ನಾಪೋಕ್ಲು ಬ್ಲೂ, ಯವಕಪಾಡಿ ಮರಂದೋಡ, ಕುಂಜಿಲ ತಂಡಗಳ ಮುನ್ನಡೆ

KannadaprabhaNewsNetwork |  
Published : Mar 30, 2026, 03:30 AM IST
ಮುನ್ನಡೆ | Kannada Prabha

ಸಾರಾಂಶ

ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ಅಂತರ ಗ್ರಾಮ ಹಾಕಿ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ನಾಪೋಕ್ಲು ಬ್ಲೂ, ಯವಕಪಾಡಿ ಮರಂದೋಡ , ಕುಂಜಿಲ ಹಾಗೂ ನಾಪೋಕ್ಲು ಬ್ಲೂ ತಂಡಗಳು ಮುನ್ನಡೆ ಸಾಧಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ಅಂತರ ಗ್ರಾಮ ಹಾಕಿ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ನಾಪೋಕ್ಲು ಬ್ಲೂ, ಯವಕಪಾಡಿ ಮರಂದೋಡ , ಕುಂಜಿಲ ಹಾಗೂ ನಾಪೋಕ್ಲು ಬ್ಲೂ ತಂಡಗಳು ಮುನ್ನಡೆ ಸಾಧಿಸಿದವು.

ದೊಡ್ಡ ಪುಲಿಕೋಟು ಮತ್ತು ಯವಕಪಾಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಯವಕಪಾಡಿ ತಂಡವು ದೊಡ್ಡಪುಲಿಕೋಟು ತಂಡದ ವಿರುದ್ಧ 3- 1 ಅಂತರದಿಂದ ಜಯ ಸಾಧಿಸಿ ಮುನ್ನಡೆ ಗಳಿಸಿತು. ದೊಡ್ಡ ಪುಲಿಕೋಟು ಪರವಾಗಿ ಅನೀಶ್. ಯವಕಪಾಡಿ ತಂಡ ಪರವಾಗಿ ದಿಲನ್ , ಹೇಮಂತ್ , ಬೋಪಣ್ಣ ತಲಾ ಒಂದೊಂದು ಗೋಲನ್ನು ಗಳಿಸಿದರು.ಮರಂದೊಡ ಮತ್ತು ನಾಲಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮರಂದೊಡ ತಂಡವು ನಾಲಡಿ ತಂಡದ ವಿರುದ್ಧ 2-0 ಅಂತರದ ಜಯ ಸಾಧಿಸಿತು. ಮರಂದೋಡ ತಂಡದ ಪರವಾಗಿ ಆಟಗಾರರಾದ ಬಿದ್ದಪ್ಪ ಮತ್ತು ಚಿನ್ನಪ್ಪ ತಲಾ ಒಂದು ಗೋಲು ಗಳಿಸಿದರು.ಪೇರೂರು ಮತ್ತು ಕುಂಜಿಲ.ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂಜಿಲ ತಂಡವು 4-0 ಅಂತರದಿಂದ ಪೇರೂರು ತಂಡದ ವಿರುದ್ಧ ಜಯ ಸಾಧಿಸಿತು. ಕುಂಜಿಲ ತಂಡದ ಆಟಗಾರರಾದ ನಾಚಪ್ಪ, ಕಾರ್ಯಪ್ಪ, ಕಿರಣ್ ಮತ್ತು ಡಿವಿನ್ ತಲಾ ಒಂದು ಗೋಲು ಗಳಿಸಿದರು.ಬಲ್ಲಮಾವಟಿ ವೈಟ್ ಮತ್ತು ನಾಪೋಕ್ಲು (ಬ್ಲೂ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಎ ತಂಡ ಭರ್ಜರಿ ಏಳು ಗೋಲುಗಳ ಜಯ ಸಾಧಿಸಿತು. ಕಳೆದ ವರ್ಷದ ಚಾಂಪಿಯನ್ ಬಲ್ಲಮಾವಟಿ ವೈಟ್ ತಂಡ ಯಾವುದೇ ಗೋಲು ಗಳಿಸಲು ಶಕ್ತವಾಗಿಲ್ಲ ನಾಪೋಕ್ಲು ಪರವಾಗಿ ಆಕಾಶ್, ಪುನೀತ್, ನಾಚಪ್ಪ, ಅವನಿಶ್, ಕಾಳಪ್ಪ,

ಸುಬ್ರಮಣಿ, ಮತ್ತು ನಿರುಪ್ ತಲಾ ಒಂದೊಂದು ಗೋಲನ್ನು ಪೇರಿಸಿದರು.ಬೇತು ಮತ್ತು ನಾಪೋಕ್ಲು ಬ್ಲೂ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಬ್ಲೂ ತಂಡವು ಬೇತು ತಂಡದ ವಿರುದ್ಧ 3 -2 ಅಂತರದಿಂದ ಗೆಲುವು ಸಾಧಿಸಿತು.ದಿನದ ಮೊದಲ ಪಂದ್ಯವನ್ನು ಉದ್ಘಾಟಿಸಿದ ಉದ್ಯಮಿ, ದಾನಿ ಹಾಗೂ ಪಂದ್ಯಾವಳಿಯ ಪ್ರಾಯೋಜಕರಾದ ಎಡಿಕೇರಿ ಪ್ರಸನ್ನ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆ ಪ್ರಸಿದ್ಧಿ ಪಡೆದಿದೆ. ಈ ಕ್ರೀಡೆಯು ಎಲ್ಲಾ ಸಮಾಜ ಬಾಂಧವರನ್ನುಒಗ್ಗೂಡಿಸುತ್ತದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾಕಿ ಕ್ರೀಡೆ ನಡೆಯುತ್ತಿದ್ದರೂ ಬಲ್ಲಮಾವಟಿ ಗ್ರಾಮದಲ್ಲಿ 10 ಗ್ರಾಮಗಳ ಕ್ರೀಡಾಪಟುಗಳನ್ನು ಒಗ್ಗೂಡಿಸಿ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಈ ಕ್ರೀಡಾಕೂಟ ಜನಾಂಗಬಾಂಧವರು ಒಗ್ಗೂಡಿಸಲು ಸಹಕಾರಿಯಾಗಿದೆ ಎಂದರು.ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಮತ್ತು ಪದಾಧಿಕಾರಿಗಳು ಹಾಗೂ ನಿರ್ದೇಶಕರು ಮತ್ತು ಕ್ರೀಡಾ ಪ್ರೇಮಿಗಳು ಪಾಲ್ಗೊಂಡಿದ್ದರು.

ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು. ಟೂರ್ನಿ ಡೈರೆಕ್ಟರ್ ಕರವಂಡ ಅಪ್ಪಣ್ಣ, ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಚೈಯಂಡ ಅಪ್ಪಚ್ಚು, ಪಟ್ರಪ೦ಡ ಮಂದಣ್ಣ, ಕೊಳುವಂಡ ಚಂಗಪ್ಪ, ಕುಪ್ಪಂಡ ದಿಲನ್, ಅನ್ನಡಿಯ೦ಡ ಪೊನ್ನಪ್ಪ , ತಾಂತ್ರಿಕ ಸಮಿತಿ ವಿನೋದ್ (ಜೆಸಿಬಿ) ಇವರು ನಿರ್ವಹಿಸಿದರು.

---------------------------------

ಇಂದಿನ ಪಂದ್ಯಗಳು9 ಗಂಟೆಗೆ ಬೇತು- ನೆಲಜಿ10 ಗಂಟೆಗೆ ಕೊಳಕೇರಿ -ಯವ ಕಪಾಡಿ11 ಗಂಟೆಗೆ ಬಲ್ಲಮಾವಟಿ ಬ್ಲೂ - ಮರಂದೋಡ12 ಗಂಟೆಗೆ ಬಲ್ಲಮಾವಟಿ ವೈಟ್ - ಕುಂಜಿಲ1 ಗಂಟೆಗೆ ಪೇರೂರು - ನಾಪೋಕ್ಲು-ಎ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ
ಸಮಾಜದ ಎಲ್ಲ ರಂಗಗಳಲ್ಲೂ ಸಶಕ್ತರಾಗುತ್ತಿರುವ ಮಹಿಳೆಯರು