ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ

KannadaprabhaNewsNetwork |  
Published : Sep 04, 2025, 01:01 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನಲಿ-ಕಲಿ ಪಾಠಕ್ರಮವು ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾಗದೆ, ಮಕ್ಕಳ ಕಲಿಕೆ ಪ್ರಕ್ರಿಯೆಯನ್ನು ಆನಂದಕರ ಹಾಗೂ ಸೃಜನಾತ್ಮಕವಾಗಿಸಲು ರೂಪುಗೊಂಡಿದೆ. ಪಾಠಬೋಧನೆಯ ಜೊತೆಗೆ ಈ ಪುಸ್ತಕದಲ್ಲಿ ಮಕ್ಕಳಿಗೆ ಬೇಕಾಗುವ ಎಲ್ಲಾ ಬೋಧನೆಗೆ ಸಿಗುವ ಎಲ್ಲಾ ವಿಷಯಗಳು ಇವೆ. ಹೀಗಾಗಿ, ರಚನೆ ಮಾಡುವದು ಕಠಿಣ ಕೆಲಸವಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳನಲಿ-ಕಲಿ ಪಾಠಕ್ರಮವು ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾಗದೆ, ಮಕ್ಕಳ ಕಲಿಕೆ ಪ್ರಕ್ರಿಯೆಯನ್ನು ಆನಂದಕರ ಹಾಗೂ ಸೃಜನಾತ್ಮಕವಾಗಿಸಲು ರೂಪುಗೊಂಡಿದೆ. ಪಾಠಬೋಧನೆಯ ಜೊತೆಗೆ ಈ ಪುಸ್ತಕದಲ್ಲಿ ಮಕ್ಕಳಿಗೆ ಬೇಕಾಗುವ ಎಲ್ಲಾ ಬೋಧನೆಗೆ ಸಿಗುವ ಎಲ್ಲಾ ವಿಷಯಗಳು ಇವೆ. ಹೀಗಾಗಿ, ರಚನೆ ಮಾಡುವದು ಕಠಿಣ ಕೆಲಸವಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.ತಾಲೂಕಿನ ಗೆದ್ದಲಮರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕಿ ಅಕ್ಷತಾ ಮಹಾದೇವಪ್ಪ ಕುಂದರಗಿ ಸಂಪಾದಿಸಿರುವ, ನಲಿಕಲಿ ಪಠ್ಯಾಧಾರಿತ ವಿಷಯಗಳ ಜ್ಞಾನದೀಪ ಸಮಗ್ರ ಕೈಪಿಡಿಯನ್ನು ಬಿಡುಗಡೆಮಾಡಿ ಮಾತನಾಡಿದರು. ಈ ಪುಸ್ತಕದಲ್ಲಿ ಸಾಮಾನ್ಯ ಜ್ಞಾನ. ಸಾಮಾನ್ಯ ಕನ್ನಡವನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿ ಒಳಗೊಂಡಿರುವಂತಹ ಬಾಲ್ಯದ ನೆನಪು ಮೆಲಕು ಹಾಕಿದರು. ಈ ಪುಸ್ತಕ ಉನ್ನತವಾದ ಹುದ್ದೆಯನ್ನು ಈ ರೀತಿಯ ಕೈಪಿಡಿಗಳು ಶಿಕ್ಷಕರಿಗೆ ಮಾರ್ಗದರ್ಶಕವಾಗುತ್ತವೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ ಬೆಳಗಲ್ ಮಾತನಾಡಿ, ಇಂದಿನ ತಲೆಮಾರಿನ ಮಕ್ಕಳಿಗೆ ತಿಳುವಳಿಕೆಯೊಂದಿಗೆ ಕ್ರಿಯಾತ್ಮಕ ಚಟುವಟಿಕೆ ಅಗತ್ಯ. ನಲಿಕಲಿ ತಂತ್ರವು ಅದರತ್ತ ದಾರಿ ತೋರಿಸುತ್ತದೆ. ಜ್ಞಾನದೀಪ ಕೈಪಿಡಿ ಶಿಕ್ಷಕರಿಗೆ ಪಾಠದ ಹಂತದಿಂದಲೇ ನಿರ್ವಹಣೆಗೆ ಸಹಾಯಕವಾಗಲಿದೆ, ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಯಾವುದೇ ಕಠಿಣ ಕಾರ್ಯವನ್ನು ಮಾಡಬಲ್ಲರು ಎಂಬುವದಕ್ಕೆ ಈ ಜ್ಞಾನದೀಪ ಅಂಕಲಿಪಿಯ ವೈಶಿಷ್ಟವೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇನ್ನಿತರ ಶಿಕ್ಷಕರು ಹಾಗೂ ಹಾಜರಿದ್ದ ವೃದ್ದರು ತಮ್ಮ ಮಾತಿನಲ್ಲಿ, ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಿಕ್ಷಕರು ಸತತವಾಗಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಬಿ.ವೈ.ಕವಡಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎನ್.ಎಸ್.ತುರಡಗಿ, ಶಿಕ್ಷಣ ಸಂಯೋಜಕರಾದ ಪಿ.ಎ.ಬಾಳಿಕಾಯಿ. ನಲಿ ಕಲಿ ನೋಡಲ್ ಅಧಿಕಾರಿ ಲತಾ ಮುದ್ದಾಪೂರ, ಶಿಕ್ಷಣ ಸಂಯೋಜಕರು ಢವಳಗಿ ವಲಯ ಡಿ.ವೈ.ಗುರಿಕಾರ, ಎಂ.ಜಿ.ವಾಲಿ, ಸಿದ್ದನಗೌಡ ಬಿಜ್ಜೂರ, ಪರಶುರಾಮ ವಾಲಿಕಾರ, ಬಿ.ಎಸ್.ಶೇಕಣ್ಣವರ, ಎನ್.ಬಿ.ಬಿರಾದಾರ, ಸಿ.ಆರ್.ಪಿ ಹಡಲಗೇರಿ, ಉಮಾಪತಿ ಚೌಧರಿ, ಕೆ.ಎಂ.ಇಬ್ರಾಹಿಂಪುರ, ಗೆದ್ದಲಮರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಹೆಚ್.ಬಿ.ಪಾತ್ರೋಟ, ಬಿ.ಹೆಚ್.ಪಾಟೀಲ್, ದೇವರಾಜ್ ಲಮಾಣಿ, ಟಾಕಪ್ಪ ಲಮಾಣಿ ,ಎಂ.ಹೆಚ್.ಕುಂದರಗಿ ನಿವೃತ್ತ ಶಿಕ್ಷಕ ಎನ್.ಆರ್.ದೊಡಮನಿ, ಎ.ಬಿ.ಬೆಳ್ಳಿಕಟ್ಟಿ, ಸಹ ಶಿಕ್ಷಕ ಎಂ.ಎಸ್.ಪಾಟೀಲ್, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು