ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಂದಾಯ ಇಲಾಖೆಯಿಂದ ನಡೆದ ನಾಡಪ್ರಭು ಕೆಂಪೇಗೌಡ ರವರ 515 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ಹಾಗೂ ಬೆಂಗಳೂರಿಗೆ ಇರುವ ಸಂಬಂಧವೇ ದೊಡ್ಡ ಇತಿಹಾಸ ಎಂದರು.
ಹಳೇಬೇಲೂರು ಎಂಬ ಹೆಸರನ್ನು ಬೆಂಗಳೂರು ಎಂದು ನಾಮಕರಣ ಮಾಡಿ ಎಲ್ಲ ಸಮುದಾಯದ ಜನರ ಹಿತಕ್ಕಾಗಿ ಆಧುನಿಕ ಮಾರುಕಟ್ಟೆ ನಿರ್ಮಿಸಿ ಒಕ್ಕಲುತನವನ್ನು ಪ್ರೋತ್ಸಾಹಿಸಲು ಕೆರೆ-ಕಟ್ಟೆ ನಿರ್ಮಿಸಿ ಜನರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಸಾಧನೆ ಮಾಡಿದ ಕೆಂಪೇಗೌಡರ ಹೆಸರು ಎಂದೆಂದಿಗೂ ಶಾಶ್ವತವಾಗಿತ್ತದೆ ಎಂದರು.ನಾಡಪ್ರಭು ಕೆಂಪೇಗೌಡರ ಸಾಧನೆಯ ಗೌರವ ಪೂರ್ವಕ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡುವುದರ ಮೂಲಕ ಗೌರವ ಸಲ್ಲಿಸಲಾಗಿದೆ. ಜೊತೆಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಶಿಕ್ಷಣ ಇಲಾಖೆಯ ಸಿದ್ದರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕೆರೆ ಕಟ್ಟೆಗಳ ನಿಮಾ೯ಣಕ್ಕೆ ಹೆಚ್ಚು ಒತ್ತು ನೀಡಿದರು. ದೊಡ್ಡ ನಗರವನ್ನಾಗಿ ಸ್ಥಾಪಿಸಿ ಎಲ್ಲಾ ಸಮುದಾಯದ ಜನರ ಹಿತ ಕಾಯುವಲ್ಲಿ ಬದ್ದರಾಗಿದ್ದರು. ಅವರ ಅಪಾರ ಸಾಧನೆ ಮತ್ತು ಸೇವೆಯಿಂದಾಗಿ ಕೆಂಪೇಗೌಡರು ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ನಾಡ ಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.
ಕೆಂಪೇಗೌಡ ಜಯಂತಿ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಗೆ ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿತ್ತು. ಈ ವೇಳೆ ಸಹಾಯಕ ಎಂಜಿನಿಯರ್ ಪ್ರಕಾಶ್, ನಾಗೇಂದ್ರ, ರಾಜೇಶ್ವರಿ, ಜೂನಿಯರ್ ಎಂಜಿನಿಯರ್ ಮಧು ಸೇರಿದಂತೆ ಸಿಬ್ಬಂದಿ ಮತ್ತು ಗುತ್ತಿಗೆದಾರರು ಇದ್ದರು.