ಮೈಸೂರು ವಿಭಾಗ ಮಟ್ಟದ ಕ್ರಿಕೆಟ್‌: ಕೊಡಗು ಜಿಲ್ಲಾ ತಂಡ ಪ್ರಕಟ

KannadaprabhaNewsNetwork | Published : Oct 4, 2024 1:22 AM

ಸಾರಾಂಶ

2024-25 ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ಕೊಡಗು ಜಿಲ್ಲಾ ಬಾಲಕರ ತಂಡ ಪ್ರಕಟವಾಯಿತು. ಕರ್ನಾಟಕ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಅ.7 ಮತ್ತು ಅ.19ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

2024-25 ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ಕೊಡಗು ಜಿಲ್ಲಾ ಬಾಲಕರ ತಂಡ ಪ್ರಕಟವಾಯಿತು.

ಕರ್ನಾಟಕ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಅ.7 ಮತ್ತು ಅ.19ರಂದು ನಡೆಯಲಿದೆ.ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ 14 ವರ್ಷದ ಒಳಗಿನ ಮತ್ತು 17 ವರ್ಷ ಒಳಗಿನ ಬಾಲಕರ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಗಳೂರು ಮತ್ತು ದ.ಕ. ಜಿಲ್ಲೆಗಳ ಬಾಲಕರ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ.

ಕೊಡಗು ಜಿಲ್ಲಾ 14 ವರ್ಷ ಒಳಗಿನ ಬಾಲಕರ ತಂಡದಲ್ಲಿ ಪ್ರಗತಿ ಆಂಗ್ಲಮಾಧ್ಯಮ ಶಾಲೆ ವಿರಾಜಪೇಟೆಯ ನಿದಿನ್ ಮುಕುಂದ, ಲೋಹನ್ ಮನೋಹರ್, ಸಮ್ರತ್, ನಿಯಾದ್, ವರ್ತುನ್, ಸೊಹನ್, ಯಶಸ್ಸ್, ಸಂತ ಅನ್ನಮ್ಮ ಶಾಲೆಯ ರೋಷನ್, ರಿಜ್ವಾಲ್, ರಫಾನ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯ ಶಿಶಿರ್, ಮಂದಣ್ಣ, ಲಯನ್ಸ್ ಶಾಲೆಯ ಸೋಮಣ್ಣ, ಪಿ.ಎಂ. ಶ್ರೀ ಸರ್ಕಾರಿ ಮಾದರಿ ಪ್ರೌಢಶಾಲೆಯ ಯಶಸ್ಸ್, ಜತಿನ್, ರಾಹುಲ್ ಸೇರಿ ಒಟ್ಟು 16 ಮಂದಿ ಬಾಲಕರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕೊಡಗು ಜಿಲ್ಲಾ 17 ವರ್ಷ ಒಳಗಿರುವ ಬಾಲಕರ ತಂಡದಲ್ಲಿ ಪ್ರಗತಿ ಶಾಲೆ ವಿರಾಜಪೇಟೆಯ ನಿಹಾಲ್, ಹರಿ, ಕೇಶವ, ದಿಗಂತ್, ರುಮಾನ್, ಆಕಾಶ್, ಶಿಶಿರ್, ಗೌತಮ್, ಕಾವೇರಿ ಆಂಗ್ಲ ಮಾಧ್ಯಮ ಶಾಲೆಯ ಜಶ್ವಂತ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯ ದಿಗಂತ್ ಆರ್., ಲಿವಿನ್ ಕುಮಾರ್, ಸುಧನ್ವ, ಸಂತ ಜೋಸೆಫ್ ಸಂಯುಕ್ತ ಶಾಲೆಯ ಹಾರ್ದಿಕ್ ಕರ್ಕೆರ, ಮತ್ತು ಫಾತಿಮ ಆಂಗ್ಲ ಮಾಧ್ಯಮ ಶಾಲೆಯ ತರುಣ್, ಪ್ರೀತಂ ಸೇರಿ ಒಟ್ಟು 15 ಮಂದಿ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸುತಿದ್ದಾರೆ.

ಎರಡು ಬಾಲಕರ ಕ್ರಿಕೆಟ್ ತಂಡಗಳಿಗೆ ದೈಹಿಕ ಶಿಕ್ಷಕರಾದ ಶಿವಶಕ್ತಿ ಮತ್ತು ಶ್ರಿನಿವಾಸ್ ಪ್ರಮುಖ ಕೊಚ್ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

Share this article