ಸಿ.ಎ.ಇಟ್ನಾಳಮಠ
ಕನ್ನಡಪ್ರಭ ವಾರ್ತೆ ಅಥಣಿಕರ್ನಾಟಕದಲ್ಲಿ ಅಥಣಿ ತಾಲೂಕು ಭೀಕರ ಬರ ಪ್ರದೇಶ. ಜನವೇರಿ ತಿಂಗಳಿಂದ ಜೂನ್‌ದವರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಪ್ರಸಂಗ ಪ್ರತಿ ವರ್ಷ ಎದುರಾಗುತಿತ್ತು. ಶಾಶ್ವತ ಬರಗಾಲ ಪ್ರದೇಶ ದಿಂದ ಮುಕ್ತ ಮಾಡಲು ಹಿಪ್ಪರಗಿ ಅಣೆಕಟ್ಟಿನ ಕಲ್ಪನೆ ಮತ್ತು ನೀಲಿ ನಕ್ಷೆಯನ್ನು ಮತ್ತು ಯೋಜನೆ ರೂಪಿಸಿದ ದಿ.ಮಾಜಿ ಸಿಎಂ ಡಿ.ದೇವರಾಜ ಮುಂದೆ ರಾಜಕೀಯ ಒತ್ತಡ, ಜನ ಪ್ರತಿನಿಧಿಗಳ ಒತ್ತಡ, ಗುತ್ತಿಗೆದಾರರ ನಿರ್ಲಕ್ಷ್ಯ ಹೀಗೆ ಹಲವು ಅನೇಕ ಸಮಸ್ಯೆಗಳಿಗೆ ಸಿಲುಕಿ ಮೂಲೆಗುಂಪಾಗಿತ್ತು.
ಕರ್ನಾಟಕ ಮುಖ್ಯಮಂತ್ರಿಗಳಾದ ಮೇಲೆ ಎಸ್.ಎಂ.ಕೃಷ್ಣಾ ಅವರು ಅಥಣಿ ತಾಲೂಕಿಗೆ 2002ರ ಆಗಸ್ಟ್ 16ರಂದು ಭೇಟಿ ನೀಡಿದ್ದರು. ಆಗಿನ ಅಥಣಿ ಶಾಸಕರಾದ ಶಹಾಜಾನ್ ಡೊಂಗರಗಾಂವ ಮತ್ತು ಜಲಸಂಪನ್ಮೂಲ ಸಚಿವರಾದ ಎಚ್.ಕೆ.ಪಾಟೀಲರು ಹಿಪ್ಪರಗಿ ಅಣೆಕಟ್ಟಿನ ನಿಜ ಸ್ಥಿತಿ ವಿವರಿಸಿದರು. ತಕ್ಷಣ ಎಸ್.ಎಂ.ಕೃಷ್ಣಾ ಅವರು ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹಳೆ ಗುತ್ತಿಗೆದಾರರನ್ನು ರದ್ದು ಮಾಡಿ ಗ್ಯಾಮನ್ ಇಂಡಿಯಾ ಕಂಪನಿಗೆ ಗುತ್ತಿಗೆಯನ್ನು ಟೈಮ್ ಬಾಂಡ್ ಆಧಾರ ಮೇಲೆ ನೀಡಿದರು. ಇದರ ಫಲಶೃತಿಯಾಗಿ 5 ವರ್ಷ ಕಾಲಮಿತಿಯಲ್ಲಿ ಹಿಪ್ಪರಗಿ ಅಣೆಕಟ್ಟು ಮುಗಿದು ಗೇಟ್ ಅಳವಡಿಸಿ ನೀರು ಸಂಗ್ರಹಿಸಲಾಯಿತು. ಸಕ್ಕರೆ ಕಾರ್ಖಾನೆಗೆ ಜೀವ ತುಂಬಿದರು. ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ 1981-1982ರಲ್ಲಿ ಪ್ರಾರಂಭವಾಗಬೇಕಾಗಿದ್ದು, ಇದು ಸಹ ರಾಜಕೀಯ ಒತ್ತಡದಲ್ಲಿ ಮುಳುಗಿ ಹೋಗಿತ್ತು. ಎಸ್.ಎಂ.ಕೃಷ್ಣಾ ಅವರು ಎನ್.ಸಿ.ಆರ್.ಡಿ ಯಿಂದ ವಿಶೇಷ ಅನುದಾನ ಒದಗಿಸುವುದರ ಮೂಲಕ ಸರ್ಕಾರದ ವಿಶೇಷ ಅನುದಾನ ಬಿಡುಗಡೆ ಮಾಡಿ 2002ರಲ್ಲಿ ಕಬ್ಬು ನುರಿಸುವ ಕೆಲಸ ಆರಂಭಗೊಳ್ಳುವಂತೆ ಮಾಡಿದರು.ಕರಿಮಸೂತಿ ಏತ ನೀರಾವರಿ ಯೋಜನೆ:ಹಿಪ್ಪರಗಿ ಅಣೆಕಟ್ಟಿ ನೀರಾವರಿ ಯೋಜನೆಯಲ್ಲಿ ಕರಿಮಸೂತಿ ಏತ ನೀರಾವರಿ ಯೋಜನೆ ಇರಲಿಲ್ಲ. ಇದರಿಂದಾಗಿ ನಿಜವಾದ ಬರಪ್ರದೇಶಗಳು ವಂಚಿತವಾಗಿದ್ದವು. ನೀರಾವರಿ ಇಲಾಖೆ ಹಣಕಾಸು ಇಲಾಖೆ ಜಂಟಿಯಾಗಿ ಹಣಕಾಸಿನ ಮತ್ತು ತಾಂತ್ರಿಕ ಅಡತಡೆ ವರದಿ ನೀಡಿದ್ದವು. ಇದರಿಂದ ಈ ಯೋಜನೆ ಕೈ ಬಿಟ್ಟಿತ್ತು. ಸಚಿವ ಸಂಪುಟದಲ್ಲಿ ಸಹ ತಿರಸ್ಕಾರವಾಗಿತ್ತು. ಆಗ ನೀರಾವರಿ ಸಚಿವರಾದ ಎಂ.ಕೆ.ಪಾಟೀಲ ಮತ್ತು ನೀರಾವರಿ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ಮಾಡಿದರು. ಈ ಸಭೆಯಲ್ಲಿ ಅಂದಿನ ಶಾಸಕರಾದ ಶಹಾಜಾನ್ ಡೊಂಗರಗಾಂವ, ಜಮಖಂಡಿ ಶಾಸಕ ರಾಮಣ್ಣ ಕಲ್ಲೂತ್ತಿ, ಜಿ.ಟಿ.ಪಾಟೀಲರು ಹಾಜರಿದ್ದ ಸಭೆಯಲ್ಲಿ ಈ ಯೋಜನೆ ಅವಶ್ಯಕತೆಯ ಮನವರಿಕೆ ಮಾಡಿಕೊಟ್ಟರು. ಆಗ ಮುಂದಿನ ಸಚಿವ ಸಂಪುಟದಲ್ಲಿ ಈ ಯೋಜನೆ ಪ್ರಸ್ತಾವನೆಗೆ ಆಡಳಿತಾತ್ಮಕ ಮಂಜೂರಾತಿ ಮಾಡಿದ್ದು ಎಸ್.ಎಂ.ಕೃಷ್ಣಾ.ಹಿಪ್ಪರಗಿ ಅಣೆಕಟ್ಟಿನ ಯೋಜನೆಯಲ್ಲಿ ಕರಿಮಸೂತಿ ಅಣೆಕಟ್ಟಿನ ಯೋಜನೆ ಸೇರಿಸಬೇಕು. ಇಲ್ಲವಾದರೇ ನನ್ನ ರಾಜೀನಾಮೆ ಸ್ವೀಕಾರ ಮಾಡಬೇಕೆಂದು ಎಸ್.ಎಂ.ಕೃಷ್ಣಾ ಅವರಿಗೆ ರಾಜೀನಾಮೆ ಪತ್ರವನ್ನು ಅಂದಿನ ಶಾಸಕರಾದ ಶಹಾಜಾನ್ ಡೊಂಗರಗಾಂವ ಸಲ್ಲಿಸಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದು.
ಎಸ್.ಎಂ.ಕೃಷ್ಣಾ ಅವರ ಕಾಲವಧಿಯಲ್ಲಿ ನಾನು ಶಾಸಕನಾಗಿ ಕೆಲಸ ಮಾಡಿದ್ದೇನೆ. ಅಥಣಿ ತಾಲೂಕಿನ ಅನೇಕ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರು. ಒಬ್ಬ ಸರಳ ಆದರ್ಶ ರಾಜಕಾರಣಿ.-ಶಹಾಜಾನ ಡೊಂಗರಗಾಂವ, ಮಾಜಿ ಶಾಸಕರು.
ಸರಳ ಸಜ್ಜನಿಕೆಯ ಆದರ್ಶ ನಾಯಕನನ್ನು ಕಳೆದುಕೊಂಡು ಈ ನಾಡು ಬಡವಾಗಿದೆ. ಅವರ ನಡೆ ನಮ್ಮೆಲ್ಲ ಯುವ ರಾಜಕಾರಣಿಗಳಿಗೆ ಆದರ್ಶ ದಾರಿ ದೀಪವಾಗಿದೆ.- ಲಕ್ಷ್ಮಣ ಸಂಗಪ್ಪ ಸವದಿ, ಶಾಸಕರು.