ನ್ಯಾನೊ ಯೂರಿಯಾ ಗೊಬ್ಬರ ಕೃಷಿ ಭೂಮಿಗೆ ವರದಾನ: ಸುಜಾತಾ

KannadaprabhaNewsNetwork |  
Published : Aug 29, 2025, 01:00 AM IST
28ಕೆಕೆಡಿಯು2. | Kannada Prabha

ಸಾರಾಂಶ

ಕಡೂರು, ಮಣ್ಣಿನ ಸ್ವತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ಸುಲಭ ಬಳಕೆಗೆ ಯೋಗ್ಯವಾದ ನ್ಯಾನೊ ಯೂರಿಯಾ ಗೊಬ್ಬರ ಕೃಷಿ ಭೂಮಿಗೆ ವರದಾನವಾಗಲಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ಎಚ್.ಎಲ್. ಸುಜಾತಾ ಹೇಳಿದರು.

- ರಾಷ್ಟ್ರೀಯ ಭದ್ರತಾ ಯೋಜನೆಯಡಿ ನ್ಯಾನೋ ಯೂರಿಯಾ, ಡಿಎಪಿ ಬಳಕೆ ಪ್ರಾತ್ಯಕ್ಷಿಕೆ

ಕನ್ನಡಪ್ರಭ ವಾರ್ತೆ, ಕಡೂರು

ಮಣ್ಣಿನ ಸ್ವತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ಸುಲಭ ಬಳಕೆಗೆ ಯೋಗ್ಯವಾದ ನ್ಯಾನೊ ಯೂರಿಯಾ ಗೊಬ್ಬರ ಕೃಷಿ ಭೂಮಿಗೆ ವರದಾನವಾಗಲಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ಎಚ್.ಎಲ್. ಸುಜಾತಾ ಹೇಳಿದರು.

ತಾಲೂಕಿನ ಸರಸ್ವತಿಪುರ ಗೇಟ್ ಬಳಿ ರೈತ ಚಂದ್ರಪ್ಪ ಅವರ ರಾಗಿ ಹೊಲದಲ್ಲಿ ಗುರುವಾರ ಕೃಷಿ ಇಲಾಖೆ ಯಿಂದ ರಾಷ್ಟ್ರೀಯ ಭದ್ರತಾ ಯೋಜನೆಯಡಿ ನ್ಯಾನೋ ಯೂರಿಯಾ, ಡಿಎಪಿ ಬಳಕೆ ಪ್ರಾತ್ಯಕ್ಷಿಕೆ ಯಲ್ಲಿ ರೈತರಿಗೆ ಅರಿವು ಮೂಡಿಸಿ ಮಾತನಾಡಿದರು.

ಹರಳು ರೂಪದ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ದ್ರಾವಣ ಮಾರುಕಟ್ಟೆಯಲ್ಲಿ ಲಭ್ಯವಿದೆ. ಯೂರಿಯಾ ಗೊಬ್ಬರಕ್ಕೆ ರೈತರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ಯಲ್ಲಿ ದ್ರವ ರೂಪದ ನ್ಯಾನೋ ಯೂರಿಯಾ ಬಳಕೆ ಮಾಡಬಹುದು ಎಂದರು.ಬಯಲುಸೀಮೆ ತಾಲೂಕಿನ ಭಾಗದಲ್ಲಿ ಬಹುತೇಕ ಜಮೀನಿನಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಹಸಿರೆಲೆ ಗೊಬ್ಬರ ಬಳಸದೆ ಇರುವ ಜಮೀನು ಸಾಕಷ್ಟು ಕಂಡು ಬಂದಿದೆ. 0.4 ರಷ್ಟು ಕಡಿಮೆ ಇರುವ ಸಾವ ಯವ ಇಂಗಾಲದ ಕೊರತೆ ಕಾಣುತ್ತಿದೆ. ಇದರಿಂದ ವೈಜ್ಞಾನಿಕವಾಗಿ ಬಿತ್ತನೆಗೆ ಯೋಗ್ಯವಲ್ಲದ ಪ್ರದೇಶ ವೆಂದು ಗುರುತಿಸಲಾಗುತ್ತದೆ. ಮಣ್ಣಿನ ಸತ್ವ ಹೆಚ್ಚಿಸಿಕೊಳ್ಳಲು 0.5ಕ್ಕೂ ಹೆಚ್ಚು ಸಾಂದ್ರತೆ ಮಣ್ಣಿನ ಸತ್ವ ಕಾಪಾಡಿದಾಗ ಉತ್ತಮ ಪೈರನ್ನು ಕಾಪಾಡಬಹುದು. ಹಸಿರೆಲೆ ಗೊಬ್ಬರ ಬಳಕೆ ಪ್ರಮಾಣ ಕಡಿಮೆ ಯಾಗಿರುವ ಪರಿಣಾಮ ತಾಲೂಕಿನಲ್ಲಿ ಮಣ್ಣಿನಲ್ಲಿ ಶಕ್ತಿ ಕಳೆದುಕೊಂಡಂತಾಗಿದೆ. ಇದಕ್ಕೆ ರೈತರು ಆಸ್ಪದ ನೀಡದಂತೆ ಕಾಲಕ್ಕೆ ಅನುಗುಣವಾಗಿ ಮಣ್ಣಿನ ಸತ್ವ ಹೆಚ್ಚಿಸಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ಹಸಿರೆಲೆ ಸಾವಯವ ಗೊಬ್ಬರದ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇಲಾಖೆಯಿಂದಲೇ ನ್ಯಾನೋ ಯೂರಿಯಾ ಗೊಬ್ಬರ ಬಳಕೆ ಬಗ್ಗೆ ತಾಲೂಕಿನಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆಯಬೇಕು. ಹೋಬಳಿ ಭಾಗಗಳಲ್ಲಿ ಪೂರಕ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ತಾಲೂಕು ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಎಂ. ಮಾತನಾಡಿ, ರೈತರಿಂದಲೇ ಯೂರಿಯಾ ಗೊಬ್ಬರದ ಬೇಡಿಕೆ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಉತ್ತಮ ಬೆಳೆ ಕಾಪಾಡಬಹುದು. ಇದರ ಬಳಕೆ ಹಲವಾರು ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈಗಾಗಲೇ ಮಲೆನಾಡು ಭಾಗಗಳಲ್ಲಿ ಹೆಚ್ಚು ಬಳಕೆ ಯಾಗುತ್ತಿರುವ ನ್ಯಾನೋ ಯೂರಿಯಾ ಗೊಬ್ಬರ ಬಯಲುಸೀಮೆ ಭಾಗದ ರೈತರು ಹೆಚ್ಚು ಬಳಸುವಂತೆ ಇಲಾಖೆಯಿಂದ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಒಂದು ಎಕರೆಗೆ 500 ಎಂ.ಎಲ್.ನಷ್ಟು ನ್ಯಾನೋ ಯೂರಿಯಾ ಗೊಬ್ಬರ ಅವಶ್ಯಕತೆ ಇದ್ದು, ಡ್ರೋನ್ ಸಹಾಯದಿಂದ ಬಳಕೆ ಮಾಡುವುದಾದರೆ 10 ಲೀ ನೀರಿಗೆ 500 ಎಂ.ಎಲ್. ನ್ಯಾನೋ ಯೂರಿಯಾ ಬಳಕೆ ಯಾಗಲಿದೆ. ಕ್ಯಾನ್‌ಗಳ ಬ್ಯಾಟರಿ ಅಪರೇಟಿಂಗ್ ವಿಧಾನದಲ್ಲಿ ಬಳಸುವುದಾದರೆ 1.ಲೀ ನೀರಿಗೆ 4 ಎಂ.ಎಲ್. ನ್ಯಾನೋ ಯೂರಿಯಾ ದ್ರಾವಣ ಸಿಂಪಡಿಸಬಹುದು ಎಂದು ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಮಾಹಿತಿ ನೀಡಿದರು.

ಆನಂತರ ಡ್ರೋನ್ ಸಹಾಯದಿಂದ ನ್ಯಾನೋ ಯೂರಿಯಾ ದ್ರಾವಣ ಸಿಂಪಡಿಸಲಾಯಿತು. ಇಪ್ಕೋ ಕಂಪನಿ ಸಂಯೋಜಕ ಅತಾವುಲ್ಲಾ ಡ್ರೋನ್ ಸಹಾಯದಿಂದ ನ್ಯಾನೋ ಯೂರಿಯಾ ದ್ರಾವಣ ಬಳಕೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಉಪ ನಿರ್ದೇಶಕಿ ಹಂಸವೇಣಿ, ಸಹಾಯಕ ನಿರ್ದೇಶಕಿ ಉಷಾ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ರುದ್ರೇಗೌಡ, ಸರಸ್ವತಿಪುರ ಗ್ರಾಪಂ ಅಧ್ಯಕ್ಷ ಪದ್ಮನಾಭ್, ಗ್ರಾಪಂ ಮಾಜಿ ಅಧ್ಯಕ್ಷ ಸಿ.ವಿ. ಆನಂದ್, ದಿವಾಕರ್, ಹರೀಶ್‌ಗೌಡ, ಮಂಜುನಾಥ್, ಕೃಷಿಕ ಸಮಾಜದ ನಿರ್ದೇಶಕ ವಡೇರಹಳ್ಳಿ ಅಶೋಕ್, ಮಾಚಗೊಂಡನಹಳ್ಳಿ ಅಶೋಕ್, ಸಮೃದ್ದಿ ಕೃಷಿ ಕೇಂದ್ರದ ಮಧು, ತಾಂತ್ರಿಕ ಸಿಬ್ಬಂದಿ ಹರೀಶ್, ಶರತ್, ಇಲಾಖೆ ಸಿಬ್ಬಂದಿ ಇದ್ದರು.28ಕೆಕೆಡಿಯು2.

ಕಡೂರು ತಾಲೂಕಿನ ಸರಸ್ವತಿಪುರ ಗೇಟ್ ಬಳಿ ರಾಗಿ ಹೊಲದ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ನ್ಯಾನೋ ಯೂರಿಯಾ ಮತ್ತು ಡಿಎಪಿ ಬಳಕೆ ಪ್ರಾತ್ಯಕ್ಷಿಕೆಯಲ್ಲಿ ರೈತರಿಗೆ ಅರಿವು ಮೂಡಿಸಲಾಯಿತು. ಕೃಷಿ ಜಂಟಿ ನಿರ್ದೇಶಕಿ ಎಚ್.ಎಲ್. ಸುಜಾತ, ಹಂಸವೇಣಿ, ಉಷಾ, ಅಶೋಕ್, ರುದ್ರೇಗೌಡ, ಸಿ.ವಿ. ಆನಂದ್, ದಿವಾಕರ್ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!