ನಾಗರಕೆರೆ ಏರಿ ಬಿರುಕು: ಅಧಿಕಾರಿಗಳ ಭೇಟಿ

KannadaprabhaNewsNetwork |  
Published : Sep 25, 2024, 01:00 AM IST
ಸತತ ಮಳೆಗೆ ಹೊಳವನಹಳ್ಳಿ ಗ್ರಾಮದ ನಾಗರಕೆರೆ ಏರಿ ಬಿರುಕು | Kannada Prabha

ಸಾರಾಂಶ

ಕೊರಟಗೆರೆ: ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ತಾಲೂಕಿನ ಹೊಳವನಹಳ್ಳಿ ಗ್ರಾಮದ ನಾಗರಕೆರೆ ತುಂಬಿದ್ದು, ಕೆರೆಯ ಏರಿ ಬಿರುಕು ಬಿಟ್ಟಿದ್ದರಿಂದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರಟಗೆರೆ: ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ತಾಲೂಕಿನ ಹೊಳವನಹಳ್ಳಿ ಗ್ರಾಮದ ನಾಗರಕೆರೆ ತುಂಬಿದ್ದು, ಕೆರೆಯ ಏರಿ ಬಿರುಕು ಬಿಟ್ಟಿದ್ದರಿಂದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಪಂ ಇಲಾಖೆಗೆ ಸೇರಿದ ಕೆರೆಯ ಹಾಳಾಗಿದ್ದು ಈಗ ಕೆರೆ ಏರಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಂದಿದ್ದಾರೆ. ಒಂದು ವೇಳೆ ಸರಿಯಾಗಿ ನಿರ್ವಹಣೆ ಮಾಡಿದ್ದರೆ ಈ ಭಾಗಕ್ಕೆ ವರ್ಷಪೂರ್ತಿ ನೀರು ಪೂರೈಸಬಹುದು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ತಹಸೀಲ್ದಾರ್ ಮಂಜುನಾಥ್ ಮಾತನಾಡಿ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಕೆರೆಗಳು ತುಂಬಿ ಹರಿಯುತ್ತಿದ್ದು, ಹೊಳವನಹಳ್ಳಿ ಗ್ರಾಮದ ನಾಗರಕೆರೆಗೆ ಸಾಕಷು ನೀರು ಬಂದಿದೆ. ಇದರಿಂದಾಗಿ ಏರಿ ಮೇಲೆ ಸ್ವಲ್ಪ ಬಿರುಕು ಕಾಣಿಸಿದೆ. ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಗ್ರಾಪಂ ಪಿಡಿಒ ವಸಂತಕುಮಾರ್, ಆರ್.ಐ. ಜಯಪ್ರಕಾಶ್, ಸಲ್ಮಾನ್, ಜಯರಾಮು, ಸಣ್ಣರಂಗಪ್ಪ, ನರಸಿಂಹಮೂರ್ತಿ, ಉಮೇಶ್, ಮಲ್ಲಿಕಾರ್ಜುನಯ್ಯ, ರಾಜೇಶ್, ಕಾಮಣ್ಣ, ಶಂಶಾದ್, ಶ್ರೀನಿವಾಸ್ ರಾಮಣ್ಣ, ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ