ಮೈಸೂರು ಮಾದರಿಯಲ್ಲಿ ಜರುಗಿದ ಮಸ್ಕಿ ಜಂಭೂ ಸವಾರಿ

KannadaprabhaNewsNetwork |  
Published : Oct 18, 2024, 12:21 AM IST
17-ಎಂಎಸ್ಕೆ-1 | Kannada Prabha

ಸಾರಾಂಶ

ಮಸ್ಕಿ ಪಟ್ಟಣದಲ್ಲಿ ಅಶೋಕ ವೃತ್ತದದ ಬಳಿ ಜಂಭೂ ಸವಾರಿ ಆಗಮಿಸಿದ ದೃಶ್ಯ.

ಕನ್ನಡಪ್ರಭ ವಾರ್ತೆ ಮಸ್ಕಿ

ಪಟ್ಟಣದ ಶ್ರೀ ಭ್ರಮರಾಂಬ ದೇವಿಗೆ ಮಹಿಳೆಯರಿಂದ ಕುಂಭಾಭಿಷೇಕ, ಕುಂಕುಮಾರ್ಚಾನೆ, ಸಹಸ್ರ ಬಿಲ್ವಾರ್ಚಾನೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಟ್ಟಣದಲ್ಲಿ ಗುರುವಾರ ಅಶೋಕ ವೃತ್ತದದ ಬಳಿ ಮೈಸೂರು ದಸರಾ ಮಾದರಿಯಲ್ಲಿ ಆನೆಯ ಮೇಲೆ ಮಂಟಪ ಕಟ್ಟಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಜಂಭೂ ಸವಾರಿಗೆ ಗಚ್ಚಿನ ಹಿರೇಮಠದ ಷ.ಭ್ರ.ಶ್ರೀವರರುದ್ರಮುನಿ ಶಿವಾಚಾರ್ಯರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಗಂಗಾಸ್ಥಳದಲ್ಲಿ ದೇವಿ ಮೂರ್ತಿಗೆ ಹಾಗೂ ಕುಂಭಗಳಿಗೆ ಪೂಜೆ ಸಲ್ಲಿಸಲಾಯಿತು. ಗಜಲಕ್ಷ್ಮಿಯ ಜಂಭೂ ಸವಾರಿ ಮೆರವಣಿಗೆ ಅಶೋಕ ವೃತ್ತದ ಮೂಲಕ ಅಗಸಿ ಮಾರ್ಗವಾಗಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿಂದ ದೈವದಕಟ್ಟೆ, ಮಲ್ಲಿಕಾರ್ಜುನ ದೇವಸ್ಥಾನದ ಮುಂಭಾಗದಿಂದ ಕನಕ ವೃತ್ತಕ್ಕೆ ಆಗಮಿಸಿ ನಂತರ ಶ್ರೀಭ್ರಮರಾಂಬ ದೇವಸ್ಥಾನಕ್ಕೆ ಮೆರವಣಿಗೆ ಆಗಮಿಸಿತು.

ಗೊರವರ ಕುಣಿತ, ನಂದಿ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನ ಆಗಮಿಸಿದ್ದ ಭಕ್ತರಲ್ಲಿ ಮೈನವಿರೇಳಿಸಿತು.

ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಪಾಗೌಡ ಪಾಟೀಲ ತಹಸೀಲ್ದಾರ ಡಾ.ಮಲ್ಲಪ್ಪ ಕೆ.ಯರಗೋಳ ಹಾಗೂ ಮಹಾದೇವಪ್ಪಗೌಡ ಪಾಟೀಲ, ಪ್ರಕಾಶ ಧಾರಿವಾಲ, ಸಿದ್ದಲಿಂಗಯ್ಯ ಗಚ್ಚಿನಮಠ, ಅಂದಾನಪ್ಪ ಗುಂಡಳ್ಳಿ, ಶ್ರೀಶೈಲಪ್ಪ ಬ್ಯಾಳಿ, ಬಸನಗೌಡ ಪೊಲೀಸ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಪುರ, ನಾಗರಾಜ ಸಜ್ಜನ್, ಮಲ್ಲಿಕಾರ್ಜುನ ಕ್ಯಾತ್ನಟ್ಟಿ, ಸಿದ್ದಣ್ಣ ಮುಳ್ಳುರು, ಬಸವರಾಜ ಬಾಗೋಡಿ, ವೀರೇಶಪ್ಪ ಬಾಳೆಕಾಯಿ ಸೇರಿದಂತೆ ಅನೇಕರು ಪಾಲ್ಗೊಂಡರು.

ಸಿಪಿಐ ಬಾಲಚಂದ್ರ ಡಿ.ಲಕ್ಕಂ ಹಾಗೂ ಪಿಎಸ್ಐ ತಾರಬಾಯಿ ಬಂದೋಬಸ್ತ ಏರ್ಪಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ