ಕನ್ನಡಪ್ರಭ ವಾರ್ತೆ ನಾಲತವಾಡ
ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಿಎಂ ಹಾಗೂ ಡಿಸಿಎಂ ಯವರ ಡೇಟ್ ಪಡೆದು ಶೀಘ್ರದಲ್ಲೇ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಸಮೀಪದ ಅಮರೇಶ್ವರ ದೇವಸ್ಥಾನ ಹತ್ತಿರ ಚಿಮ್ಮಲಗಿ ಏತನೀರಾವರಿ ಯೋಜನೆಯ ಪೂರ್ವಕಾಲುವೆಯ ವಿತರಣಾ ಕಾಲುವೆಯ ಸಂಖ್ಯೆ 13 ಕಿಮೀ 19.600 ರಲ್ಲಿ ಬರುವ ರಸ್ತೆಗೆ ಅಡ್ಡಲಾಗಿ ಅಂದಾಜಿ ಮೊತ್ತ ₹35.67ಲಕ್ಷದ ಕಾಲುವೆಯ ರಸ್ತೆ ಸೇತುವೆಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಯಾವಾಗಲು ರೈತರ ಪರವಾಗಿವಿರುವ ಸರ್ಕಾರವಾಗಿದೆ. ನಮ್ಮ ಸರ್ಕಾರದಲ್ಲಿ ನೀರಾವರಿಗೆ ಹೆಚ್ಚು ಒತ್ತು ನೀಡಿದ್ದೇವೆ ಎಂದು ತಿಳಿಸಿದರು.ಈ ವೇಳೆ ಪಪಂ ಮಾಜಿ ಅಧ್ಯಕ್ಷ, ಸದಸ್ಯ ಪೃಥ್ವಿರಾಜ ನಾಡಗೌಡ, ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಳಕಲ್ಲ, ಉಪಾಧ್ಯಕ್ಷ ಬಸವರಾಜ ಗಡ್ಡಿ, ಗುತ್ತಿಗೆದಾರ ರಾಯನಗೌಡ ತಾತರೆಡ್ಡಿ, ಮುಖಂಡರಾದ ಗುರುಪ್ರಸಾದ ದೇಶಮುಖ, ಅಮರೇಶ ದೇಶಮುಖ, ಉಮರಪಾರುಕ್ ಮೂಲಿಮನಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ವೈ.ಎಚ್.ವಿಜಯಕರ್, ಮಹಾಂತೇಶ ಗಂಗನಗೌಡರ, ಮುತ್ತು ಗೊರಬಾಳ, ಪ.ಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ಸದಸ್ಯರಾದ ಸಂಗಣ್ಣ ಬಾರಡ್ಡಿ, ಬಾಬು ಕ್ಷತ್ರಿ, ರಮೇಶ ಆಲಕೊಪ್ಪರ, ಅಂಬ್ರಪ್ಪ ಶೀರಿ, ಲಲಿತಾ ಗೊರಬಾಳ, ರಾಜಬಿ ನಾಡದಾಳ, ಯಮನವ್ವ ಬಂಡಿವಡ್ಡರ, ಸಂಗಮೇಶ ಗಂಗನಗೌಡರ, ಕೆಬಿಜೆಎನ್‌ಎಲ್ ಎಇ ಅಬುಬಕರ ಬಾಗವಾನ, ಜೆಇ ಸುನಿಲ್ ಕುಮಾರ, ಹಾಗೂ ಇನ್ನಿತರರು ಇದ್ದರು.ರಸ್ತೆ ಸೇತುವ ಕಾಮಗಾರಿ 3 ವರ್ಷದ ಹಿಂದೆ ಮಾಡಿದ ತಪ್ಪಿನಿಂದ ಸೇತುವೆ ಕಾಮಗಾರಿ ವಿಳಂಬವಾಗಿದೆ. ಈ ಕಾಮಗಾರಿಯನ್ನು ಪ್ಯಾಕೇಜ್‌ನಲ್ಲಿ ಸೇರಿಸಿ ತಮಗೆ ಬೇಕಾದವರಿಗೆ ಕಾಮಗಾರಿ ನೀಡಲು ಸಿಂಗಲ್ ಟೆಂಡರ್ ಮಾಡಿದರು. ಅದಾದ ನಂತರ ಚುನಾವಣೆ ನಡೆದು ನಾನು ಚುನಾಯಿತನಾದಾಗ ಟೆಂಡರ್ ಒಪನ್ ಮಾಡಿದಾಗ ಸಿಂಗಲ್ ಟೆಂಡರ್ ಆಗಿತ್ತು. ಸಿಂಗಲ್ ಟೆಂಡರ್ ಅಪ್ರೂವಲ್ ಆಗಲಾರದೇ ಅದು ರಿಜಕ್ಟ್ ಆಯಿತು. ಈಗ ಇದಕ್ಕೆ ಮತ್ತೆ ಟೆಂಡರ್ ಮಾಡಿ ಅಪ್ರೂವಲ್ ಪಡೆದು ಇದಕ್ಕೆ ಭೂಮಿಪೂಜೆ ಮಾಡಿದ್ದೇವೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭ ಮಾಡಿ ರೈತರ ಜಮೀನಿಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕರು.ಹಿಂದಿನ ಸರ್ಕಾರದವರ ಸಾಲವನ್ನು ನಾವು ತೀರಿಸುತ್ತಿದ್ದೇವೆ: ನಾಡಗೌಡ
ಕನ್ನಡಪ್ರಭ ವಾರ್ತೆ ನಾಲತವಾಡಹಿಂದೆ ಇದ್ದ ಸರ್ಕಾರದವರು ಸಿಕ್ಕಾಪಟ್ಟೆ ಬಾಕಿ ನಮ್ಮ ಮೇಲೆ ಇಟ್ಟಿದ್ದಾರೆ. ಚುನಾವಣೆ ಸಮೀಪ ಸಿಕ್ಕಾಪಟ್ಟೆ ಕಾಮಗಾರಿ ಕೈಗೆತ್ತಿಕೊಂಡು ಖರ್ಚು ಹಾಕಿ ಹೋಗಿದ್ದಾರೆ. ಅವರ ಸಾಲವನ್ನು ನಾವು ತೀರಿಸುತ್ತಿದ್ದೇವೆ ಎಂದು ಸಾಬೂನ ಮತ್ತು ಮಾರ್ಜಿಕ ನಿಮಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಸಮೀಪದ ಬಂಗಾರಗುಂಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಸುಧಾರಣೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಮಾತನಾಡಿದ ಅವರು, ಮೇಲಾಗಿ ಗ್ಯಾರಂಟಿಗಳನ್ನು ನಮ್ಮ ಸರ್ಕಾರ ನೀಡುತ್ತಿದೆ. ಈ ವರ್ಷ 53 ಸಾವಿಕ್ಕಿಂದ ಹೆಚ್ಚು ಕೋಟಿ ಅನುದಾನ ಖರ್ಚು ಮಾಡುತ್ತಿದೆ. ಈ ವರ್ಷ ಬಜೆಟ್ ₹4 ಲಕ್ಷ ಕೋಟಿಗಿಂತ ಹೆಚ್ಚಿನ ಬಜೆಟ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸುಮ್ಮನೆ ಅಪ್ರಚಾರ ಮಾಡುತಿದ್ದಾರೆ ಎಂದು ದೂರಿದರು.ಮೊದಲನೇ ವರ್ಷ ಸರ್ಕಾರದ ನಿಧಾನ ಅಭಿವೃದ್ಧಿ ಇದೆ. ಜನಗಳ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ಪ್ರತಿ ಮಹಿಳೆಗೆ ₹2 ಸಾವಿರ ನೀಡುತ್ತಿದೆ. ಬಸ್ ಪ್ರಯಾಣ, ಫ್ರಿ ಕರೆಂಟ್, ಅನ್ಯ ಭಾಗ್ಯ ಯೋಜನೆ ನೀಡುತ್ತಿದೆ. ನಿಮಗೆ ಪ್ರತಿ ತಿಂಗಳು ₹5 ಸಾವಿರಕ್ಕಿಂತ ಹೆಚ್ಚು ಹಣ ನಿಮ್ಮ ಖಾತೆಗೆ ಜಮಾ ಆಗುತ್ತಿದೆ. ಅಭಿವೃದ್ಧಿಯಲ್ಲಿ 224ರಲ್ಲಿ ನಮ್ಮ ಕ್ಷೇತ್ರ ಒಂದು ಗುಂಜಿ ಹೆಚ್ಚಿಗೆ ಇದೆ. ಇದರಲ್ಲಿ ಯಾವುದೇ ಅನುಮಾನ ಬೇಡ, ರೈತರಿಗೆ ಈ ವರ್ಷ ಏನಾದರು ತೊಂದರೆ ಆಗಿದಿಯಾ? ಯಾವುದೇ ಯೋಜನೆಗಳು ನಿಂತಿಲ್ಲ, ಎಲ್ಲವೂ ಕೂಡ ಸುಗಮವಾಗಿ ನಡೆಯುತ್ತಿದೆ. ವಿಪಕ್ಷಗಳು ಸುಮ್ಮನೆ ಅಪಪ್ರಚಾರ ಮಾಡುತಿದ್ದಾರೆ. ಇದಕ್ಕೆ ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿದರು.ಈ ವೇಳೆ ಗುತ್ತಿಗೆದಾರರಾದ ಕೆ.ಎಸ್.ಪಾಟೀಲ, ರಕ್ಕಸಗಿ ಗ್ರಾ.ಪಂ ಅಧ್ಯಕ್ಷ ರೀತೇಶ ನಾಡಗೌಡ, ಹಿರಿಯರಾದ ಬಿ.ವಿ.ನಾಡಗೌಡ್ರು, ಎಚ್.ಜಿ.ದಡ್ಡಿ, ಬಸವರಾಜ ನಾಡಗೌಡ, ಶರಣಬಸಯ್ಯ ಹಿರೇಮಠ, ಮಲ್ಲಪ್ಪ ಮುರಾಳ, ಶಂಕ್ರಣ್ಣ ಕಾರ್ಕೂರ, ಪ್ರಕಾಶ ಚಲವಾದಿ ಹಾಗೂ ಇನ್ನಿತರರು ಇದ್ದರು.
ಸುಮಾರು ₹1600 ಲಕ್ಷ ಅಂದಾಜು ವೆಚ್ಚದಲ್ಲಿ 8 ಕಿಮೀ ರಸ್ತೆ ಅಗಲೀಕರಣ ಮಾಡುವುದ ಜತಗೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪಿಡಬ್ಲಡಿ ಸಚಿವರಾದ ಜಾರಕಿಹೊಳಿ ಜೊತೆ ನಾಲತವಾಡ-ತಂಗಡಗಿ ರಸ್ತೆ ಸುಧಾರಣೆಗೆ ಅನುದಾನ ಕೇಳಿದ್ದೆ. ಅನುದಾನ ಕೊರತೆಯಿಂದ 8 ಕಿಮೀ ವರೆಗೆ ಅನುದಾನ ನೀಡಿದ್ದಾರೆ. ಮುಂದಿನ ವರ್ಷ ನಾಲತವಾಡದವರೆಗೆ ರಸ್ತೆ ನಿರ್ಮಾಣ ಕಾರ್ಯ ಮಾಡಲಾಗುವುದು. ಕಪನೂರ-ನಾಲತವಾಡ, ಆಲೂರ-ನಾಲತವಾಡ, ಹಿರೇಮುರಾಳ-ಹುನಕುಂಟಿ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಬರದಿದ್ದೇನೆ. ಹಂತ, ಹಂತವಾಗಿ ರಸ್ತೆ ನಿರ್ಮಾಣ ಕಾರ್ಯ ಮಾಡುತ್ತೇವೆ.-ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕರು.