ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಮನ್ಮುಲ್ ಉಪ ವ್ಯವಸ್ಥಾಪಕ ಕಚೇರಿಯಲ್ಲಿ ವಿವಿಧ ಯೋಜನೆಯಲ್ಲಿ ಅಂದಾಜು 18.85 ಲಕ್ಷ ರು. ವೆಚ್ಚದ ಚೆಕ್ ವಿತರಿಸಿ ಮಾತನಾಡಿ, ಡೇರಿಗಳು ದೇವಸ್ಥಾನಗಳು ಇದ್ದಂತೆ. ಇಲ್ಲಿ ಯಾವುದೇ ರಾಜಕೀಯ, ಭ್ರಷ್ಟಾಚಾರ ಮಾಡುವುದನ್ನು ಸಹಿಸೋದಿಲ್ಲ ಎಂದರು.
ಭ್ರಷ್ಟಾಚಾರಕ್ಕೆ ಅವಕಾಶ ಕೊಡೋದಿಲ್ಲ. ತಾಲೂಕಿನಲ್ಲಿ 24ರಿಂದ 25 ಡೇರಿಗಳಿಗೆ ಸ್ವಂತ ಕಟ್ಟಡಗಳ ವ್ಯವಸ್ಥೆ ಇಲ್ಲದ ಕಾರಣ ಅವುಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಸೋದೆ ನನ್ನ ಗುರಿ. ನಿರ್ದೇಶಕನಾದ ಬಳಿಕ 5 ಕೋಟಿ ಅಧಿಕ ವಿವಿಧ ಯೋಜನೆಯ ಚೆಕ್ ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಎಂದರು.ಒಕ್ಕೂಟದಿಂದ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಸುಂಕಾತೊಣ್ಣೂರು ಗ್ರಾಮದಲ್ಲಿ ನಡೆಸಲು ತೀರ್ಮಾಸಲಾಗಿದೆ. ಶೀಘ್ರವೇ ದಿನಾಂಕ ಘೋಷಣೆ ಮಾಡಲಾಗುವುದು, ಸ್ಪರ್ಧೆಯಲ್ಲಿ ಭಾಗವಹಿಸಲು ತಾಲೂಕಿನ ರಾಸುಗಳಿಗೆ ಮಾತ್ರವೇ ಅವಕಾಶ ನೀಡಲಾಗುವುದು. ಹೊರಗಿನ ಹಸುಗಳಿಗೆ ಅವಕಾಶವಿಲ್ಲ. ಭಾಗವಹಿಸುವ ಹಸುಗಳಿಗೆ ಕಡ್ಡಾಯವಾಗಿ ತಾಲೂಕಿನಲ್ಲಿ ವಿಮೆ ಮಾಡಿಸಿರಬೇಕು ಎಂದರು.
ಮನ್ಮುಲ್ ಒಕ್ಕೂಟ ಹಾಗೂ ಧರ್ಮಸ್ಥಳ ಸಂಘದ ಸಹಯೋಗದಲ್ಲಿ ತಾಲೂಕು ಮಟ್ಟದ ಮಹಿಳಾ ಕ್ರೀಡಾಕೂಟ ಆಯೋಜಿಸಲು ಚಿಂತಿಸಲಾಗಿದೆ. ಕ್ರೀಡಾಕೂಟದಲ್ಲಿ ವಿಜೇತರಿಗೆ ಚಿನ್ನದ ಬಹುಮಾನ ನೀಡುವ ಬಗ್ಗೆ ಶೀಘ್ರವೇ ಘೋಷಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮನ್ಮುಲ್ ಸಹಾಯಕ ಉಪವ್ಯವಸ್ಥಾಪಕ ಡಾ.ಸಂತೋಷ್ ಬುಡುಗೌದ್ರ, ಡಾ.ಪ್ರಕಾಶ್ ಬೆಳಗಲಿ, ಡಾ.ಮಣಿಕಂಠ, ಮಾರ್ಗ ವಿಸ್ತರ್ಣಾಧಿಕಾರಿಗಳಾದ ಮಧುಶಂಕರ್ ಸಿ.ಎಸ್., ನಾಗೇಂದ್ರಕುಮಾರ್, ಪ್ರಜ್ವಲ್ ಗೌಡ,ಉಷಾ ಸೇರಿದಂತೆ ಹಲವರು ಇದ್ದರು.