ದಾವಣಗೆರೆ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿರುವ ನಲಿ-ಕಲಿ ವ್ಯವಸ್ಥೆ ಒಂದು ಅತ್ಯುತ್ತಮ ಬೋಧನೆ ವ್ಯವಸ್ಥೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು.
ಗುರುವಾರ ಕುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾನಗರ ರೋಟರಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಮ್ಮ ಸರ್ಕಾರಿ ಶಾಲೆಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಲ್ಪಸ್ವಲ್ಪ ಸಮಸ್ಯೆಗಳಿವೆ. ಈ ಹಂತದಲ್ಲಿರುವ ಶಿಕ್ಷಕರು ಅಪ್ ಗ್ರೇಡ್ ಆಗುವ ಅವಶ್ಯಕತೆ ಇದೆ. ಇದಕ್ಕಾಗಿ ನಾವು ಮಾಡೆಲ್ ಎಜುಕೇಶನ್ ಟ್ರೈನಿಂಗ್ ಪ್ರೋಗ್ರಾಮ್ ಅನ್ನು ಬರುವ ಶೈಕ್ಷಣಿಕ ವರ್ಷ ಜಾರಿ ಮಾಡುತ್ತಿದ್ದೇವೆ. ಈ ಯೋಜನೆಯಡಿ ನಮ್ಮ ಸರ್ಕಾರಿ ಶಾಲೆಯ ಎಲ್ಲ ಶಿಕ್ಷಕರು ವಿಶ್ವಾಸಾರ್ಹವಾಗಿ ಇಂಗ್ಲಿಷ್ ಮಾತನಾಡುವಂತಾಗಬೇಕು ಎಂದರು.
ಕುರ್ಕಿ ಸರ್ಕಾರಿ ಪ್ರೌಢಶಾಲೆಗೆ ದಾವಣಗೆರೆ ವಿದ್ಯಾನಗರ ರೋಟರಿ ಸಂಸ್ಥೆಯವರು ₹1.5 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಕಲ್ಪಿಸಿ ಕೊಟ್ಟಿರುವುದಕ್ಕೆ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಪರವಾಗಿ ರೋಟರಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.ಕುರ್ಕಿ ಪ್ರೌಢಶಾಲೆಗೂ ಒಂದು ವಿಜ್ಞಾನ ಪ್ರಯೋಗಾಲಯ ಮಾಡುವುದಕ್ಕೆ ಜಿಲ್ಲಾ ಪಂಚಾಯಿತಿಯಿಂದ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ ನ ಅಧ್ಯಕ್ಷ ಎಂ.ಎನ್.ಮಳವಳ್ಳಿ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ಇಆರ್‌ಎಂ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಆರ್.ಪ್ರವೀಣ್ ಚಂದ್ರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ರೋಟರಿ ಸಂಸ್ಥೆಯ ಎಂ.ಎನ್.ಬಿಲ್ಲಳ್ಳಿ, ಸಾಶಿಇ ಉಪ ನಿರ್ದೇಶಕ ಜಿ.ಕೊಟ್ರೇಶ್, ಇಆರ್‌ಎಂ ಗ್ರೂಪಿನ ಮಂಜುನಾಥ, ರಮಣಿ, ಎಸ್‌ಡಿಎಂಸಿ ಅಧ್ಯಕ್ಷ ಕೆ.ವಿ.ಓಂಕಾರಪ್ಪ, ಕೆ.ಜಿ.ವೇದಮೂರ್ತಿ, ಎಸ್.ಎನ್.ಮಲ್ಲಪ್ಪ, ಸಿ.ಕೆ.ಸಿದ್ದಪ್ಪ, ಚಂದ್ರಪ್ಪ, ಮಹೇಶ್ವರಪ್ಪ, ಎಚ್.ದಯಾನಂದ, ಚಂದ್ರಾಚಾರ್ಯ, ಶಿವಾನಂದಪ್ಪ, ಜಯಣ್ಣ, ವೀರಣ್ಣ, ಇನ್ನರ್ ವೀಲ್ ಕ್ಲಬ್ಬಿನ ನಿರ್ಮಲಮ್ಮ, ಭಾಗ್ಯಮ್ಮ, ಪ್ರಭಾರಿ ಮುಖ್ಯ ಶಿಕ್ಷಕಿ ಎಸ್.ಪಾರ್ವತಮ್ಮ, ಶಾಲಾ ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರಾದ ಚನ್ನಬಸಪ್ಪ, ಮಂಜುನಾಥಯ್ಯ, ಎಎಂ ಸಿದ್ದೇಶ್, ವಸಂತ್ ಕುಮಾರ್, ಕೆ.ಎಸ್.ರವಿ, ಜೆ.ಬಿ.ರಾಜ್, ಶಿಕ್ಷಕ ಸಿ.ಜಿ.ಜಗದೀಶ್ ಕೂಲಂಬಿ, ದೈಹಿಕ ಶಿಕ್ಷಕ ರಾಘವೇಂದ್ರ ಇತರರು ಇದ್ದರು. ಛಾಯಾಂಕ ಪ್ರಾರ್ಥಿಸಿದರು. - - -