ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಇಂದು ನಿಧನರಾದ ಮುತ್ಸದ್ದಿ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರದ ಮುಂದೆ ಮೇಣದ ಬತ್ತಿ ಹಚ್ಚಿ, ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ,ಮಾಜಿ ಸಚಿವ, ಸ್ವಾಭಿಮಾನದ ಪ್ರತೀಕ ವಿ.ಶ್ರೀನಿವಾಸ್ ಪ್ರಸಾದ್ ರ ನಿಧನ ಇಡೀ ನಾಡಿಗೆ, ಅದರಲ್ಲಿಯೂ ದಲಿತರ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡು, ಬಸವಲಿಂಗಪ್ಪ ಅವರ ಬೂಸಾ ಚಳವಳಿಯ ವೇಳೆ ಹೋರಾಟಗಾರರಾಗಿ ಬೆಳಕಿಗೆ ಬಂದ ವಿ.ಶ್ರೀನಿವಾಸ್ ಪ್ರಸಾದ್, 24ನೇ ವರ್ಷಕ್ಕೆ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲುಂಡು, ನಂತರದ ಚುನಾವಣೆಗಳಲ್ಲಿ ಗೆಲುವು ಸಾಧಿಸಿ, ಸ್ವಾಭಿಮಾನಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು ಎಂದರು.ಏಳು ಬಾರಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ, ಐದು ಬಾರಿ ಸಂಸದರಾಗಿ ಆಯ್ಕೆಯಾದವರು. ಕೇಂದ್ರದ ರೈಲ್ವೆ, ನಾಗರಿಕ ಸರಬರಾಜು ಸಚಿವರಾಗಿ ಕೆಲಸ ಮಾಡಿದ್ದಲ್ಲದೆ,೨೦೧೩ರಿಂದ ೨೦೧೬ವರೆಗೆ ರಾಜ್ಯದ ಸಿದ್ದರಾಮಯ್ಯ ಸರಕಾರದಲ್ಲಿ ಕಂದಾಯ ಸಚಿವರಾಗಿ ಕೆಲಸ ಮಾಡಿ,ಅಪಾರ ಜನಮನ್ನಣೆ ಗಳಿಸಿದವರು.ಬಾಬಾ ಸಾಹೇಬರು ಎಳೆದು ತಂದ ಶ್ರೀನಿವಾಸ ಪ್ರಸಾದ್ ಓರ್ವ ದಲಿತ ಸೂರ್ಯ ಎಂದರು.
ಕಾರ್ಯಕ್ರಮದಲ್ಲಿ ರೆಡ್ಸ್ ರಂಗಯ್ಯ, ಹೆಗ್ಗೆರೆ ಕೃಷ್ಣಪ್ಪ, ಎನ್.ಕೆ.ನಿಧಿಕುಮಾರ್, ಚಲವಾದಿ ಶೇಖರ್, ಗುರುಪ್ರಸಾದ್, ಗಿರೀಶ್, ಸಿದ್ದಲಿಂಗಯ್ಯ,ರಾಮಾಂಜೀ, ಪ್ರತಾಪ್, ರುದ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.