ಕನ್ನಡಪ್ರಭ ವಾರ್ತೆ ಮಂಡ್ಯ/ಭಾರತೀನಗರ
ಮದ್ದೂರು ತಾಲೂಕು ಮೆಳ್ಳಹಳ್ಳಿ ಗ್ರಾಮದ ಶೆಡ್‌ವೊಂದರಲ್ಲಿ ಹೊರ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ವ್ಯಕ್ತಿಗಳಿಂದ ಅಕ್ರಮವಾಗಿ ಗುಂಪುಗೂಡಿ ನಮಾಜ್ ಮಾಡಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಗ್ರಾಮದ ಕರೀಂ ಎಂಬುವರಿಗೆ ಸೇರಿದ ಶೆಡ್‌ನಲ್ಲಿ ನಮಾಜ್ ಮಾಡಿರುವ ಆರೋಪ ಕೇಳಿಬಂದಿದೆ. ಸೆ.27ರಂದು ಹೊರ ಊರುಗಳಿಂದ ಹಲವಾರು ವ್ಯಕ್ತಿಗಳು ಗ್ರಾಮಕ್ಕೆ ಆಗಮಿಸಿ, ಶೆಡ್‌ನಲ್ಲಿ ಗುಂಪುಗೂಡಿರುವುದು. ಯಾವುದೇ ಅನುಮತಿ ಪಡೆಯದೆ ನಮಾಜ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮೆಳ್ಳಹಳ್ಳಿ ಗ್ರಾಮಸ್ಥರು ಭಾರತೀನಗರ ಗ್ರಾಪಂ ಪಿಡಿಒ ಅವರಿಗೆ ದೂರು ನೀಡಿದ್ದರು. ಸುಧಾ ಅವರು ಸ್ಥಳ ಪರಿಶೀಲನೆ ನಡೆಸಿ ಕರೀಂ ಎಂಬುವರಿಗೆ ನೋಟಿಸ್ ನೀಡಿರುವುದಾಗಿ ತಿಳಿದುಬಂದಿದೆ. ಮನೆ ನಿರ್ಮಾಣಕ್ಕೆಂದು ಅನುಮತಿ ಪಡೆದುಕೊಂಡು ಗೋದಾಮು ಮಾದರಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ನಮಾಜ್ ಮಾಡಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಅವರಿಗೆ ಎಚ್ಚರಿಕೆಯನ್ನೂ ನೀಡಿರುವುದಾಗಿ ಹೇಳಿದ್ದಾರೆ.ಬಿಗಿ ಪೊಲೀಸ್ ಬಂದೋಬಸ್ತ್:
ಜಿಲ್ಲೆಯ ವಿವಿಧೆಡೆಗಳಿಂದ ಮುಸ್ಲಿಂಮರು ನಮಾಜ್ ಮಾಡಲು ಕೆ.ಎಂ.ದೊಡ್ಡಿಗೆ ಆಗಮಿಸುತ್ತಿದ್ದು, ಇದನ್ನು ತಡೆಯಲು ಹಿಂದುಪರ ಸಂಘಟನೆಯ ಯುವಕರು ಮುಂದಾಗುತ್ತಿದ್ದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಕಳೆದ ಶುಕ್ರವಾರ ಮೆಳ್ಳಹಳ್ಳಿ 5ನೇ ನಂಬರ್ ಸೈಟ್‌ನಲ್ಲಿರುವ ಕರೀಂಸಾಬ್ ಎಂಬುವವರ ಮನೆಯಲ್ಲಿ 150 ಕ್ಕೂ ಹೆಚ್ಚು ಮಂದಿ ನಮಾಜ್ ಮಾಡಲು ಬಂದಿದ್ದರು. ಇದನ್ನು ಕಂಡ ಹಿಂದುಪರ ಸಂಘಟನೆಯ ಕಾರ್ಯಕರ್ತರು ಮತ್ತು ಯುವಕರು ಪೊಲೀಸ್ ವರಿಷ್ಠಾಧಿಕಾರಿಗೆ ವಿಷಯ ಮುಟ್ಟಿಸಿದ್ದರು. ಕೆ.ಎಂ.ದೊಡ್ಡಿ ಮತ್ತು ಮದ್ದೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ನಮಾಜ್ ಮಾಡುತ್ತಿದ್ದವರನ್ನು ವಾಪಸ್ ಕಳುಹಿಸಿ ಕೋಮು ಗಲಬೆಯನ್ನು ತಪ್ಪಿಸಿದ್ದರು.
ಈ ಹಿನ್ನೆಲೆಯಲ್ಲಿ ಅ.4 ರ ಶುಕ್ರವಾರವು ಸಹ ಜಿಲ್ಲೆಯ ವಿವಿಧ ಭಾಗಗಳಿಂದ ಮುಸ್ಲಿಂ ಆಗಮಿಸಬಹುದೆಂಬ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಬೆಳಗ್ಗೆಯಿಂದ ಸಂಜೆಯವರೆಗೂ ಸಾರ್ವಜನಿಕರ ಗುಂಪು ಸೇರದಂತೆ ಎಚ್ಚರ ವಹಿಸಿದ್ದರು.ಮಸೀದಿ, ನಮಾಜ್‌ಗೆ ಅವಕಾಶ ಬೇಡ: ಎಸ್.ಪಿ.ಸ್ವಾಮಿ ಮನವಿ
ಕೆ.ಎಂ.ದೊಡ್ಡಿಯಲ್ಲಿ ಮುಸ್ಲಿಂ ಜನಾಂಗಕ್ಕೆ ನಮಾಜ್ ಮಾಡುವುದಕ್ಕಾಗಲಿ ಅಥವಾ ಮಸೀದಿ ನಿರ್ಮಿಸುವುದಕ್ಕಾಗಲಿ ಅವಕಾಶ ನೀಡಬಾರದೆಂದು ಹಿಂದುಪರ ಸಂಘಟನೆಯೊಂದಿಗೆ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಪೊಲೀಸ್ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.ಇದುವರೆಗೂ ಯಾವುದೇ ರೀತಿಯ ಸಂಘರ್ಷಗಳಾಗಲಿ, ಗಲಭೆಯಾಗಲಿ ನಡೆದಿಲ್ಲ. ಪೊಲೀಸ್ ಇಲಾಖೆಯ ಮುನ್ನೆಚ್ಚರಿಕೆಯಿಂದ ಕೋಮುಗಲಭೆ ತಪ್ಪಿದೆ. ಎಂದು ಹೇಳಿದರು.
ಉಪ ತಹಸೀಲ್ದಾರ್ ಶಿವಲಿಂಗಯ್ಯ, ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್, ಹಾಗೂ ಗ್ರಾಪಂ ಅಧ್ಯಕ್ಷೆ ಸೌಭಾಗ್ಯ ರಾಮಣ್ಣ ಅವರಿಗೆ ಸಾರ್ವಜನಿಕರ ಸಹಿವುಳ್ಳ ಮನವಿ ಪತ್ರ ಸಲ್ಲಿಸಿದರು.ಸಾವಿರಕ್ಕೂ ಹೆಚ್ಚು ಹಿಂದುಪರ ಸಂಘಟನೆಯ ಮುಖಂಡರು, ಯುವಕರು, ಸಾರ್ವಜನಿಕರು ಪಕ್ಷಾತೀತವಾಗಿ ಸೇರಿದ್ದರು. ಇದನ್ನು ಕಂಡ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಗೌಡ, ಶಿವಕುಮಾರ್, ಶ್ರೀಧರ್, ಆನಂದ್ ಅವರು ಸ್ಥಳದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದರು.
ಮುಖಂಡರಾದ ಕರಡಕೆರೆ ಹನುಮಂತೇಗೌಡ, ಆಲಭುಜನಹಳ್ಳಿ ಹೇಮರಾಜು, ಅಣ್ಣೂರು ನವೀನ್, ಮನೋಹರ್, ಮೆಣಸಗೆರೆ ಗಿರೀಶ್, ಕೆ.ಟಿ.ಸುರೇಶ್, ವಿನು, ವಿಜಯ್‌ಕುಮಾರ್, ಮೆಡಿಕಲ್ ಗಿರೀಶ್, ಕಂಟ್ರಾಕ್ಟರ್ ಗಿರಿ, ಸುರೇಶ್, ಮನು ಇತರರಿದ್ದರು.