ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
75 ಲಕ್ಷ ರು. ವೆಚ್ಚದಲ್ಲಿ ಪಟ್ಟಣದ ಹೊರ ವಲಯದಲ್ಲಿರುವ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಅನುದಾನದಲ್ಲಿ ಶಾದಿ ಮಹಲ್‌ಗೆ ಹಣ ನೀಡಲು ಅವಕಾಶವಿಲ್ಲ. ಆದರೂ 4 ಕೋಟಿ ರು. ವೆಚ್ಚದಲ್ಲಿ ಏರ್ ಕಂಡೀಷನ್‌ವುಳ್ಳ ಶಾದಿ ಮಹಲ್ ಕಟ್ಟಿಸಲಾಗುತ್ತಿದೆ. ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮನವೊಲಿಸಿ ಶಾದಿ ಮಹಲ್ ನಿರ್ಮಾಣಕ್ಕೆ ಅನುದಾನ ತಂದಿದ್ದೆ ಎಂದರು.ಹುಟ್ಟು-ಸಾವಿನ ನಡುವೆ ಇರುವ ಜೀವನ ಅತ್ಯಂತ ಪವಿತ್ರವಾದುದು. ಮನುಷ್ಯತ್ವವಿರುವ ಎಲ್ಲರೂ ಅವಕಾಶ ಸಿಕ್ಕಾಗ ಹತ್ತಾರು ಜನ ಮೆಚ್ಚುವ ರೀತಿ ಕೆಲಸ ಮಾಡಬೇಕು. ಅದೆ ನಿಜವಾದ ಮಾನವ ಧರ್ಮ. 32 ವರ್ಷಗಳ ಹಿಂದೆ ಭರಮಸಾಗರದಿಂದ ಪ್ರಥಮ ಬಾರಿ ಸ್ಪರ್ಧಿಸಿ ಈಗ ಐದು ಬಾರಿ ಶಾಸಕನಾಗಿದ್ದೇನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಎಲ್ಲಿ ಯಾರಿಗೆ ನ್ಯಾಯ ಕೊಡಬೇಕೆಂಬುದು ಅಲ್ಲಾನಿಗೆ ಗೊತ್ತಿದೆ. ನನಗೆ ಜಾತಿ ಗೊತ್ತಿಲ್ಲ. ಎಲ್ಲರನ್ನು ಕುಟುಂಬದವರಂತೆ ಕಾಣುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿಯೂ ಗದ್ದಲ ಗಲಾಟೆಗೆ ಅವಕಾಶ ಕೊಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹಗಲು ರಾತ್ರಿ ಪ್ರಾಮಾಣ ಕವಾಗಿ ಶ್ರಮಿಸುತ್ತಿದ್ದೇನೆಂದು ತಿಳಿಸಿದರು.