ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡಿ ಅದನ್ನು ದಲಿತರು, ಹಿಂದುಳಿದ ವರ್ಗಕ್ಕೆ ಕೊಡಲಿ. ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಶ್ರೀರಾಮಸೇನೆ ಸಂಘಟನೆ ಶೋಭಾಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಂ ಮೀಸಲಾತಿ ರದ್ದುಮಾಡಿ ಹಿಂದೂಗಳಿಗೆ ಹಂಚಬೇಕು. ರಂಜಾನ್ ವೇಳೆ ಎಲ್ಲಾದರೂ ಕಲ್ಲು ಹಾಕಿದ್ದಾರಾ. ಗಣೇಶ ಹಬ್ಬದ ವೇಳೆ ಮಾತ್ರ ಕಲ್ಲು ತೂರಾಟ ಯಾಕೆ. ರಾಮನವಮಿ ವೇಳೆ ಯಾಕೆ ಇವರಿಗೆ ಉರಿಯುತ್ತೆ, ಹಿಂದೂಗಳು ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕು, ಆದರೆ ಮುಸ್ಮಿಮರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ. ರಾಜ್ಯದಲ್ಲಿ ಮುಂದೆ ಹಿಂದೂಪರ ಸರ್ಕಾರ ಅಧಿಕಾರಕ್ಕೆ ಬರಬೇಕು, ನಾಟಕ ಆಡೋರು ಬೇಡ ಎಂದು ಭವಿಷ್ಯ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಸಿಎಂ ಆಗಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರನ್ನು ಆ ಸಂಬಂಧ ಭೇಟಿಯಾಗಿದ್ದಾರೆ. ಆದರೆ ಅದಕ್ಕೆ ನರೇಂದ್ರ ಮೋದಿ ಒಪ್ಪಿಲ್ಲ. ಅದಕ್ಕಾಗಿ ಇನ್ನೂ ಡಿ.ಕೆ. ಸುರೇಶ್ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ನಮ್ಮನ್ನು ಬೆಳೆಸಿದ ಪಕ್ಷ. ನಾನು ಬಿಎಸ್‌ವೈ ರೀತಿ ಪಕ್ಷಕ್ಕೆ ಮರು ಸೇರ್ಪಡೆ ಆಗೋಲ್ಲ ಎಂದಿದ್ದರು, ನಾನು ಹಾಗೇ ಎಲ್ಲಾ ಹೇಳೊಕಾಗಲ್ಲ. ಉಪ್ಪು ತಿಂದಿದ್ದು ಬಿಜೆಪಿಯಿಂದ. ನಮಗೆಲ್ಲಾ ಐಪಿಎಲ್ ಟಿಕೆಟ್ ಬೇಕು ಎಂದು ಕೇಳುತ್ತಾರೆ ಎಂದರೆ ಎಷ್ಟೊಂದು ನಾಚಿಕೆಗೇಡಿನ ಶಾಸಕರಿದ್ದಾರೆ ನೋಡಿ. ರಾಜ್ಯದಲ್ಲಿ ಆಯಾ ಕ್ಷೇತ್ರದ ಸಮಸ್ಯೆಗಳು, ನೀರಾವರಿ ಯೋಜನೆ, ಕೈಗಾರಿಕೆ ಬಗ್ಗೆ ಚರ್ಚೆಯಾಗಬೇಕು. ಅದು ಬಿಟ್ಟು ಐಪಿಎಲ್ ಟಿಕೆಟ್ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದರಿಂದ ಶಾಸಕರ ಘನತೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.