ಮೇಕೇರಿರ, ಕುಲ್ಲೇಟಿರ ತಂಡಗಳಿಗೆ ಭರ್ಜರಿ ಮುನ್ನಡೆ

KannadaprabhaNewsNetwork |  
Published : Apr 25, 2026, 03:15 AM IST
ಚೇನಂಡ ಕಪ್ ಲಾಂಚನ | Kannada Prabha

ಸಾರಾಂಶ

ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಚೇನಂಡ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ಮೇಕೇರಿರ ಹಾಗೂ ಕುಲ್ಲೇಟಿರ ಎರಡು ತಂಡಗಳು ಭರ್ಜರಿ ಜಯ ಗಳಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ

ಹಾಕಿ ಉತ್ಸವ ಚೇನಂಡ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ಮೇಕೇರಿರ ಹಾಗೂ ಕುಲ್ಲೇಟಿರ ಎರಡು ತಂಡಗಳು ಭರ್ಜರಿ ಜಯ ಗಳಿಸಿದವು.

ಮೇಕೇರಿರ ತಂಡವು ಕಾಡ್ಯಮಾಡ ವಿರುದ್ಧ 5-0 ಅಂತರದಿಂದ ಹಾಗೂ ಕುಲ್ಲೇಟಿರ ಆತಿಥಿಯಾ ತಂಡ ಚೇನಂಡ ವಿರುದ್ಧ 5 -0 ಅಂತರದಿಂದ ಜಯ ಗಳಿಸಿದವು. ಪರದಂಡ ಮತ್ತು ಐಚೆಟ್ಟಿರ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದಲ್ಲಿ ಎರಡೂ ತಂಡಗಳು ಒಂದೊಂದು ಗೋಲು ಗಳಿಸಿದವು .ಬಳಿಕ ಗೆಲುವಿಗಾಗಿ ಟೈಬ್ರೇಕರ್‌ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್ ನಲ್ಲಿ ಪರದಂಡ ಐಚೆಟ್ಟಿರ ವಿರುದ್ಧ 5-4 ಅಂತರದಿಂದ ಜಯ ಗಳಿಸಿತು. ಇಟ್ಟಿರ ಮತ್ತು ಮೇರಿಯಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು 2-2 ಗೋಲು ಗಳಿಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಇಟ್ಟಿರ ಮೇರಿಯಂಡ ವಿರುದ್ಧ 2-1ರಿಂದ ಜಯ ಸಾಧಿಸಿತು.ಉಳಿದಂತೆ ಮಚ್ಚಾರಂಡ, ಬೊಳ್ಳೆ ಪಂಡ ವಿರುದ್ಧ 3-2ರಿಂದ, ಪಳಂಗಂಡ , ಕಾಂಡಂಡ ವಿರುದ್ಧ 1-0ಯಿಂದ, ಪೆಮ್ಮಂಡ, ಮುರುವಂಡ ವಿರುದ್ಧ 1-0ಯಿಂದ, ಚೇಂದೀರ, ಕೊಂಗಂಡ ವಿರುದ್ಧ 2-1ರಿಂದ, ಸಣ್ಣುವಂಡ, ಬೊವ್ವೇರಿಯಂಡ ವಿರುದ್ಧ 3-1ರಿಂದ, ಮಂಡೆಪಂಡ, ಪಟ್ಟಚೆರವಂಡ ವಿರುದ್ಧ 4- 0 ಅಂತರದಿಂದ ಜಯ ಗಳಿಸಿತು.

ಇಂದಿನ ಪಂದ್ಯಗಳು:

ಮೈದಾನ1

8.30 ಕ್ಕೆ ಚೇಂದಂಡ v/s ಪಾಡೆಯಂಡ 9.30 ಕ್ಕೆ ಕೊಲ್ಲೀರ v/s ನೆಲ್ಲಮಕ್ಕಡ

10.30ಕ್ಕೆ

ಇಟ್ಟೀರ v/s ಮಚ್ಚಾರಂಡ 11.30ಕ್ಕೆ ಬಲ್ಲಚಂಡ v/s ಮೂಕೊಂಡ 12.30ಕ್ಕೆ ಚೇಂದೀರ v/s ಮಂಡೇಪಂಡ 1.30ಕ್ಕೆ ಪುಲ್ಲಂಗಡ v/s ಕೂತಂಡ

ಮೈದಾನ 29ಕ್ಕೆ ಚೆಪ್ಪುಡಿರ v/s ಬೋಟೋಳಂಡ 10 ಕ್ಕೆ ಪರದಂಡ v/s ಮೇಕೇರಿರ 11ಕ್ಕೆ ಕುಪ್ಪಂಡ (ಕೈಕೇರಿ) v/s ಕಂಬೀರಂಡ 12ಕ್ಕೆ ಅರಮಣಮಾಡ v/s ಮುಕ್ಕಾಟಿರ (ಹರಿಹರ) 1ಕ್ಕೆ ಕೋಳೇರ v/s ಸೋಮೆಯಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಜಿಲ್ಲೆ: ಫಲಿತಾಂಶ ಹೆಚ್ಚಳ, 2ನೇ ಸ್ಥಾನ
ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‌ - ಶೇ 100 ಸಾಧನೆ