ಜಾನಪದ-ಭಕ್ತಿಗೀತೆಗಳ ಸಮಾಗಮದ ಸಂಭ್ರಮ

KannadaprabhaNewsNetwork |  
Published : Oct 03, 2026, 01:15 AM IST
10 | Kannada Prabha

ಸಾರಾಂಶ

ರಾಜ್ಯದ ವಿವಿಧ ಭಾಗಗಳ ಕಲಾವಿದರು ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವೈವಿಧ್ಯಮಯ ಉಡುಪುಗಳೊಂದಿಗೆ ಸುಂದರ ನೃತ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಜಾನಪದ ಗೀತೆ, ಭಕ್ತಿಗೀತೆ ಹಾಗೂ ಸಾಮಾಜಿಕ ಕಳಕಳಿ ಸಂದೇಶ ಸಾರುವ ನೃತ್ಯಗಳ ಮೂಲಕ ಯುವ ಸಂಭ್ರಮದ ಸಂಭ್ರಮ ಹೆಚ್ಚಿಸಿದ ವಿದ್ಯಾರ್ಥಿಗಳು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಅಂಗವಾಗಿ ನಗರದ ಮಾನಸಗಂಗೋತ್ರಿಯ ಕುವೆಂಪು ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ಸಂಭ್ರಮದ 5ನೇ ದಿನದ ಕಾರ್ಯಕ್ರಮದಲ್ಲಿ ಕಲಾವಿದರು ಹಾಗೂ ವಿದ್ಯಾರ್ಥಿಗಳು ಸಿನಿಮಾ ಗೀತೆ, ಭಕ್ತಿ ಪ್ರಧಾನ ಗೀತೆಗಳು ಹಾಗೂ ಸಾಮಾಜಿಕ ಕಳಕಳಿ ಸಾರುವ ನೃತ್ಯಗಳನ್ನು ಮಾಡಿ ಯುವ ಸಂಭ್ರಮದ ಕಳೆ ಹೆಚ್ಚಾಗುವಂತೆ ಮಾಡಿದರು.

ರಾಜ್ಯದ ವಿವಿಧ ಭಾಗಗಳ ಕಲಾವಿದರು ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವೈವಿಧ್ಯಮಯ ಉಡುಪುಗಳೊಂದಿಗೆ ಸುಂದರ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ಪ್ರದರ್ಶಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಒಟ್ಟು 50 ಕಾಲೇಜುಗಳ ವಿದ್ಯಾರ್ಥಿಗಳು ವೇದಿಕೆಯಲ್ಲಿ ಸಿದ್ದಪ್ಪಾಜಿ, ಮಹದೇಶ್ವರ, ಗಣೇಶನ ಕುರಿತ ಭಕ್ತಿ ಪ್ರಧಾನ ಗೀತೆಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯ ಕುರಿತ ಸಂದೇಶ ಸಾರುವ ನೃತ್ಯ ಮತ್ತು ಇನ್ನಿತರ ಸಾಮಾಜಿಕ ಕಳಕಳಿ ಕುರಿತು ಜಾಗೃತಿ ಮೂಡಿಸುವ ನೃತ್ಯಗಳನ್ನು ಮಾಡುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಗೆ ಗೌರವ

ಇತ್ತೀಚೆಗೆ ನಡೆದ ವಿಮಾನ ಹೈಜಾಕ್ ನಲ್ಲಿ ಸಹ ಪೈಲಟ್ ನಿಂದ ಹಲ್ಲೆಗೊಂಡು ಗಂಭೀರ ಸ್ಥಿತಿಯಲ್ಲಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತದ ಹೆಮ್ಮೆಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಬೇಗ ಗುಣಮುಖರಾಗಲಿ ಎಂದು ನೆರೆದಿದ್ದ ಪ್ರೇಕ್ಷಕರೆಲ್ಲರೂ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ವಿಶೇಷವಾಗಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಎಡಿಸಿ ಆರ್. ಐಶ್ವರ್ಯ, ಯುವ ಸಂಭ್ರಮ ಉಪ ಸಮಿತಿ ಅಧ್ಯಕ್ಷ ಡಾ. ರಾಕೇಶ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ರಾಜೇಂದ್ರ, ರಂಗಸ್ವಾಮಿ, ಚೇತನ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧೀಜಿ ಬಗ್ಗೆ ಯುವಜನ ತಿಳಿದುಕೊಳ್ಳಬೇಕಿದೆ: ಕೆ. ಷಡಕ್ಷರಿ
ಸುಸ್ಥಿರ ಅಭಿವೃದ್ಧಿಗೆ ಗಾಂಧಿ ತತ್ವಾದರ್ಶಗಳು ಪೂರಕ