ನಂದಿ ಕೂಗು ಅಭಿಯಾನದಿಂದ ಬೆಂಗಳೂರಿಗೆ ಪಾದಯಾತ್ರೆ

KannadaprabhaNewsNetwork |  
Published : Aug 25, 2025, 01:00 AM IST
ನಂದಿ ಕೂಗು ಅಭಿಯಾನದ ವತಿಯಿಂದ ವಿಜಯಪುರದಿಂದ ಬೆಂಗಳೂರಿಗೆ ಪಾದಯಾತ್ರೆ | Kannada Prabha

ಸಾರಾಂಶ

ವಿಜಯಪುರ: ಬಸವ ತತ್ವದ ವೈಜ್ಞಾನಿಕ ಚಿಂತನೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಂದಿ ಕೂಗು ಅಭಿಯಾನದಿಂದ ಆ.23 ರಂದು ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಬೆಂಗಳೂರವರೆಗೆ ಪಾದಯಾತ್ರೆ ಪ್ರಾರಂಭಿಸಿದರು.

ವಿಜಯಪುರ: ಬಸವ ತತ್ವದ ವೈಜ್ಞಾನಿಕ ಚಿಂತನೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಂದಿ ಕೂಗು ಅಭಿಯಾನದಿಂದ ಆ.23 ರಂದು ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಬೆಂಗಳೂರವರೆಗೆ ಪಾದಯಾತ್ರೆ ಪ್ರಾರಂಭಿಸಿದರು.

ಪಾದಯಾತ್ರೆಯ ನೇತೃತ್ವ ವಹಿಸಿದ ಬಸವರಾಜ ಬಿರಾದಾರ ಮಾತನಾಡಿ, ಗ್ರಾಮದಲ್ಲಿ ನಂದಿ ಸಂಪತ್ತು ಹೆಚ್ಚಾದರೆ ಬಸವ ತತ್ವ ಹಾಗೂ ಬಸವ ಸಂಸ್ಕೃತಿ ಉಳಿಯುತ್ತದೆ ಎಂದು ಅರ್ಥ. ಇಲ್ಲವಾದರೆ‌ ನಾಶ ವಾಗುತ್ತಿದೆ ಎಂದು ಅರ್ಥ. ಏಕೆಂದರೆ ಬಸವ ತತ್ವ ನಂದಿ ಸಂಪತ್ತಿನ ಜೀವಂತಿಕೆ ಮೇಲೆ ನಿಂತಿದೆ ಎಂಬುದನ್ನು ಇಂದಿನ ವಿಜ್ಞಾನ ಸ್ಪಷ್ಟಪಡಿಸುತ್ತಿದೆ. ಅದಕ್ಕಾಗಿ ತೈಲ ತತ್ವದ ಬದಲು ಬಸವ ತತ್ವಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತಂದು ಗ್ರಾಮಗಳನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳುವ ಅವಶ್ಯಕತೆ ಬಂದಿದೆ. ನಂದಿ ಸಂಪತ್ತು ಹೆಚ್ಚಿಸಿ ಬಸವ ತತ್ವ ಉಳಿಸಲು ಪ್ರಯತ್ನಿಸಿದರೆ ಪಂಚ ಮಹಾಭೂತಗಳು ಶುದ್ಧವಾಗಿ ಉಳಿಯುವುದರ ಜೊತೆಗೆ ದೈವಿಕ‌ ಶಕ್ತಿ ವೃದ್ಧಿಯಾಗಲಿದೆ ಎಂದರು.

ನಗರದ ಸಿದ್ಧೇಶ್ವರ ದೆವಸ್ಥಾನದ ಮುಂದೆ ಜರುಗಿದ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿಜ್ಜರಗಿ, ಯತ್ನಾಳ, ಬಾಬಾನಗರ ಹಾಗೂ ಇತರ ಗ್ರಾಮಗಳ ಜೋಡೆತ್ತಿನ ರೈತರು ಭಾಗವಹಿಸಿದ್ದರು. ಪ್ರಮುಖರಾದ ಅರವಿಂದ ಕವಲಗಿ, ಅಭಿಷೇಕ ಬಿರಾದಾರ, ಉದಯ ಯಾಳವಾರ, ಸಂಗಮೇಶ ಕಾಮನ್ನವರ, ಶ್ರೀಶೈಲ ಉಟಗಿ, ರಾಜು ದಳವಾಯಿ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!