ಮೈಸೂರು- ಕೊಡಗು ಕ್ಷೇತ್ರ- ಯದುವೀರ್ ಅಭೂತ ಪೂರ್ವ ಗೆಲುವು

KannadaprabhaNewsNetwork |  
Published : Jun 05, 2024, 12:30 AM IST
ಫೋಟೋ | Kannada Prabha

ಸಾರಾಂಶ

- ಐದನೇ ಚುನಾವಣೆಯಲ್ಲೂ ಗೆಲ್ಲದ ಲಕ್ಷ್ಮಣ್ - ಸಿಎಂ ತವರಿನಲ್ಲಿ ಕಾಂಗ್ರೆಸ್ಗೆ ಸೋಲು

ಮಹೇಂದ್ರ ದೇವನೂರುಕನ್ನಡಪ್ರಭ ವಾರ್ತೆ ಮೈಸೂರುಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 7,95,503 ಮತಗಳಿಂದ ಅಭೂತ ಪೂರ್ವ ಜಯ ದಾಖಲಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ವಿರುದ್ಧ 1,39,262 ಮತಗಳ ಅಂತರದಿಂದ ಜಯಗಳಿಸಿದರು. ಆ ಮೂಲಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿ ತನ್ನ ಸ್ಥಾನ ಉಳಿಸಿಕೊಂಡಿದೆ.ಕಾಂಗ್ರೆಸ್ನ ಎಂ. ಲಕ್ಷ್ಮಣ್ 6,56,241 ಮತಪಡೆದು ಪರಾಭವಗೊಂಡರೆ, ಮೂರನೇ ಸ್ಥಾನದಲ್ಲಿ ನೋಟ ಮತ ಚಲಾವಣೆಯಾಗಿದೆ. ಒಟ್ಟಾರೆ 4,490 ಮಂದಿ ನೋಟ ಮತ ಚಲಾಯಿಸಿದ್ದಾರೆ.ಹಾಲಿ ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ಯದುವೀರ್ ಅವರಿಗೆ ಟಿಕೆಟ್ಘೋಷಣೆ ಆಗುತ್ತಿದ್ದಂತೆಯೇ ಲೆಕ್ಕಾಚಾರ ತಲೆ ಕೆಳಗಾಗಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯಾರು ಬೇಕಾದರೂ ಗೆಲ್ಲಬಹುದು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ ರಾಜಮನೆತನದ ಬಗ್ಗೆ ಗೌರವ ಮತ್ತು ಯುವ ಅಭ್ಯರ್ಥಿಯಾದ ಯದುವೀರ್ಗೆ ಮತದಾರರು ಬೆಂಬಲವಾಗಿ ನಿಂತರು. ಅಲ್ಲದೇ ಕಳೆದೆರಡು ಚುನಾವಣೆಗಳಲ್ಲಿ ಪರೋಕ್ಷವಾಗಿ ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಬೆಂಬಲಿಸಿದ್ದ ಜೆಡಿಎಸ್ ಈ ಬಾರಿ ಮೈತ್ರಿ ಕಾರಣಕ್ಕಾಗಿ ನೇರವಾಗಿ ಬೆಂಬಲಿಸಿದ್ದು ಗೆಲುವಿಗೆ ಪೂರಕವಾಗಿದೆ.ನಂತರದ ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿ ಎಂ. ರಂಗಸ್ವಾಮಿ 4,306, ಕೆಜೆಪಿಯ ಕದಂಬ ನಾ ಅಂಬರೀಷ್ ಮತ, ಎಂ. ರಾಮಮೂರ್ತಿ 3,605, ರಾಜು 1949, ಪ್ರಜಾಕೀಯ ಲೀಲಾ ಶಿವಕುಮಾರ್, ಟಿ.ಆರ್. ಸುನಿಲ್ 1,560, ಎಚ್.ಕೆ. ಕೃಷ್ಣ 1489, ಹರೀಶ್ಗೌಡ 976, ಪಿ.ಎಸ್. ಯಡೂರಪ್ಪ 878, ಸಿ.ಜೆ. ಅಂಬೇಡ್ಕರ್835, ದರ್ಶನ್ಕೆ. ಪೊನ್ನೇತಿ 764, ಎಂ.ಎಸ್. ಪ್ರವೀಣ್740, ಡಾ.ಎಚ್.ಎಂ. ಮಂಜುನಾಥಸ್ವಾಮಿ 523 ಮತ್ತು ಎ.ಜಿ. ರಾಮಚಂದ್ರರಾವ್490 ಮತ ಪಡೆದರು.ಒಟ್ಟಾರೆ 14,79,983 ಮತ ಚಲಾವಣೆಯಾಗಿದ್ದು, 833 ಮತ ತಿರಸ್ಕೃತಗೊಂಡಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ