ಒಕ್ಕಲಿಗರ ಸಂಘ ಸ್ಥಾಪಿಸಿ ಸಾರ್ಥಕತೆ ಮೆರೆದ ನಾಗಣ್ಣ ಬಾಣಸವಾಡಿ: ಡಾ.ಹನಿಯೂರು ಚಂದ್ರೇಗೌಡ

KannadaprabhaNewsNetwork |  
Published : Jun 04, 2025, 02:27 AM ISTUpdated : Jun 04, 2025, 02:28 AM IST
3ಕೆಎಂಎನ್ ಡಿ18 | Kannada Prabha

ಸಾರಾಂಶ

ನಾಗಣ್ಣ ಬಾಣಸವಾಡಿ ಒಕ್ಕಲಿಗ ಸಮುದಾಯದ ಸಂಘಟನೆ ಮತ್ತು ಜಾಗೃತಿಗಾಗಿ ತಮ್ಮ ತನು, ಮನ, ಧನ ಅರ್ಪಿಸುವ ಮೂಲಕ ಶ್ರೇಷ್ಠತೆ ಮೆರೆದಿದ್ದಾರೆ. ಒಕ್ಕಲಿಗರ ಸಂಘದ ಚುನಾವಣೆಗಳಲ್ಲಿ ಸಮುದಾಯದ ಮತದಾರರು ಹಣ ಮತ್ತು ಅಧಿಕಾರದ ಆಸೆ ಇರುವವರನ್ನು ಬಿಟ್ಟು ಸಮುದಾಯದ ಅಭ್ಯುದಯಕ್ಕೆ ಕಾಳಜಿ ಇರುವವರನ್ನು ಆಯ್ಕೆ ಮಾಡಲು ಮತದಾರರು ಚಿಂತನೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಒಕ್ಕಲಿಗರ ಸಂಘ ಸ್ಥಾಪನೆ ಮಾಡುವ ಮೂಲಕ ಸಮುದಾಯದ ಶೈಕ್ಷಣಿಕ, ಆರೋಗ್ಯ ಮತ್ತು ಔದ್ಯೋಗಿಕ ಉನ್ನತಿಗೆ ಶ್ರಮಿಸಿದ ಸಂಸ್ಥಾಪಕ ಅಧ್ಯಕ್ಷ ನಾಗಣ್ಣ ಬಾಣಸವಾಡಿ ಸಾರ್ಥಕತೆ ಮೆರೆದಿದ್ದಾರೆ ಎಂದು ಪ್ರಗತಿಪರ ಚಿಂತಕ ಡಾ.ಹನಿಯೂರು ಚಂದ್ರೇಗೌಡ ಹೇಳಿದರು.

ಪಟ್ಟಣದ ಪಿ.ಕಾರ್ಡ್ ಬ್ಯಾಂಕ್‌ನ ಕುವೆಂಪು ಸಭಾಂಗಣದಲ್ಲಿ ಹೊನ್ನೇರು ನೆಲದ ಸಂಸ್ಕೃತಿ ಬಳಗದಿಂದ ಕಾವೇರಿ ನೀರಾವರಿ ನಿಗಮದ ನಿವೃತ್ತ ಅಭಿಯಂತರ ಎಚ್.ಬಸವರಾಜ್ ಅವರಿಗೆ ನಾಗಣ್ಣ ಬಾಣಸವಾಡಿ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನಾಗಣ್ಣ ಬಾಣಸವಾಡಿ ಒಕ್ಕಲಿಗ ಸಮುದಾಯದ ಸಂಘಟನೆ ಮತ್ತು ಜಾಗೃತಿಗಾಗಿ ತಮ್ಮ ತನು, ಮನ, ಧನ ಅರ್ಪಿಸುವ ಮೂಲಕ ಶ್ರೇಷ್ಠತೆ ಮೆರೆದಿದ್ದಾರೆ. ಒಕ್ಕಲಿಗರ ಸಂಘದ ಚುನಾವಣೆಗಳಲ್ಲಿ ಸಮುದಾಯದ ಮತದಾರರು ಹಣ ಮತ್ತು ಅಧಿಕಾರದ ಆಸೆ ಇರುವವರನ್ನು ಬಿಟ್ಟು ಸಮುದಾಯದ ಅಭ್ಯುದಯಕ್ಕೆ ಕಾಳಜಿ ಇರುವವರನ್ನು ಆಯ್ಕೆ ಮಾಡಲು ಮತದಾರರು ಚಿಂತನೆ ನಡೆಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ನಾಗಣ್ಣ ಬಾಣಸವಾಡಿ ಗ್ರಾಮ ಸ್ವರಾಜ್ ಆಂದೋಲನದ ಮೂಲಕ ಪಂಚಾಯತ್ ರಾಜ್ ಸದಸ್ಯರನ್ನು ಸಂಘಟಿಸುವುದರೊಂದಿಗೆ ಅಧಿಕಾರ ವಿಕೇಂದ್ರೀಕರಣಕ್ಕೆ ಶ್ರಮಿಸಿದ್ದಾರೆ ಎಂದರು.

ಶ್ರೀನಿಶ್ಚಲಾನಂದನಾಥ ಸ್ವಾಮಿ ಮಾತನಾಡಿ, ನಾಗಣ್ಣಬಾಣಸವಾಡಿ ಅವರು ಸಮುದಾಯದ ಏಳಿಗೆಗಾಗಿ ರಾಜ್ಯ ವ್ಯಾಪಿ‌ ಸಂಘಟನೆ ಮಾಡುವ ಮೂಲಕ‌ ಜೀವನದ ಸಾರ್ಥಕತೆ ಮೆರೆದಿದ್ದಾರೆ. ಹೊನ್ನೇರು ಬಳಗ ನಾಗಣ್ಣರ ಸಮುದಾಯದ ಪರ ಸೇವೆಯನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಇಂತಹ ಕೆಲಸಗಳು ವಿಸ್ತಾರವಾಗಬೇಕು. ಇತರರಿಗೂ ಪ್ರೇರಣೆಯಾಗಬೇಕು ಎಂದರು.

ನಾಗಣ್ಣಬಾಣಸವಾಡಿ ಸಮಾಜಸೇವಾ ಪ್ರಶಸ್ತಿಗೆ ಭಾಜನರಾಗಿಹ ಹಾಗಹಳ್ಳಿ ಶಿವಲಿಂಗೇಗೌಡ ಅವರು ಕರ್ತವ್ಯದಲ್ಲಿ ದಕ್ಷತೆ ಆಡಳಿತದಲ್ಲಿ‌ ಪಾರದರ್ಶಕತೆ ಮೆರೆಯವ ಜೊತೆಗೆ ಸಮುದಾಯ ಪರ ಕಾಳಜಿ ಹೊಂದಿದ್ದಾರೆ. ಈ ನೆಲದ ಸಂಸ್ಕೃತಿ ಗೆ ಪುಷ್ಠಿ ನಿಡುವ ದೆಸೆಯಲ್ಲಿ ನಿವೃತ್ತಿ ಜೀವನವನ್ನು ಕೃಷಿಚಟುವಟಿಕೆ ಹಾಗು ಸಮುದಾಯದ ಜಾಗೃತಿಗೆ ಮೀಸಲಿರಿಸಿದ್ದಾರೆ ಎಂದು ಮೆಚ್ಗುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉದಯಕಾಲ‌ ಪತ್ರಿಕೆ ಸಂಪಾದಕ ಪುಟ್ಟಲಿಂಗೇಗೌಡ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಗೌರವಾಧ್ಯಕ್ಷ ರಾದ ಜ್ಯೋತಿಲಕ್ಷ್ಮಿ ನಾಗಣ್ಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ