಆವರಣದಲ್ಲಿ ಪ್ರಶಾಂತ ವಾತಾವರಣವಿದೆ. ಅರಮನೆ ವಾದ್ಯಗೋಷ್ಠಿ ತಂಡದಿಂದ ಸಂಗೀತ ರಸ ಸಂಜೆ ಮನಸ್ಸಿಗೆ ಮುದ ನೀಡುತ್ತದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕೆಂದು ಆಶಿಸಿದರು.

ಗುತ್ತಲು ಸೃಷ್ಟಿ ಮಹಿಳಾ ಸಂಘಟನೆ ಅಧ್ಯಕ್ಷ ಮಧು ಅವರ ತಂಡ ಶ್ರೀಮಹಾವಿಷ್ಣುವಿನ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಉದಯೋನ್ಮುಖ ಕಲಾವಿದರಿಂದ ಭರತನಾಟ್ಯ ಜರುಗಿತು. ಅರಮನೆ ವಾದ್ಯಗೋಷ್ಠಿ ತಂಡದ ಸಂಗೀತ ವಿದ್ವಾಂಸ ಕೃಷ್ಣಮೂರ್ತಿ ಆಚಾರ್ ಅವರ ನೇತೃತ್ವದ ತಂಡದಿಂದ ಮಾಂಡವ್ಯ ಯೋಗ ಮಂಟಪದಲ್ಲಿ ಶಾಸ್ತ್ರೀಯ ಸಂಗೀತ ಆರಂಭವಾಯಿತು. ಕೃಷ್ಣಮೂರ್ತಿ ಆಚಾರ್ ಹಾಗೂ ವಿದ್ಯಾಸಾಗರ್ ಅವರ ಹಾಡುಗಾರಿಕೆಗೆ ಮೃದಂಗದಲ್ಲಿ ನಟರಾಜು, ಪಿಟೀಲಿನಲ್ಲಿ ಚೇತನ್, ಘಟಂನಲ್ಲಿ ರಮೇಶ್ ಸಾಥ್ ನೀಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಹಲವು ಕೃತಿಗಳನ್ನು ಪ್ರಸ್ತುತಪಡಿಸಿದ ಬಳಿಕ ಸುಗಮ ಸಂಗೀತದ ಮೂಲಕವೂ ಪ್ರೇಕ್ಷಕರ ಮನರಂಜಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಂ.ಬಿ.ರಮೇಶ್, ಮಹೇಂದ್ರನ್, ನಂದೀಶ್, ಹನುಮಂತು, ರೋಟರಿ ಅಧ್ಯಕ್ಷರಾದ ರಾಜಶೇಖರ್, ಕಾರ್ಯದರ್ಶಿ ಸತ್ಯನಾರಾಯಣ, ಸೂರಜ್,ಚಿತ್ರ, ಅಭಿ, ಆಶಾ, ಧನ್ಯತಾ, ರಶ್ಮಿತಾ, ಯಶ್ಮಿತಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಜಿಲ್ಲಾ ಮಟ್ಟದ ಸಲಹಾ ಸಮಿತಿಗೆ ನೇಮಕ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಜಿಲ್ಲಾ ಮಟ್ಟದ ಸಲಹಾ ಸಮಿತಿ (ಭಾರತ ಸರ್ಕಾರದ ನಗರಾಭಿವೃದ್ಧಿ ಕಾರ್ಯಕ್ರಮಗಳು)ಗೆ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ನಗರಸಭೆ ಮಾಜಿ ಸದಸ್ಯೆ ಪದ್ಮಾವತಿ, ಆರ್‌ಎಪಿಸಿಎಂಎಸ್ ನಿರ್ದೇಶಕ ಸಿ.ಕೆ.ಪಾಪಯ್ಯ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ