ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಂಚೇನಹಳ್ಳಿ ತಾಲೂಕಿನ ಶ್ಯಾಂಪುರ ಪಂಚಾಯತಿ ವ್ಯಾಪ್ತಿಯ ಗುಯ್ಯಲಹಳ್ಳಿ ಕಾಲೋನಿ, ಗುಯ್ಯಲಹಳ್ಳಿ, ಕಾಮಗಾನಹಳ್ಳಿ, ಸಾದೇನಹಳ್ಳಿ, ಗುಣಿಬೀಳು, ಶ್ಯಾಂಪುರ ಗ್ರಾಮಗಳಿಗೆ ಬೆಳ್ಳಂಬೆಳಗ್ಗೆ ಸಂಚರಿಸಿ ಜನಸಾಮಾನ್ಯರ ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ಕೇಳಿ ಪರಿಹಾರ ನೀಡುವ ಭರವಸೆ ನೀಡಿದರು.
ಅಹವಾಲು ಆಲಿಸಿದ ಶಾಸಕಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಗ್ರಾಮಸ್ಥರೊಂದಿಗೆ ನೆಲದ ಮೇಳೆ ಕುಳಿತು ಸಂವಾದ ನಡೆಸಿದರು. ಗ್ರಾಮಸ್ಥರು ಮೂಲಸೌಕರ್ಯಗಳ ಕೊರತೆ, ಕಂದಾಯ, ಪಿಂಚಣಿ ಸಮಸ್ಯೆಗಳನ್ನು ಸೇರಿದಂತೆ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಜಾಗದ ಒತ್ತುವರಿ ತೆರವು, ಬಸ್ ವ್ಯವಸ್ಥೆ, ಸ್ಮಶಾನದ ಜಾಗ ಮತ್ತು ರಸ್ತೆ, ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಹಾಗೂ ಆರೋಗ್ಯ ಸಮಸ್ಯೆಗಳು ಒಳಗೊಂಡಂತೆ ಹಲವಾರು ಸಮಸ್ಯೆಗಳನ್ನು ಜನರು ಶಾಸಕರ ಬಳಿ ಹೇಳಿಕೊಂಡರು.
ಕ್ಷೇತ್ರಕ್ಕೆ ಸೌಲಭ್ಯ ಕಲ್ಪಿಸುವ ಗುರಿ
ಬಡವರ ಬದುಕು ಬಹಳಷ್ಟು ಕಷ್ಟಕರವಾಗಿರುತ್ತೆ ಸರ್ಕಾರದ ವತಿಯಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸುವುದೆ ನನ್ನ ಏಕೈಕ ಉದ್ದೇಶ. ಜನರಿಗೆ ದೊಡ್ಡ ದೊಡ್ಡ ಕನಸು ತೋರಿಸುವವರು ಒಂದೊಮ್ಮೆ ಹಳ್ಳಿಗಳಿಗೆ ಬಂದು ಬಡವರ ಬದುಕು ನೋಡಲಿ ಬಡತನ ಏನೆಂಬುದನ್ನು ತಿಳಿಯಬಹುದು. ನನ್ನ ಕ್ಷೇತ್ರದ ಜನರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದೇ ನನ್ನ ಗುರಿ ಎಂದರು.ಶಾಸಕರೊಂದಿಗೆ ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ, ಅಬಕಾರಿ ಇನ್ಸ್ ಪೆಕ್ಟರ್ ಮಂಜುನಾಥ್,ಮುಖಂಡರಾದ ಅರವಿಂದ್, ಲಕ್ಷ್ಮೀಪತಿ,ನಾಗಭೂಷಣ್, ವಿನಯ್ ಬಂಗಾರಿ, ರಘು, ಆಹಾರ, ಅಬಕಾರಿ,ಬೆಸ್ಕಾಂ, ಆರೋಗ್ಯ, ಪೋಲಿಸ್ ಇಲಾಖೆಗಳ ತಾಲ್ಲೂಕು ಪಂಚಾಯತಿ,ಗ್ರಾಮ ಪಂಚಾಯತಿ,ಅಧಿಕಾರಿಗಳು, ಮುಖಂಡರು,ಗ್ರಾಮಸ್ಥರು ಇದ್ದರು..