ಮೈಸೂರು ನಗರಾದ್ಯಂತ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

KannadaprabhaNewsNetwork |  
Published : Jun 05, 2025, 01:57 AM IST
36 | Kannada Prabha

ಸಾರಾಂಶ

ಆಧುನಿಕ ಮೈಸೂರಿನ ನಿರ್ಮಾಣಕ್ಕೆ ನಾಲ್ವಡಿ ಅವರ ಕೊಡುಗೆ ಅಪಾರವಾದದ್ದು. ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಕ್ರಾಂತಿಯ ಮೂಲಕ ಇಡೀ ದೇಶಕ್ಕೆ ಕೊಡುಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಅರಸು ಮಂಡಳಿ ಸಂಘವು ಬುಧವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ವರ್ಧಂತ್ಯುತ್ಸವ ಆಯೋಜಿಸಿತ್ತು.

ತ್ಯಾಗರಾಜ ಅರಸ್ ರಸ್ತೆಯ ಸಂಘದ ಆವರಣದಿಂದ ನಾಲ್ವಡಿ ಅವರ ವರ್ಣಚಿತ್ರವನ್ನು ಹೊತ್ತ ಸ್ತಬ್ಧಚಿತ್ರವು ಕೆ.ಆರ್. ವೃತ್ತಕ್ಕೆ ಮೆರವಣಿಗೆ ತೆರಳಿತು. ಈ ವೇಳೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯಿಂದ ಜಿಲ್ಲಾಡಳಿತ ಆಯೋಜಿಸಿರುವ ಮೆರವಣಿಗೆ ಜತೆ ಸೇರಿ ಕಲಾಮಂದಿರ ತಲುಪಿತು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವರ್ಧಂತಿ ಮಹೋತ್ಸವಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಟಿ.ಎಸ್. ಶ್ರೀವತ್ಸ, ಕೆ.ಆರ್‌. ಕ್ಷೇತ್ರ ಬಿಜೆಪಿ ಅಧ್ಯಕ್ಷ ಯು.ಜಿ. ಗೋಪಾಲ್ ರಾಜೇ ಅರಸ್ ಅತಿಥಿಯಾಗಿ ಪಾಲ್ಗೊಂಡಿದ್ದರು

ಶಾಸಕ ಟಿ.ಎಸ್‌. ಶ್ರೀವತ್ಸ ಮಾತನಾಡಿ, ಆಧುನಿಕ ಮೈಸೂರಿನ ನಿರ್ಮಾಣಕ್ಕೆ ನಾಲ್ವಡಿ ಅವರ ಕೊಡುಗೆ ಅಪಾರವಾದದ್ದು. ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಕ್ರಾಂತಿಯ ಮೂಲಕ ಇಡೀ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಅರಸು ಜನಾಂಗದ ಪ್ರತಿಭಾನ್ವಿತರನ್ನು ಇದೇ ವೇಳೆ ಅಭಿನಂದಿಸಲಾಯಿತು. ಬಳಿಕ ಸಂಸದ ಯದುವೀರ್‌ ಅವರು ನಗರದ ಕೆ.ಆರ್‌. ವೃತ್ತಕ್ಕೆ ಆಗಮಿಸಿ ನಾಲ್ವಡಿ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ, ಗೌರವ ಸಲ್ಲಿಸಿದರು.

ಸಂಘದ ಅಧ್ಯಕ್ಷ ಕೆ. ಮನೋಜ್ ರಾಜ್ ಅರಸ್, ಪದಾಧಿಕಾರಿಗಳಾದ ಶ್ರೀಕಾಂತ್ ಅರಸ್, ಸುಚಿತ್ರಾ, ಗೋಪಿ ಅರಸ್, ಶರತ್‌ ರಾಜೇ ಅರಸ್, ಬಿಜೆಪಿ ಮಾಧ್ಯಮ ಸಂಚಾಲಕ ಮಹೇಶ್‌ರಾಜ್‌ ಅರಸ್‌ ಮೊದಲಾದವರು ಇದ್ದರು.

ನಾಲ್ವಡಿ ಜಯಂತಿ ಅಂಗವಾಗಿ ಮೈಸೂರು ಪಾಕ್ ವಿತರಣೆ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ಹಿತರಕ್ಷಣ ವೇದಿಕೆ ವತಿಯಿಂದ ಮೈಸೂರಿನ ಹೃದಯ ಭಾಗವಾದ ಡಿ. ದೇವರಾಜ ಅರಸು ರಸ್ತೆಯಲ್ಲಿ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜಯಂತಿ ಅಂಗವಾಗಿ ಮೈಸೂರ್ ಪಾಕನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಈ ವೇಳೆ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಕೆಪಿಸಿಸಿ ಸದಸ್ಯ ನಜರಬಾದ್‌ ನಟರಾಜ್, ಮುಖಂಡರಾದ ರವಿಚಂದ್ರ, ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ, ಉಮೇಶ್, ನಿತಿನ್, ನಜರ್ಬಾದ್ ಲೋಕೇಶ್, ಬೆಳಕು ಮಂಜುನಾಥ್, ಕಣ್ಣನ್, ಹರೀಶ್ ಗೌಡ, ಯತೀಶ್ ಬಾಬು, ಮಂಜುನಾಥ್, ಮೋಹನ್, ಸಂತೋಷ್, ಪ್ರಶಾಂತ್ ಮೊದಲಾದವರು ಇದ್ದರು.

ಟೀಂ ಮೈಸೂರು ತಂಡದಿಂದ ನಾಲ್ವಡಿ ಜಯಂತಿ

ಕನ್ನಡಪ್ರಭ ವಾರ್ತೆ ಮೈಸೂರು

ಟೀಂ ಮೈಸೂರು ವತಿಯಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯ ಅಂಗವಾಗಿ ಕೆ.ಆರ್. ವೃತ್ತದಲ್ಲಿನ ಅವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ಗೌರವ ಸಲ್ಲಿಸಲಾಯಿತು.

ಸಂಚಾಲಕರಾದ ಗೋಕುಲ್ ಗೋವರ್ಧನ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಕೂಡ ಮುನಿಸಿಪಾಲಿಟಿ ರಚಿಸಿದರು. ಗ್ರಾಮ ನೈರ್ಮಲೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಲಭ್ಯದ ಮೂಲಕ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದರು.

ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿ 1905ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಹೊಸ ರೈಲು ಮಾರ್ಗ ನಿರ್ಮಿಸಿದರು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರು ಸಂಸ್ಥಾನದಲ್ಲಿ ಪ್ರಜಾ ಪ್ರತಿನಿಧಿ ಸಭೆ ನಡೆಸಿದ್ದಾಗಿ ಅವರು ಸ್ಮರಿಸಿದರು.

ಈ ವೇಳೆ ತಂಡದ ಸದಸ್ಯರಾದ ಯಶವಂತ್ ಕುಮಾರ್, ಕಿರಣ್ ಜೈರಾಮ್ ಗೌಡ, ರಾಮ್ ಪ್ರಸಾದ್, ಮನೋಹರ್, ತಿಲಕ್, ರಾಘವೇಂದ್ರ, ಮುರಳಿ, ದಾಮೋದರ್, ಗಣೇಶ್ ಮೊದಲಾದವರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ