ಕೆಂಪನಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ನಾಗರಾಜು ಆಯ್ಕೆ

KannadaprabhaNewsNetwork | Published : Mar 28, 2025 12:30 AM

ಸಾರಾಂಶ

ಕೆಂಪನಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಸಿ.ನಾಗರಾಜು ಅವರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಕೆಂಪನಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಕೆ.ಸಿ.ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ಗಾಯಿತ್ರಿ.ಎನ್.ಅವಿರೋಧ ಆಯ್ಕೆಯಾಗಿದ್ದಾರೆ.

ಈ ಹಿಂದೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೆ.ಸಿ.ನಾಗರಾಜು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಾಯಿತ್ರಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತು ಪಡಿಸಿ ಬೇರೆ ಯಾರು ಅರ್ಜಿ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯಾದರು. ಬಳಿಕ ನೂತನ ಅಧ್ಯಕ್ಷ ಕೆ.ಸಿ.ನಾಗರಾಜು ಮಾತನಾಡಿ, ಗ್ರಾಪಂಗೆ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲ ಗ್ರಾಪಂ ಸದಸ್ಯರಿಗೆ ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿರುವ ಎಲ್ಲ ಮುಖಂಡರು ಹಾಗೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಆಭಾರಿಯಾಗಿದ್ದೇನೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೆಲಸ ಮಾಡಲು ಅವಕಾಶ ನೀಡಬೇಕು. ಗ್ರಾಪಂಗೆ ಒಳಪಡುವ ಪ್ರತಿಯೊಂದು ಗ್ರಾಮಗಳ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತೇನೆ. ಸರ್ಕಾರದ ಯೋಜನೆಗಳಾದ ಮನೆ ಮನೆಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು, ಆಶ್ರಯ ಮನೆಗಳ ನಿರ್ಮಾಣ, ಸ್ವಚ್ಛ ಭಾರತ್, ಮುದ್ರಾ ಯೋಜನೆ, ಪ್ರತಿ ಮನೆ ಮನೆಗೂ ಶೌಚಾಲಯ ನಿರ್ಮಾಣ ಹಾಗೂ ವಿವಿಧ ರೈತರ ಅಭಿವೃದ್ದಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಗ್ರಾಪಂ ಆಡಳಿತವನ್ನು ಬಲಿಷ್ಠಗೊಳಿಸಲು ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಿನಿಂದ ಪಂಚಾಯಿತಿಯ ಅಭಿವೃದ್ದಿಗೆ ದುಡಿಯೋಣ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಆರ್.ಮಾದೇಶ್, ಶಿಲ್ಪಾನಾಗಣ್ಣ, ಸೋಮಣ್ಣ. ಆರ್, ಎಸ್.ಮಹದೇವಸ್ವಾಮಿ, ರಾಮಸ್ವಾಮಿ, ರಾಮನಾಯ್ಕ, ಪ್ರಕಾಶ್, ಸಾಕಮ್ಮ, ಯಶೋಧ, ತಾಯಮ್ಮ, ಗೀತಾ, ಸವಿತಾ, ರಾಜಮ್ಮ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವಶಂಕರಪ್ಪ, ಪಿಡಿಒ ರಾಮೇಗೌಡ, ಮುಖಂಡರಾದ ಸಿದ್ದಪ್ಪ, ಶಿವಕುಮಾರ್, ನಂಜುಂಡಸ್ವಾಮಿ, ನಟರಾಜು, ಕಾಂತರಾಜು, ಹೋಟೆಲ್ ರಾಜು, ನಿಜಗುಣ, ಗುರು ಸಿದ್ದಪ್ಪ, ನಾರಾಯಣಸ್ವಾಮಿ, ಪ್ರಭುಸ್ವಾಮಿ, ದೇವೇಂದ್ರ, ಕೆ.ಎಂ.ನಾಗರಾಜ್, ಕಾರ್ಯದರ್ಶಿ ಸಿದ್ದಪ್ಪಸ್ವಾಮಿ ಉಪಸ್ಥಿತರಿದ್ದರು. ಕೆಂಪನಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಸಿ.ನಾಗರಾಜು ಅವರನ್ನು ಅಭಿನಂದಿಸಲಾಯಿತು.

Share this article