ನಾಗವಳ್ಳಿ ಪಿಎಂಶ್ರೀ ಸರ್ಕಾರಿ ಶಾಲೆ ಪ್ರಾರಂಭೋತ್ಸವ

KannadaprabhaNewsNetwork |  
Published : Jun 02, 2024, 01:47 AM IST
ಚಾಮರಾಜನಗರ ತಾಲೂಕಿನ ನಾಗವಳ್ಳಿಯ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ | Kannada Prabha

ಸಾರಾಂಶ

ತಾಲೂಕಿನ ನಾಗವಳ್ಳಿಯ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ನಾಗವಳ್ಳಿಯ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.ಪ್ರಸಕ್ತ ೨೦೨೪-೨೫ನೇ ಸಾಲಿನ ಶಾಲೆಯ ಪ್ರಾರಂಭೋತ್ಸವದ ಅಂಗವಾಗಿ ಶಾಲೆಯ ಶಿಕ್ಷಕ ವೃಂದ ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಶಾಲೆಯಿಂದ ಮಕ್ಕಳನ್ನು ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಿಗೆ ತೆರಳಿ ನಂತರ ಮಕ್ಕಳಿಗೆ ಸಿಹಿ ಹಾಗೂ ಹೂ ನೀಡಿ ಸ್ವಾಗತಿಸಿದರು.ಇದೇ ವೇಳೆ ಉಚಿತವಾಗಿ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ರಾಮಚಂದ್ರರಾಜೇ ಅರಸ್ ಅವರು, ಶಾಲೆಯ ವಾತಾವರಣ, ಹಾಗೂ ಶುಚಿತ್ವ, ಮೂಲ ಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಎಂ. ಶಾಂತಿ ಅವರು ಮಾತನಾಡಿ, ೨೦೨೨-೨೩ ನೇ ಸಾಲಿನಲ್ಲಿ ಈ ಶಾಲೆಯು ಪಿಎಂಶ್ರೀ ಯೋಜನೆಯಡಿ ಆಯ್ಕೆಯಾಗಿದ್ದು ಈ ವರ್ಷದಿಂದ ಎಲ್‌ಕೆಜಿ ತರಗತಿ ಆರಂಭಗೊಂಡಿದೆ. ಇದರ ಸದುಪಯೋಗಪಡೆದುಕೊಳ್ಳಬೇಕು. ಅಲ್ಲದೇ ಮೂಲಭೂತ ಸೌಕರ್ಯ ಈ ಶಾಲೆ ಹೊಂದಿದ್ದು ಹಸಿರು ಶಾಲೆ ಎಂಬ ಕೀರ್ತಿ ಪಡೆದಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಯಲ್ಲಿ ಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಪೋಷಕರು ಶಾಲೆಯ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಯಟ್ ಹಿರಿಯ ಉಪನ್ಯಾಸಕಿ ಕಾತ್ಯಾಯಿಣಿ, ವಿಷಯ ಸಂಯೋಜಕ ಸಿದ್ದರಾಜು, ಬಿಆರ್‌ಪಿ ರಮೇಶ್, ಸಿಆರ್‌ಪಿಗಳಾದ ಸೋಮಣ್ಣ, ಕಿಟ್ಟು, ಶಿಕ್ಷಕರಾದ ರಾಜಮ್ಮ, ಗೀತಾ ಎಸ್, ರಾಜೇಶ್ವರೀ, ಲೀಲಾವತಿ, ಕುಮಾರ್ ಸಿ, ಸೇರಿದಂತೆ ಅಡುಗೆ ಸಹಾಯಕರು ಪೋಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಾಜಾಥ ವಿಶೇಷ ಪ್ರಚಾರ ಆಂದೋಲನ
ಪಿಯು ಪರೀಕ್ಷೆ ಪಾರದರ್ಶಕ ರೀತಿಯಲ್ಲಿ ನಡೆಸುವಂತೆ ಡಿಸಿ ಸೂಚನೆ