ಮನೆ ಕಳ್ಳತನ ಪ್ರಕರಣ ಭೇದಿಸಿದ ನಂದಗಡ ಪೊಲೀಸರು

KannadaprabhaNewsNetwork |  
Published : Sep 24, 2026, 03:00 AM IST
ಖಾನಾಪುರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಖಾನಾಪುರ ಕಳೆದ ಎರಡು ತಿಂಗಳಲ್ಲಿ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಹಾಗೂ ಕಿತ್ತೂರು ಠಾಣೆ ವ್ಯಾಪ್ತಿಯ ಒಂದು ಮನೆ ಕಳ್ಳತನ ಪ್ರಕರಣಗಳನ್ನು ನಂದಗಡ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹1.42 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೈಲಹೊಂಗಲ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಕಳೆದ ಎರಡು ತಿಂಗಳಲ್ಲಿ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಹಾಗೂ ಕಿತ್ತೂರು ಠಾಣೆ ವ್ಯಾಪ್ತಿಯ ಒಂದು ಮನೆ ಕಳ್ಳತನ ಪ್ರಕರಣಗಳನ್ನು ನಂದಗಡ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹1.42 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೈಲಹೊಂಗಲ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಹೇಳಿದರು.

ನಂದಗಡ ಠಾಣೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗ್ಯನಗರದಲ್ಲಿ ಜುಲೈನಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಸುಮಾರು ಒಂದು ತಿಂಗಳ ಕಾಲ ನಡೆಸಿದ ತನಿಖೆಯ ಬಳಿಕ ನಾಲ್ವರನ್ನು ಬಂಧಿಸಲಾಗಿದೆ ಎಂದರು.

ಬಂಧಿತರನ್ನು ಶಿಗ್ಗಾಂವ ತಾಲೂಕಿನ ತಡಸ ಗ್ರಾಮದ, ಸದ್ಯ ಕಿತ್ತೂರಿನಲ್ಲಿ ವಾಸವಿದ್ದ ಹಣಮಂತ ಕೊಂಚಿಕೊರವರ, ಧಾರವಾಡ ತಾಲೂಕಿನ ವೆಂಕಟಾಪುರದ ಶಂಕರ ಕರಿ, ಧಾರವಾಡದ ಸಿದ್ಧೇಶ್ವರ ನಗರದ ಮಂಜುನಾಥ ಬಾದಗಿ ಹಾಗೂ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಹಣಮಂತ ದುರ್ಗಮುರಗಿ ಎಂದು ಗುರುತಿಸಲಾಗಿದೆ. ಜುಲೈನಲ್ಲಿ ಭಾಗ್ಯನಗರದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಸೀರೆಗಳು ಹಾಗೂ ₹96 ಸಾವಿರ ನಗದು ಕಳವು ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನಕ್ಕೆ ಬಳಸಿದ ವಸ್ತುಗಳು ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಂದಗಡ ಠಾಣೆ ಇನ್‌ಸ್ಪೆಕ್ಟರ್ ರವಿಕುಮಾರ ಧರ್ಮಟ್ಟಿ, ಎಎಸ್‌ಐ ಎಸ್.ಬಿ. ಬಳ್ಳಾರಿ ಹಾಗೂ ಸಿಬ್ಬಂದಿ ಶಿವು ತುರಮಂದಿ, ನೀಲಕಂಠ ಚಂದರಗಿ, ವಿವೇಕ ಒಡೆಯರ, ಯಾಕೂಬ್ ನಗಾರ್ಚಿ, ಸಚಿನ್ ಪಾಟೀಲ ಮತ್ತು ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತರ ಕರ್ನಾಟಕ ನೀರಾವರಿಗೆ ₹50 ಸಾವಿರ ಕೋಟಿ ನೀಡಲು ಬೆಲ್ಲದ ಆಗ್ರಹ
ಉತ್ತರ ಕರ್ನಾಟಕ ನೀರಾವರಿಗೆ 50 ಸಾವಿರ ಕೋಟಿಗೆ ಅರವಿಂದ ಬೆಲ್ಲದ ಆಗ್ರಹ