ನಾಲ್ವಡಿ ದೂರದೃಷ್ಟಿಯ ಆಡಳಿತ ಇದ್ದಿದ್ದರೆ ರಾಮರಾಜ್ಯವಾಗುತ್ತಿತ್ತು

KannadaprabhaNewsNetwork |  
Published : Jan 28, 2025, 12:48 AM IST
3 | Kannada Prabha

ಸಾರಾಂಶ

ನಾಲ್ವಡಿ ಅವರ ಕಾರ್ಯಕ್ರಮಗಳನ್ನು ಸರಿಯಾಗಿ ಓದಿ, ತಿಳಿದು ಪಾರದರ್ಶಕವಾಗಿ ಹಾಗೂ ಆದರ್ಶವಾಗಿಟ್ಟುಕೊಂಡು ಹೋಗಿದ್ದರೆ ಕರ್ನಾಟಕ ರಾಮರಾಜ್ಯವಾಗುತ್ತಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಹೊಸ ಆಲೋಚನೆಗಳನ್ನು ಮಾಡುವಂತಹ ಅಗತ್ಯವಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯ, ದೂರದೃಷ್ಟಿಯ ಆಡಳಿತವನ್ನು ಮುಂದುವರೆಸಿದ್ದರೆ ಕರ್ನಾಟಕ ರಾಮರಾಜ್ಯ ಆಗುತ್ತಿತ್ತು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.ನಗರದ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಇತಿಹಾಸ ಅಧ್ಯಯನ ವಿಭಾಗ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠವು ಸೋಮವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಕುರಿತು ಪ್ರೊ.ವೈ.ಎಚ್. ನಾಯಕವಾಡಿ ಅವರು ಸಂಪಾದಿಸಿರುವ ಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.ನಾಲ್ವಡಿ ಅವರ ಕಾರ್ಯಕ್ರಮಗಳನ್ನು ಸರಿಯಾಗಿ ಓದಿ, ತಿಳಿದು ಪಾರದರ್ಶಕವಾಗಿ ಹಾಗೂ ಆದರ್ಶವಾಗಿಟ್ಟುಕೊಂಡು ಹೋಗಿದ್ದರೆ ಕರ್ನಾಟಕ ರಾಮರಾಜ್ಯವಾಗುತ್ತಿತ್ತು. ಅವರ ವಿಚಾರಧಾರೆಗಳು, ಕಾರ್ಯಕ್ರಮಗಳನ್ನು ಮುಂದುವರೆಸಿದ್ದರೆ ನಾವು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂದು ಅವರು ಹೇಳಿದರು.ನಾಲ್ವಡಿ ಅವರು ಮಾಡಿದ ಕೆಲಸಗಳು, ಕಾರ್ಯಗಳು ಇಂದಿಗೂ ಶಾಶ್ವತವಾಗಿ ಉಳಿದಿದೆ. ಆದರೆ, ಇಂದಿನ ಎಲ್ಲಾ ಸರ್ಕಾರಗಳು ಅವರ ಯೋಜನೆಗಳನ್ನು ಹೊಸ ಹೊಸ ಕಾರ್ಯಕ್ರಮಗಳಾಗಿ ಜಾರಿಗೆ ತಂದು, ಅದನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ವಿಷಾದಿಸಿದರು.ಮೈಸೂರಿನಲ್ಲಿರುವ ವಿಶ್ವವಿದ್ಯಾನಿಲಯಗಳು, ಆರೋಗ್ಯ ಕ್ಷೇತ್ರ ಹಾಗೂ ಮುಡಾವನ್ನು ಸಾರ್ಕಾರ ಇಲ್ಲದೆ ಇರುವ ಕಾಲದಲ್ಲೇ ನಾಲ್ವಡಿ ಸ್ಥಾಪಿಸಿದರು. ಮುಡಾ ಅಂದರೆ ಸರ್ಕಾರ ಅಲ್ಲ. ಸ್ವಂತವಾಗಿ ಪ್ರಾಧಿಕಾರದ ವತಿಯಿಂದಲೇ ಪಟ್ಟಣಗಳನ್ನು ನಿರ್ಮಾಣ ಮಾಡಿ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ನಿವೇಶನಗಳನ್ನು ವಿತರಿಸುವ ಸಂಸ್ಥೆ. ರೈತರ ಕಲ್ಯಾಣಕ್ಕಾಗಿ, ಆಹಾರ ಉತ್ಪಾದನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ತಂದರು ಎಂದರು.ಈ ಕಾರ್ಯಕ್ರಮವನ್ನು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು. ಕೃತಿಗಳ ಕುರಿತು ನಿವೃತ್ತ ಪ್ರಾಧ್ಯಾಪಕರಾದ ಡಾ.ಪಿ.ಪಿ. ಸಿದ್ಧಾಶ್ರಮ, ಪ್ರೊ.ಎ. ಸತ್ಯನಾರಾಯಣ, ಇತಿಹಾಸ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಕೆ. ಸದಾಶಿವ ಮಾತನಾಡಿದರು. ಇತಿಹಾಸ ವಿಭಾಗದ ಅಧ್ಯಕ್ಷ ಪ್ರೊ.ವೈ.ಎಚ್. ನಾಯಕವಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಡಾ.ಎನ್. ಸರಸ್ವತಿ ಇದ್ದರು.-----ಕೋಟ್...ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೆಲಸಗಳು ಹಾಗೂ ಸಾಧನೆಗಳು ಅಪಾರ. ಆದರೆ, ಅವರ ಸಾಧನೆಗಳನ್ನು ಉಲ್ಲೇಖಿಸದ ಬಹುಸಂಖ್ಯಾತ ಆಸ್ಥಾನಿಕ ವಿದ್ವಾಂಸರು ಹಾಗೂ ರಾಷ್ಟ್ರೀಯವಾದಿ ಇತಿಹಾಸಕಾರರು ನ್ಯಾಯವನ್ನು ಒದಗಿಸಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ವಿಶೇಷವಾಗಿ ಮೈಸೂರಿನ ಇತಿಹಾಸದಲ್ಲಿ ಅವರಿಗೆ ಅನ್ಯಾಯವಾಗಿದೆ. ದಲಿತರು, ಅಲ್ಪಸಂಖ್ಯಾತರ ಬಗ್ಗೆ ಅಪಾರವಾದ ಕಾಳಜಿ ಹೊಂದ್ದಿದ್ದರು ಹಾಗೂ ಪ್ರೋತ್ಸಾಹಿಸಿದ್ದರು. ಈ ಕಾರಣಕ್ಕಾಗಿಯೇ ಒಂದು ವರ್ಗದ ಇತಿಹಾಸಕಾರರು, ವಿದ್ವಾಂಸರು ಕರ್ನಾಟಕದ ಇತಿಹಾಸದಲ್ಲಿ ಹಾಗೂ ಮೈಸೂರಿನ ಚರಿತ್ರೆಯಲ್ಲಿ ಕಡೆಗಣಿಸಿದ್ದಾರೆ.- ಪ್ರೊ.ವೈ.ಎಚ್. ನಾಯಕವಾಡಿ, ಅಧ್ಯಕ್ಷ, ಇತಿಹಾಸ ವಿಭಾಗ, ಮೈಸೂರು ವಿವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ